ದೆಹಲಿ ಲಾಕ್‌ಡೌನ್ ಮತ್ತೊಂದು ವಾರ ಮುಂದೂಡಿದ ಸಿಎಂ ಕೇಜ್ರಿವಾಲ್

ನವದೆಹಲಿ, ಮೇ 23: ದೆಹಲಿಯಲ್ಲಿ ಲಾಕ್‌ಡೌನ್‌ಅನ್ನು ಮತ್ತೊಂದು ವಾರಗಳ ಕಾಲ ಮುಂದುವರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ಘೋಷಿಸಿದ್ದಾರೆ. ಮೇ 31ರ ಮುಂಜಾನೆ 5 ಗಂಟೆಯವರೆಗೆ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

Recommended Video

      Delhiಯಲ್ಲಿ ಪ್ರಕರಣ ಕಡಿಮೆಯಾದರೂ lockdown ಮುಂದುವರಿಕೆ | Oneindia Kannada

      ಕೊರೊನಾ ವೈರಸ್‌ನ ಹೊಸ ಪ್ರಕರಣಗಳ ಸಂಖ್ಯೆಯ ಪ್ರಮಾಣ ಇಳಿಕೆಯಾಗುವುದು ಮುಂದುವರಿದರೆ ಮೇ 31ರ ನಂತರ ಅನ್‌ಲಾಕ್ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ. ಏಪ್ರಿಲ್ 19 ರಿಂದ ದೆಹಲಿಯಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.

      ಕಳೆದ 24 ಗಂಟೆಯಲ್ಲಿ ದೆಹಲಿ ನಗರದಲ್ಲಿ 2200 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ. ಪಾಸಿಟಿವಿಟಿ ದರವು ಕೂಡ 3.5 ಶೇಕಡಾಗೆ ಇಳಿಕೆಯಾಗಿದೆ ಎಂದು ಮಾಧ್ಯಮಗಳಿಗೆ ಅರವಿಂದ ಕೇಜ್ರಿವಾಲ್ ವಿವರಿಸಿದ್ದಾರೆ. ಇದು ಕೊರೊನಾ ವೈರಸ್‌ನ ಭೀತಿ ಕಡಿಮೆಯಾಗಿದೆ ಎಂದು ಅರ್ಥವಲ್ಲ. ಕೊರೊನಾ ವೈರಸ್‌ನಿಂದ ರಕ್ಷಣೆಯನ್ನು ಪಡೆಯಲು ನಾವು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ವಹಿಸಿಕೊಳ್ಳಲೇಬೇಕಿದೆ ಎಂದು ಕೇಜ್ರಿವಾಲ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

      Delhi CM Kejriwal announced lockdown extended to another week, till May 31

      ದೆಹಲಿಯಲ್ಲಿ ಕೊರೊನಾ ವೈರಸ್‌ನ ನಿತ್ಯದ ಪ್ರಕರಣನಗಳ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣದಿಂದಾಗಿ ಲಾಕ್‌ಡೌನ್ ಅಂತ್ಯಗೊಳಿಸುವ ಬಗ್ಗೆಯೂ ಸಾಕಷ್ಟು ಮಾತುಗಳು ಕೇಳಿಬಂದಿತ್ತು. ಶುಕ್ರವಾರ ಸ್ವತಃ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದರು. ಆದರೆ ಸದ್ಯ ಒಂದು ವಾರಗಳ ಮಟ್ಟಿಗೆ ಲಾಕ್‌ಡೌನ್ ವಿಸ್ತರಣೆಯ ತೀರ್ಮಾನವನ್ನು ದೆಹಲಿ ಸರ್ಕಾರ ಘೋಷಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+