ಬಿಜೆಪಿ ಕಚೇರಿಯಲ್ಲಿ ಪತ್ನಿಗೆ ಹೊಡೆದ ಬಿಜೆಪಿ ನಾಯಕ: ವಿಡಿಯೋ ವೈರಲ್

Recommended Video

      ಬಿಜೆಪಿ ಕಚೇರಿಯಲ್ಲಿ ಪತ್ನಿಗೆ ಹೊಡೆದ ಬಿಜೆಪಿ ನಾಯಕ: ವಿಡಿಯೋ ವೈರಲ್ | Oneindia Kannada

      ನವದೆಹಲಿ, ಸೆಪ್ಟೆಂಬರ್ 20: ಚುನಾವಣಾ ಸಿದ್ಧತೆಯ ಕುರಿತಂತೆ ಬಿಜೆಪಿ ಕಚೇರಿಯಲ್ಲಿ ಸೇರಿದ್ದ ಸಭೆಯ ನಂತರ ಬಿಜೆಪಿ ನಾಯಕರೊಬ್ಬರು ತಮ್ಮ ಪತ್ನಿಗೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರನ್ನು ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

      ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಚುನಾವಣಾ ಪೂರ್ವಸಿದ್ಧತೆಯ ಕುರಿತಂತೆ ಸಭೆ ನಡೆಸಿದ್ದರು. ಈ ಸಭೆಗೆ ಹಾಜರಾಗಿದ್ದ ದೆಹಲಿಯ ಮೆಹ್ರೌಲಿ ಜಿಲ್ಲೆಯ ಬಿಜೆಪಿ ಮುಖ್ಯಸ್ಥ ಆಜಾದ್ ಸಿಂಗ್ ಸಭೆಗೆ ಆಗಮಿಸಿದ್ದ ತಮ್ಮ ಪತ್ನಿಯ ಮೇಲೆ ಕೈ ಮಾಡಿದ್ದರು. ಈ ಘಟನೆ ಗುರುವಾರ ನಡೆದಿತ್ತು.

      ಅಜಾದ್ ಸಿಂಗ್ ಮತ್ತು ಅವರ ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದು, ಅವರ ನಡುವೆ ವೈವಾಹಿಕ ಬದುಕು ಉತ್ತಮವಾಗಿರಲಿಲ್ಲ ಎಂಬುದು ತಿಳಿದುಬಂದಿದೆ.

      Delhi BJP leader slaps wife in Party office suspended

      ದಕ್ಷಿಣ ದೆಹಲಿಯ ಮಾಜಿ ಮೇಯರ್ ಸರಿತಾ ಚೌಧರಿ ಅವರು ಸಿಂಗ್ ಅವರ ಪತ್ನಿಯಾಗಿದ್ದು, ಹಲವು ದಿನಗಳಿಂದ ಇಬ್ಬರ ನಡುವೆ ಸಂಬಂಧ ಸರಿಯಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

      ಬಿಜೆಪಿಯ ಕಚೇರಿಯ ಹೊರಗೆ ಈ ಘಟನೆ ನಡೆದಿದ್ದು, ಘಟನೆ ನಡೆಯುವ ಸಮಯದಲ್ಲಿ ಕಚೇರಿಯೊಳಗೆ ಪ್ರಕಾಶ್ ಜಾವ್ಡೇಕರ್ ಅವರೂ ಇದ್ದರು ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+