ಕೋವಿಡ್‌ ಲಸಿಕೆ ಕೊರತೆ: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌

ನವದೆಹಲಿ, ಜೂ. 05: ಕೊರೊನಾ ಸೋಂಕಿನ ಎರಡನೇ ಕೊರೊನಾ ಅಲೆ ಕಾಣಿಸಿಕೊಂಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ದೆಹಲಿ ಹೈಕೋರ್ಟ್, ನಡುವೆ ದೇಶಾದ್ಯಂತ ಲಸಿಕೆ ಕೊರತೆ ಉಂಟಾಗಿರುವ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಸಹಯೋಗದೊಂದಿಗೆ ಭಾರತದ ಪ್ಯಾನೇಸಿಯಾ ಬಯೋಟೆಕ್‌ ಕೋವಿಡ್‌ -19 ಲಸಿಕೆ ಸ್ಪುಟ್ನಿಕ್ ವಿ ತಯಾರಿಕೆಗೆ ಸಂಬಂಧಿಸಿದ ವಿಷಯದ ಅರ್ಜಿಯೊಂದನ್ನು ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ನಜ್ಮಿ ವಾಜಿರಿ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

"ಪ್ರಸ್ತುತ ಎರಡನೇ ಕೊರೊನಾ ಅಲೆಯ ಸಂದರ್ಭದಲ್ಲಿ ನಡೆದ ಎಲ್ಲಾ ಬೆಳವಣಿಗೆಳ ಬಗ್ಗೆ ನಾವು ಬೇಸರ ವ್ಯಕ್ತಪಡಿಸುತ್ತೇವೆ. ಜವಾಬ್ದಾರಿಯುತ ಪ್ರಜೆಯಾಗಿ ನೀವೂ ಸಹ ದುಃಖಿತರಾಗುತ್ತೀರಿ. ಲಸಿಕೆ ಕೊರತೆ ಪ್ರತಿಯೊಬ್ಬರಿಗೂ ತೊಂದರೆಯನ್ನು, ಆತಂಕವನ್ನು ಉಂಟು ಮಾಡಿದೆ. ದೆಹಲಿಯಲ್ಲಿ ಈಗಲೂ ಲಸಿಕೆ ಲಭ್ಯವಿಲ್ಲ. ಭಾರತದಲ್ಲಿ ಉತ್ತಮ ಉತ್ಪನ್ನಗಳಿದ್ದು, ಸ್ವಲ್ಪ ಮುತುವರ್ಜಿ ವಹಿಸಿ ಕೆಲಸ ಮಾಡಬೇಕಾಗಿದೆ" ಎಂದು ನ್ಯಾಯಪೀಠ ಸರ್ಕಾರಕ್ಕೆ ತಿಳಿಸಿದೆ.

ಕೋವಿಡ್‌ ಲಸಿಕೆ: ಕೇಂದ್ರ ಸರ್ಕಾರ ವಿಫಲ

ಕೋವಿಡ್‌ ಲಸಿಕೆ: ಕೇಂದ್ರ ಸರ್ಕಾರ ವಿಫಲ

ಈ ಸಂದರ್ಭದಲ್ಲಿ ಕೋವಿಡ್‌ ಲಸಿಕೆ ನಿರ್ವಹಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, "ರಷ್ಯಾ ಲಸಿಕೆ ತಯಾರಕರೊಬ್ಬರಲ್ಲಿ ಯಾರೋ ಹಿಮಾಚಲ ಪ್ರದೇಶದಲ್ಲಿ ಇದ್ದಾರೆ ಎಂದು ವರದಿಗಳಾಗಿವೆ. ಆದರೆ ಕೇಂದ್ರ ಸರ್ಕಾರವು ಅವರನ್ನು ತಲುಪುವಲ್ಲಿ ವಿಫಲವಾಗಿದೆ" ಎಂದು ಸಿಡಿಮಿಡಿಗೊಂಡಿದೆ.

ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ

ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ

ಲಸಿಕೆ ತಯಾರಿಸಲು ಕಂಪನಿಯು ಸರ್ಕಾರದಿಂದ ಅನುಮತಿ ಪಡೆಯುತ್ತದೆ ಎಂಬ ಷರತ್ತಿಗೆ ಒಳಪಟ್ಟು ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ ತಯಾರಿಸಲು ಪ್ಯಾನೇಶಿಯಾ ಬಯೋಟೆಕ್‌ಗೆ 2012 ರಿಂದ ಬಡ್ಡಿಯನ್ನು ಸೇರಿಸಿ ಒಟ್ಟು 14 ಕೋಟಿಗೂ ಅಧಿಕ ಮೊತ್ತ ಬಿಡುಗಡೆ ಮಾಡಲು ಹೈಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿತು.

ಭಾರತದಲ್ಲಿ ಸ್ಪುಟ್ನಿಕ್ ವಿ ಉತ್ಪಾದನೆ ಪ್ರಾರಂಭ

ಭಾರತದಲ್ಲಿ ಸ್ಪುಟ್ನಿಕ್ ವಿ ಉತ್ಪಾದನೆ ಪ್ರಾರಂಭ

ರಷ್ಯಾದ ಸಾರ್ವಭೌಮ ಸಂಪತ್ತು ನಿಧಿ ಮತ್ತು ಭಾರತದ ಪ್ರಮುಖ ಲಸಿಕೆ ಮತ್ತು ಔಷಷಧೀಯ ಉತ್ಪಾದಕ ಸಂಸ್ಥೆಗಳಲ್ಲಿ ಒಂದಾದ ಪ್ಯಾನೇಸಿಯಾ ಬಯೋಟೆಕ್ ಮೇ 24 ರಂದು ಕೊರೊನಾ ವೈರಸ್‌ ವಿರುದ್ದದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆಯನ್ನು ಪ್ರಾರಂಭಿಸಿದೆ. ಏಪ್ರಿಲ್ 12, 2021 ರಂದು ಭಾರತದಲ್ಲಿ ತುರ್ತು ಬಳಕೆಗಾಗಿ ಸ್ಪುಟ್ನಿಕ್ ವಿ ಲಸಿಕೆಗೆ ಅನುಮೋದನೆ ನೀಡಲಾಗಿದೆ. ಮೇ 14 ರಿಂದ ದೇಶೀಯ ಲಸಿಕೆಯೊಂದಿಗೆ ರಷ್ಯಾದ ಲಸಿಕೆ ಸೇರ್ಪಡೆಯಾಗಿದ್ದು ಕೊರೊನಾ ವಿರುದ್ದದ ಹೋರಾಟ ಮುಂದುವರಿಸಿದೆ.

ಮೊದಲ ಬ್ಯಾಚ್‌ ಲಸಿಕೆ ರಷ್ಯಾದ ಕೇಂದ್ರಕ್ಕೆ ರವಾನೆ

ಮೊದಲ ಬ್ಯಾಚ್‌ ಲಸಿಕೆ ರಷ್ಯಾದ ಕೇಂದ್ರಕ್ಕೆ ರವಾನೆ

ಹಿಮಾಚಲ ಪ್ರದೇಶದ ಪ್ಯಾನೇಸಿಯಾ ಬಯೋಟೆಕ್‌ನಲ್ಲಿ ಉತ್ಪಾದಿಸಲಾದ ಮೊದಲ ಬ್ಯಾಚ್ ಸ್ಪುಟ್ನಿಕ್ ವಿ ಲಸಿಕೆಯನ್ನು ಗುಣಮಟ್ಟದ ನಿಯಂತ್ರಣಕ್ಕಾಗಿ ರಷ್ಯಾದ ಗಮಲೇಯ ಕೇಂದ್ರಕ್ಕೆ ರವಾನಿಸಲಾಗುತ್ತದೆ. ಲಸಿಕೆಯ ಪೂರ್ಣ ಪ್ರಮಾಣದ ಉತ್ಪಾದನೆಯು ಈ ಬೇಸಿಗೆಯಲ್ಲಿ ಪ್ರಾರಂಭವಾಗಲಿದೆ. ಆರ್‌ಡಿಐಎಫ್‌ ಹಾಗೂ ಪ್ಯಾನೇಸಿಯಾ ಸಂಸ್ಥೆ ವರ್ಷಕ್ಕೆ 100 ಮಿಲಿಯನ್ ಡೋಸ್‌ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲು ಒಪ್ಪಿಕೊಂಡಿವೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+