ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Sorry ನಂಬರ್ 3 : ಅರುಣ್ ಜೇಟ್ಲಿಯನ್ನು ಕ್ಷಮೆ ಕೇಳಿದ ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಏಪ್ರಿಲ್ 2: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಳಿರುವ ಕ್ಷಮೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಮೂರು ವರ್ಷದ ಹಿಂದೆ ಜೇಟ್ಲಿ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ವಾಪಸ್ ಪಡೆಯುವ ಸಾಧ್ಯತೆಗಳಿವೆ. ಅಂದಹಾಗೆ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು ಜೇಟ್ಲಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು.

"ನಾವು ಬೇರೆ ರಾಜಕೀಯ ಪಕ್ಷಗಳಿಗೆ ಸೇರಿದವರು. ನಮ್ಮ ಮಧ್ಯದ ಇಂಥ ಅಹಿತಕರ ವ್ಯಾಜ್ಯಗಳನ್ನು ಕೊನೆಗೊಳಿಸಬೇಕು ಎಂದುಕೊಳ್ತೀನಿ. ಜತೆಗೆ ನಮ್ಮಿಂದ ಎಷ್ಟು ಸಾಧ್ಯವೋ ಆ ಮಟ್ಟದಲ್ಲಿ ಜನರ ಸೇವೆ ಮಾಡಬೇಕು" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಕ್ಷಮಾಪಣೆ ಪತ್ರದಲ್ಲಿ ಬರೆದಿದ್ದಾರೆ.

ಕ್ಷಮಾಪಣೆ ನಂ. 3: ಗಡ್ಕರಿ, ಸಿಬಲ್ ಕ್ಷಮೆ ಕೋರಿದ ಕೇಜ್ರಿವಾಲ್ಕ್ಷಮಾಪಣೆ ನಂ. 3: ಗಡ್ಕರಿ, ಸಿಬಲ್ ಕ್ಷಮೆ ಕೋರಿದ ಕೇಜ್ರಿವಾಲ್

ದೆಹಲಿ ಕ್ರಿಕೆಟ್ ಅಸೋಸಿಯೇಷನ್ ಗೆ 13 ವರ್ಷಗಳ ಕಾಲ ಅರುಣ್ ಜೇಟ್ಲಿ ಅಧ್ಯಕ್ಷರಾಗಿದ್ದ ವೇಳೆ ಭ್ರಷ್ಟಾಚಾರ ನಡೆದಿತ್ತು ಎಂದು ಆರೋಪ ಮಾಡಿದ್ದರಿಂದ ಕೇಜ್ರಿವಾಲ್ ಸೇರಿದಂತೆ ಆಪ್ ನ ಇತರೆ ನಾಯಕರ ವಿರುದ್ಧ 10 ಕೋಟಿ ರುಪಾಯಿ ಮೊತ್ತಕ್ಕೆ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು.

Delhi CM Arvind Kejriwals Sorry To Arun Jaitley

ಈ ಪ್ರಕರಣದ ವಿಚಾರಣೆ ವೇಳೆಯೇ ಅರವಿಂದ್ ಕೇಜ್ರಿವಾಲ್ ರ ಪರ ವಕೀಲ ರಾಮ್ ಜೇಠ್ಮಲಾನಿ ಮಾಡಿದ ಪದ ಬಳಕೆ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ ಹೂಡಿದ್ದರು ಅರುಣ್ ಜೇಟ್ಲಿ. ಇದೀಗ ವ್ಯಾಜ್ಯ ಇತ್ಯರ್ಥ ಮಾಡಿಕೊಳ್ಳುವ ಸಲುವಾಗಿ ಅರವಿಂದ್ ಕೇಜ್ರಿವಾಲ್ ಹಾಗೂ ಅರುಣ್ ಜೇಟ್ಲಿ ಇಬ್ಬರೂ ಸೇರಿ ದೆಹಲಿ ಹೈ ಕೋರ್ಟ್ ಗೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.

2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ | ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಪ್ ನ ಸಂಜಯ್ ಸಿಂಗ್, ಅಶುತೋಷ್, ಕುಮಾರ್ ವಿಶ್ವಾಸ್, ದೀಪಕ್ ಬಾಜಪೇಯಿ ಮತ್ತು ರಾಘವ್ ಚಡ್ಡಾ ವಿರುದ್ಧ ಕೂಡ ಅರುಣ್ ಜೇಟ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಪಂಜಾಬ್ ನ ಮಾಜಿ ಸಚಿವ ಬಿಕ್ರಮ್ ಮಜಿದಿಯಾ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಕಾಂಗ್ರೆಸ್ ನ ನಾಯಕ ಕಪಿಲ್ ಸಿಬಲ್ ರ ಮಗ ಅಮಿತ್ ಸಿಬಲ್ ವಿರುದ್ಧ ನೀಡಿದ್ದ ಹೇಳಿಕೆಗೆ ಈಚೆಗೆ ಅರವಿಂದ್ ಕೇಜ್ರಿವಾಲ್ ಕ್ಷಮೆ ಯಾಚಿಸಿದ್ದಾರೆ.

English summary
Central finance minister Arun Jaitley has accepted an apology from Delhi chief minister Arvind Kejriwal and may drop a defamation case he had filed in 2015 after the Aam Aadmi Party chief called him corrupt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X