ದೆಹಲಿಯಲ್ಲಿ ಮುಂದುವರಿಯುತ್ತಾ ಬಿಜೆಪಿ ಮಧುಚಂದ್ರ?

ನವದೆಹಲಿ ವಿಧಾನಸಭೆ ಚುನಾವಣೆ ಏನಾಗಬಹುದು ಎಂಬುದನ್ನು ಊಹಿಸುವುದು ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ಈ ಚುನಾವಣೆಯು ಬಿಹಾರದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನುಡಿ ಎಂದೂ ಹೇಳಲಾಗುತ್ತಿದೆ.

ಆದ್ದರಿಂದ ನವದೆಹಲಿ ಚುನಾವಣೆ ಮೂಲಕ ಬಿಜೆಪಿ ಹನಿಮೂನ್ ಅಂತ್ಯವಾಗುವುದೋ ಅಥವಾ ಮುಂದುವರಿಯುವುದೋ ಎಂದು ನೋಡಬೇಕಾಗಿದೆ. ಆದರೆ ಒಂದಂತೂ ನಿಜ. ಪ್ರಸ್ತುತ ದೆಹಲಿಗರಿಗೆ ಸುರಕ್ಷಿತ ಸರ್ಕಾರ ಬೇಕಾಗಿದೆ ಅಷ್ಟೇ. [ಆಖಾಡಕ್ಕಿಳಿದ ಟ್ರಬಲ್ ಶೂಟರ್]

ವಾತಾವರಣ ಬದಲಾಗಿದೆಯೇ? : ಈ ಕುರಿತು ಒನ್ಇಂಡಿಯಾ ಜೊತೆ ಮಾತನಾಡಿರುವ ಪ್ರಮುಖ ರಾಜಕೀಯ ವಿಶ್ಲೇಷಕ ಡಾ. ಸಂದೀಪ ಶಾಸ್ತ್ರಿ ಪ್ರಕಾರ "ಒಂದು ತಿಂಗಳ ಹಿಂದಿನವರೆಗೂ ವಾತಾವರಣ ಬಿಜೆಪಿಗೆ ಪೂರಕವಾಗಿಯೇ ಇತ್ತು. ಲೋಕಸಭೆ ಸೇರಿದಂತೆ ನಂತರದ ಸಾಲು ಸಾಲು ಗೆಲುವು ಬಿಜೆಪಿಗೆ ಪೂರಕ ವಾತಾವರಣ ಒದಗಿಸಿದ್ದವು."

map

"ಆದರೆ, ಚುನಾವಣೆ ಘೋಷಣೆಯಾದ ನಂತರ ನಡೆದ ಹಲವು ಘಟನೆಗಳು ಪರಿಸ್ಥಿತಿಯನ್ನು ಬದಲಾಯಿಸಿವೆ. ಪ್ರಸ್ತುತ ಬಿಜೆಪಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳಲ್ಲಿ ಗೆಲುವು ಯಾರದ್ದು ಎಂಬುದನ್ನು ಹೇಳುವುದೇ ಸಾಧ್ಯವಿಲ್ಲ" ಎಂದಿದ್ದಾರೆ. [ಬುಕ್ಕಿಗಳಿಗೆ ಬಿಜೆಪಿಯೇ ನೆಚ್ಚಿನ ಕುದುರೆ]

ಕಿರಣ್ ಬೇಡಿ ಆಯ್ಕೆ ಸರಿಯೇ? : ನವದೆಹಲಿಯಲ್ಲಿ ಬಿಜೆಪಿಯ ಪ್ರಮುಖ ಸಮಸ್ಯೆ ಎಂದರೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಓರ್ವ ಬಿಜೆಪಿಯೇತರ ವ್ಯಕ್ತಿ. ಅಣ್ಣಾ ಹಜಾರೆ ಜೊತೆ ಸೇರಿ ಪ್ರತಿಭಟನೆ ನಡೆಸಿದವರಲ್ಲಿ ಅವರೂ ಕೂಡ ಒಬ್ಬರಾದ ಕಾರಣ ಬಿಜೆಪಿ ಈ ನಿರ್ಧಾರ ಕೈಗೊಂಡಿದೆ.

ಆದರೆ, ಕೆಲವರ ಪ್ರಕಾರ ಕಿರಣ್ ಬೇಡಿ ಆಯ್ಕೆ ಬಿಜೆಪಿಗೆ ತಿರುಗುಬಾಣವಾಗಲಿದೆ. ಅವರು ಬಿಜೆಪಿ ಸೇರಿದ ಕೇವಲ 72 ಗಂಟೆಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ್ದು ಪಕ್ಷದ ಹಲವರಲ್ಲಿ ಅಸಮಾಧಾನ ಮೂಡಿಸಿದೆ. [ಸುಂದರಿ ಶಾಜಿಯಾಗೆ ನನ್ನ ಮತ]

ಮುಖ್ಯಮಂತ್ರಿ ಸ್ಥಾನಕ್ಕೆ ಕಿರಣ್ ಅವರನ್ನು ಆಯ್ಕೆ ಮಾಡುವ ಮೂಲಕ ತಾವು ಆಮ್ ಆದ್ಮಿಯನ್ನು ನಿಶ್ಯಸ್ತ್ರಗೊಳಿಸಿದ್ದೇವೆಂದು ಬಿಜೆಪಿ ತಿಳಿದಿದೆ. ಆದರೆ, ಈ ತಂತ್ರ ಎಷ್ಟು ಫಲಿಸುತ್ತದೆ ಎಂಬುದನ್ನು ಕಾಲವೇ ಹೇಳಬೇಕು.

ಬೇಡಿ ಈಗಾಗಲೇ ಅನನುಭವಿ ಹೇಳಿಕೆಗಳನ್ನು ನೀಡಿದ್ದಾರೆ. ಅವರ ಆಯ್ಕೆ ನರೇಂದ್ರ ಮೋದಿ ಅವರ ಹೆಸರನ್ನು ಮಸುಕಾಗುವಂತೆ ಮಾಡಿದೆ ಎನ್ನಲಾಗಿದೆ.

ಕೇಜ್ರಿವಾಲ್ ಆಪ್ ಸರ್ಕಾರ ಮುಂದುವರಿಸಲಾಗದೆ ಅಧಿಕಾರದಿಂದ ಕೆಳಗಿಳಿದಾಗ ಅವರು ಪಲಾಯನ ಮಾಡುತ್ತಿದ್ದಾರೆಂದೇ ಎಲ್ಲರೂ ತಿಳಿದಿದ್ದರು. ಆದರೆ, ಈ ಅಭಿಪ್ರಾಯವನ್ನು ಚುನಾವಣಾ ಪ್ರಚಾರದಲ್ಲಿ ಕ್ಷಮೆಯಾಚಿಸುವ ಮೂಲಕ ದೂರ ಮಾಡಿದರು. ತಪ್ಪು ಮಾಡಿ ಕ್ಷಮೆ ಕೇಳುವವರ ಕುರಿತು ಜನಮಾನಸದಲ್ಲಿ ಯಾವಾಗಲೂ ಕರುಣೆ ಇರುತ್ತದೆ. [ಆಪ್ ನಿಂದ 70 ಅಂಶಗಳ ಪ್ರಣಾಳಿಕೆ]

bedi

ಜನರ ಅಭಿಪ್ರಾಯವೇನು?

ಗೃಹಿಣಿ ಸುಜಾತಾ ಶರ್ಮಾ - "ನನಗೆ ಸ್ಥಿರ ಸರ್ಕಾರವೇ ಮುಖ್ಯ. ಮೊದಲು ಆಗಿದ್ದು ಪುನರಾವರ್ತನೆ ಆಗುವುದು ನನಗಿಷ್ಟವಿಲ್ಲ."

ಉದ್ಯಮಿ ರಾಕೇಶ್ ಸಿಂಗ್ - "ನೀರು ಮತ್ತು ವಿದ್ಯುತ್ ಅತ್ಯಂತ ಮುಖ್ಯವಾಗಿವೆ. ಸ್ಥಿರ ಸರ್ಕಾರ ಇರಲಿ ಎಂದು ನಾನು ಬಯಸುತ್ತೇನೆ. ಆಪ್ ಅಧಿಕಾರ ಬಿಟ್ಟ ರೀತಿಯನ್ನು ನಾನು ಒಪ್ಪುವುದಿಲ್ಲ. ನಾವು ಅವರಿಗೆ ಸರ್ಕಾರ ನಡೆಸಲು ಮತ ನೀಡಿದ್ದೆವು."

ಶಿಕ್ಷಕ ಪ್ರಥಮ ಚಾವ್ಲಾ - "ಸ್ಥಿರ ಸರ್ಕಾರಕ್ಕಾಗಿ ಉತ್ತಮ ಆಡಳಿತ ಮುಖ್ಯ. ನವದೆಹಲಿಯನ್ನು ಕೇಂದ್ರ ಸರ್ಕಾರ ಆಳಬೇಕೆಂದು ನಾವು ಬಯಸುವುದಿಲ್ಲ. ಆದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೇ ರಾಜ್ಯ ಸರ್ಕಾರವನ್ನೂ ರಚಿಸಬೇಕೆಂದು ನಾವು ಬಯಸುತ್ತೇವೆ".

ಅಂತಿಮ ತೀರ್ಪು ಹೇಳಲಾಗದು : ಸಂದೀಪ್ ಶಾಸ್ತ್ರಿ ಹೇಳುವುದೇನೆಂದರೆ "ದೆಹಲಿಯಲ್ಲಿ ಅತ್ಯಂತ ತುರುಸಿನ ಸ್ಪರ್ಧೆ ನಡೆಯುತ್ತಿದೆ. ಕೆಲವರು ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ ಎಂದಿದ್ದಾರೆ. ನನ್ನ ಪ್ರಕಾರ ಬಿಜೆಪಿಗೆ 36ರಿಂದ 37 ಸೀಟುಗಳು ಬರುತ್ತವೆ. ಯಾವುದೇ ಪಕ್ಷ 40 ಸ್ಥಾನ ಗಳಿಸಿದರೆ ಅದು ದೊಡ್ಡ ಗೆಲುವಾಗುತ್ತದೆ.

ಚುನಾವಣೆ ಘೋಷಣೆಯಾದ ನಂತರ ಬಹಳಷ್ಟು ಘಟನೆಗಳು ನಡೆದಿವೆ. ಇದೊಂದು ಅತಂತ್ರ ವಿಧಾನಸಭೆಯಾಗುವ ಲಕ್ಷಣ ತೋರುತ್ತಿದೆ. ಬಿಜೆಪಿಗೆ ಈಗಲೂ ಹಲವು ಪೂರಕ ಅಂಶಗಳಿವೆ. ಏಕೆಂದರೆ ಮಧ್ಯಮ ವರ್ಗದ ಜನ ಆಪ್‌ನಿಂದ ದೂರವಾಗಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಈ ಚುನಾವಣೆಯು ಬಿಜೆಪಿಯ ಮಧುಚಂದ್ರ ಅವಧಿ ಮುಗಿಯಿತೋ ಅಥವಾ ಮುಂದುವರಿದಿದೆಯೋ ಎಂಬುದನ್ನು ನಿರ್ಧರಿಸಲಾಗಿದೆ. ಒಂದು ವೇಳೆ ಬಿಜೆಪಿ ಸೋತರೆ ಬಿಹಾರ ಚುನಾವಣೆಯಲ್ಲಿ ಪ್ರತಿಪಕ್ಷಗಳ ಧ್ವನಿ ಹೆಚ್ಚುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+