ರಿಪೇರಿ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ: ವೈರಲ್ ವಿಡಿಯೋ

ನವದೆಹಲಿ, ಏಪ್ರಿಲ್ 25: ದೆಹಲಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಏರ್ ಇಂಡಿಯಾ ವಿಮಾನವನ್ನು ದುರಸ್ತಿ ಮಾಡುವ ಸಂದರ್ಭದಲ್ಲಿ ಅದರ ಆಕ್ಸಿಲರಿ ಪವರ್ ಯುನಿಟ್ ನಲ್ಲಿ (ಎಪಿಯು) ಬೆಂಕಿ ಕಾಣಿಸಿಕೊಂಡಿದೆ.

ಏರ್ ಇಂಡಿಯಾ ವಿಮಾನ ಬೋಯಿಂಗ್ ಬಿ777-200ಎಲ್‌ಆರ್ (ವಿಟಿ-ಎಎಲ್‌ಎಫ್) ವಿಮಾನವು ಗುರುವಾರ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಕ್ಕೆ ತೆರಳಬೇಕಿತ್ತು. ಬುಧವಾರ ರಾತ್ರಿ ವಿಮಾನದ ದುರಸ್ತಿ ಕಾರ್ಯ ನಡೆದಿತ್ತು. ಆಗ ವಿಮಾನ ಇನ್ನೂ ನಿಲ್ದಾಣದಲ್ಲಿ ಬೇದಲ್ಲಿಯೇ ಇತ್ತು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ.

ನಿರ್ವಹಣಾ ಕಾರ್ಯ ಸಾಗುತ್ತಿತ್ತು. ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಎಂದು ಏರ್ ಇಂಡಿಯಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Delhi fire in Air India bound for San Francisco during repair work video

ದೆಹಲಿಯಲ್ಲಿ ಬುಧವಾರ ರಾತ್ರಿ ವಿಮಾನದ ಎಪಿಯು ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುವ ಜಾಗದಲ್ಲಿ ಎಂಜಿನಿಯರ್ ಒಬ್ಬರು ತಾಂತ್ರಿಕ ಪರಿಶೀಲನೆ ನಡೆಸುತ್ತಿದ್ದರು. ವಿಮಾನದ ಹವಾ ನಿಯಂತ್ರಕವನ್ನು ದುರಸ್ತಿ ಮಾಡುತ್ತಿದ್ದರು. ಆಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ವಿಮಾನನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿ ಕಪ್ಪು ಹೊಗೆ ಬರುವುದನ್ನು ಗಮನಿಸಿದರು. ಕೂಡಲೇ ಅಗ್ನಿ ನಂದಕದ ಸಹಾಯದಿಂದ ಅದನ್ನು ಆರಿಸಿದರು ಎಂದು ಏರ್ ಇಂಡಿಯಾ ನೀಡಿರುವ ಹೇಳಿಕೆ ತಿಳಿಸಿದೆ.

ಈ ಘಟನೆ ಬಳಿಕ ಎಪಿಯುವನ್ನು ಕೂಲಂಕಷವಾಗಿ ತಪಾಸಣೆ ನಡೆಸಲಾಯಿತು. ಆದರೆ ಅದರ ಒಳಗೆ ಸುಟ್ಟ ಕುರುಹು ಕಂಡುಬಂದಿಲ್ಲ. ಅಲ್ಪಸ್ವಲ್ಪ ತೈಲ ಸೋರಿಕೆ ಕುರುಹಗಳ ಹೊರತಾಗಿ ಬೇರೆ ಯಾವುದೇ ಬಾಹ್ಯ ಹಾನಿ ಉಂಟಾಗಿಲ್ಲ. ಉಳಿದಂತೆ ಯಾವುದೇ ಸಮಸ್ಯೆ ಇಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅದು ವಿವರಿಸಿದೆ.

ಈ ಘಟನೆಯ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. 42 ಸೆಕೆಂಡ್‌ಗಳ ವಿಡಿಯೋದಲ್ಲಿ ವಿಮಾನದ ಹಿಂಬದಿಯಲ್ಲಿ ಬೆಂಕಿ ಉರಿಯುತ್ತಿರುವುದು ಮತ್ತು ಅದನ್ನು ಅಗ್ನಿಶಾಮಕ ಸಿಬ್ಬಂದಿ ಆರಿಸುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+