ಮಹಿಳಾ ಪೇದೆಗಳ ಮುಂದೆ ಹಸ್ತಮೈಥುನ ಮಾಡಿದ ಪೇದೆ ಬಂಧನ
ಮಹಿಳಾ ಪೇದೆಗಳ ಮುಂದೆ ಹಸ್ತಮೈಥುನ ಮಾಡಿಕೊಂಡ ದೆಹಲಿ ಪೊಲೀಸ್ ಪೇದೆ. ಕುಡಿದ ಮತ್ತಿನಲ್ಲಿ ಮಹಿಳಾ ಪೇದೆಗಳ ಬಳಿ ಅಸಭ್ಯವಾಗಿ ವರ್ತನೆ. ಈ ಹಿನ್ನೆಲೆಯಲ್ಲಿ ಪೇದೆಯ ಬಂಧನ, ಇಲಾಖಾ ತನಿಖೆಗೆ ಆದೇಶ.
ನವದೆಹಲಿ, ಜುಲೈ 25: ಇತ್ತೀಚೆಗೆ ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ವಿಮಾನದಲ್ಲಿ ಸಹ ಪ್ರಯಾಣಿಕನೊಬ್ಬ ಮಹಿಳೆಯ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದ ಘಟನೆ ಮಾಸುವ ಮುನ್ನವೇ ದೆಹಲಿಯಲ್ಲಿಯೂ ಅಂಥದ್ದೊಂದು ಘಟನೆ ನಡೆದಿದೆ.
ಈ ಬಾರಿ ಇಂಥ ಕುಕೃತ್ಯ ಮಾಡಿರುವುದು ಕಾನೂನು ಕಾಪಾಡಬೇಕಾದ ಪೊಲೀಸ್ ಪೇದೆ ! ಅದೂ ಯಾರ ಮುಂದೆ ಅಂತೀರಿ ? ಮಹಿಳಾ ಪೇದೆಗಳ ಮುಂದೆ!

ಹೌದು. ಅಚ್ಚರಿಯಾದರೂ ಇದು ಸತ್ಯ. ಪೊಲೀಸ್ ಇಲಾಖೆಗೆ ಆಯ್ಕೆಯಾಗಿ ಝರೋಡಾ ಕಲಾನ್ ಎಂಬಲ್ಲಿರುವ ಪೊಲೀಸ್ ತರಬೇತಿ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ಯುವ ಪೊಲೀಸ್, ಸೋಮವಾರ ಸಂಜೆ ತಮ್ಮ ಹಾಸ್ಟೆಲ್ ನಲ್ಲಿನ ಊಟದ ಮೆಸ್ ನಲ್ಲಿ ಇಬ್ಬರು ತರಬೇತಿಯಲ್ಲಿರುವ ಮಹಿಳಾ ಪೇದೆಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.
ಆ ವೇಳೆ ಆತ ಕುಡಿದು ಬಂದಿದ್ದ ಎಂದು ಹೇಳಲಾಗಿದೆ. ಆತನ ವರ್ತನೆ ವಿರುದ್ಧ ಆ ಮಹಿಳಾ ಪೇದೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ವೇಳೆ, ಅವರ ಬಳಿ ಮತ್ತಷ್ಟು ಅಸಭ್ಯವಾಗಿ ನಡೆದುಕೊಂಡ ಆತ, ಮಹಿಳೆಯರನ್ನು ಮುಟ್ಟಿ, ಅವರಲ್ಲಿ ಪೋಲಿಯಾಟ ಆಡಿದ್ದಾನೆಂದು ಹೇಳಲಾಗಿದೆ. ಇದಕ್ಕೆ ಆ ಮಹಿಳೆಯರು ತೀವ್ರವಾಗಿ ಪ್ರತಿರೋಧ ಒಡ್ಡಿ, ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಹೆದರಿಸಿದ್ದಾರೆ.
ತಕ್ಷಣ ಅಲ್ಲಿಂದ ಹೊರಟು ಹೋದ ಆತ ಹಾಸ್ಟೆಲ್ ನಲ್ಲಿದ್ದ ತನ್ನ ರೂಮಿಗೆ ತೆರಳಿ ಅಲ್ಲಿ ಮತ್ತಷ್ಟು ಮದ್ಯ ಕುಡಿದು ಕೆಳಗಿಳಿದು ಬಂದಿದ್ದಲ್ಲದೆ, ಮತ್ತಿಬ್ಬರು ಮಹಿಳಾ ಪೆೇದೆಗಳತ್ತ ಸಾಗಿ, ಇದ್ದಕ್ಕಿದ್ದಂತೆ ಹಸ್ತ ಮೈಥುನ ಆರಂಭಿಸಿದ್ದಾನೆ. ಇದನ್ನು ನೋಡಿ ಅಸಹ್ಯ ಪಟ್ಟುಕೊಂಡ ಆ ಮಹಿಳೆಯರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸದ್ಯಕ್ಕೆ ಆತನನ್ನು ಬಂಧಿಸಲಾಗಿದ್ದು, ಪ್ರಕರಣದ ಬಗ್ಗೆ ಇಲಾಖಾ ತನಿಖೆಯನ್ನು ಆದೇಶಿಸಲಾಗಿದೆ.












Click it and Unblock the Notifications