ಚಿತ್ರಗಳಲ್ಲಿ : ದೆಹಲಿ ವಿಧಾನಸಭೆ ಚುನಾವಣೆ ಮತದಾನ

ನವದೆಹಲಿ, ಫೆ.7 : ದೆಹಲಿ ವಿಧಾನಸಭೆ ಚುನಾವಣೆಗೆ ಶನಿವಾರ ಮತದಾನ ನಡೆಯುತ್ತಿದೆ. 70 ಕ್ಷೇತ್ರಗಳಲ್ಲಿ 673 ಅಭ್ಯರ್ಥಿಗಳು ಕಣದಲ್ಲಿದ್ದು, 12,177 ಕೇಂದ್ರಗಳಲ್ಲಿ ಶನಿವಾರ ಮತದಾನ ನಡೆಯುತ್ತಿದೆ. ಪ್ರಮುಖ ನಾಯಕರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ನವದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ 1.33 ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 12,177 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ದೆಹಲಿ ಚುನಾವಣೆ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವಿನ ತೀವ್ರ ಪೈಪೋಟಿ ಎಂದು ಬಣ್ಣಿಸಲಾಗುತ್ತಿದೆ. [ದೆಹಲಿ ವಿಧಾನಸಭೆಗೆ ಮತದಾನ Live]

ದಕ್ಷಿಣ ದೆಹಲಿಯ ನೀತಿ ಬಾಗ್‌ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ ನಂತರ ಮಾತನಾಡಿದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್‌ ಬೇಡಿ ಅವರು, 'ಇಂದು ದೆಹಲಿಗೆ ಐತಿಹಾಸಿಕ ದಿನವಾಗಿದ್ದು , ಸುರಕ್ಷಿತ ದೆಹಲಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನ ಮಾಡಬೇಕೆಂದು' ಕರೆ ನೀಡಿದರು.[ದೆಹಲಿಗರೇ ಬೃಹತ್ ಸಂಖ್ಯೆಯಲ್ಲಿ ಮತ ಹಾಕಿ : ಮೋದಿ]

ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ನೂಪುರ್ ಶರ್ಮಾ ಮುಂತಾದವರು ಶನಿವಾರ ಬೆಳಗ್ಗೆ ತಮ್ಮ ಹಕ್ಕು ಚಲಾಯಿಸಿದರು. ಮತದಾನದ ಚಿತ್ರಗಳು ಇಲ್ಲಿವೆ [ಪಿಟಿಐ ಚಿತ್ರಗಳು]

ದೆಹಲಿಗೆ ಐತಿಹಾಸಿಕ ದಿನ : ಕಿರಣ್ ಬೇಡಿ

ದೆಹಲಿಗೆ ಐತಿಹಾಸಿಕ ದಿನ : ಕಿರಣ್ ಬೇಡಿ

ದಕ್ಷಿಣ ದೆಹಲಿಯ ನೀತಿಬಾಗ್‌ ಮತಗಟ್ಟೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್‌ ಬೇಡಿ ಮತದಾನ ಮಾಡಿದರು, ನಂತರ ಇಂದು ದೆಹಲಿಗೆ ಐತಿಹಾಸಿಕ ದಿನವಾಗಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಎಂದು ಕರೆ ನೀಡಿದರು.

ರಾಹುಲ್ ಗಾಂಧಿ ಮತದಾನ

ರಾಹುಲ್ ಗಾಂಧಿ ಮತದಾನ

ದೆಹಲಿಯ ನಿರ್ಮಾಣ್ ಭವನ ಮತಗಟ್ಟೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಬೆಳಗ್ಗೆ ಮತದಾನ ಮಾಡಿದರು.

ಕೇಜ್ರಿವಾಲ್ ಮತದಾನ

ಕೇಜ್ರಿವಾಲ್ ಮತದಾನ

ಆಮ್‌ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಬಿ.ಕೆ.ದತ್‌ ಕಾಲೋನಿಯಲ್ಲಿರುವ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ನಂತರ ಮಾತನಾಡಿದ ಅವರು, ಜನರು ಭೃಷ್ಟಾಚಾರ ಮತ್ತು ಲಂಚದಿಂದ ಸ್ವತಂತ್ರರಾಗಲು ಬಯಸಿದ್ದು, ಅದರನ್ವಯ ಮತದಾನ ಮಾಡಲಿದ್ದಾರೆ. ಸತ್ಯಕ್ಕೆ ಗೆಲುವು ಎಂದರು.

ಹಕ್ಕು ಚಲಾಯಿಸಿದ ಕಾಂಗ್ರೆಸ್ ಅಧ್ಯಕ್ಷೆ

ಹಕ್ಕು ಚಲಾಯಿಸಿದ ಕಾಂಗ್ರೆಸ್ ಅಧ್ಯಕ್ಷೆ

ದೆಹಲಿಯ ನಿರ್ಮಾಣ್ ಭವನ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ತಮ್ಮ ಹಕ್ಕು ಚಲಾಯಿಸಿದರು. ನಂತರ ಮಾತನಾಡಿದ ಅವರು, ದೆಹಲಿ ಜನತೆ ಏನು ಬಯಸುತ್ತಾರೋ ಅದೇ ಆಗುತ್ತದೆ ಎಂದು ಹೇಳಿದರು.

ಮತದಾನ ಮಾಡಿದ ಉಪ ರಾಷ್ಟ್ರಪತಿ

ಮತದಾನ ಮಾಡಿದ ಉಪ ರಾಷ್ಟ್ರಪತಿ

ದೆಹಲಿಯ ನಿರ್ಮಾಣ್ ಭವನ ಮತಗಟ್ಟೆಯಲ್ಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಮತದಾನ ಮಾಡಿದರು.

ನೂಪುರ್ ಶರ್ಮಾ ಮತದಾನ

ನೂಪುರ್ ಶರ್ಮಾ ಮತದಾನ

ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿರುವ ಬಿಜೆಪಿಯ ನೂಪುರ್‌ ಶರ್ಮಾ ಮತದಾನದ ನಂತರ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

ಮತದಾನ ಮಾಡಿದ ವಾದ್ರಾ ದಂಪತಿ

ಮತದಾನ ಮಾಡಿದ ವಾದ್ರಾ ದಂಪತಿ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ ಮತ್ತು ರಾಬರ್ಟ್ ವಾದ್ರಾ ದಂಪತಿ ದೆಹಲಿಯಲ್ಲಿ ಶನಿವಾರ ಮಧ್ಯಾಹ್ನ ತಮ್ಮ ಹಕ್ಕನ್ನು ಚಲಾಯಿಸಿದರು.

ಮಹಿಳೆಯರಿಂದ ಹಕ್ಕು ಚಲಾವಣೆ

ಮಹಿಳೆಯರಿಂದ ಹಕ್ಕು ಚಲಾವಣೆ

ಕೊರೆಯುವ ಚಳಿಯ ನಡುವೆಯೂ ಶನಿವಾರ ಬೆಳ್ಳಂಬೆಳಗ್ಗೆ ಮಹಿಳೆಯರು ನವದೆಹಲಿ ವಿಧಾನಸಭೆ ಚುಣಾವಣೆಯಲ್ಲಿ ಮತದಾನ ಮಾಡಿದರು. ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.

ಮತದಾನ ಮಾಡಿದ ಮಹಿಳೆಯರು

ಮತದಾನ ಮಾಡಿದ ಮಹಿಳೆಯರು

ನವದೆಹಲಿಯಲ್ಲಿ ಶನಿವಾರ ಮತದಾನಕ್ಕಾಗಿ ಕಾದು ನಿಂತಿದ್ದ ಮಹಿಳೆಯರು ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

ಹಕ್ಕು ಚಲಾಯಿಸಿದ ಕಾಂಗ್ರೆಸ್ ನಾಯಕ ಅಜಯ್ ಮಾಕೇನ್

ಹಕ್ಕು ಚಲಾಯಿಸಿದ ಕಾಂಗ್ರೆಸ್ ನಾಯಕ ಅಜಯ್ ಮಾಕೇನ್

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಜಯ್ ಮಾಕೇನ್ ಅವರು ಶನಿವಾರ ತಮ್ಮ ಹಕ್ಕು ಚಲಾಯಿಸಿದರು.

ಮತದಾನ ಮಾಡಲು ನಾವು ಸಿದ್ಧ

ಮತದಾನ ಮಾಡಲು ನಾವು ಸಿದ್ಧ

ಶನಿವಾರ ನವದೆಹಲಿಯಲ್ಲಿ ಮತದಾನ ಮಾಡಲು ಕಾದು ನಿಂತಿದ್ದ ಪುರುಷರು ಕ್ಯಾಮರಾಕ್ಕೆ ಫೋಸ್ ಕೊಟ್ಟಿದ್ದು ಹೀಗೆ.

ನಮ್ಮ ಫೋಟೋನೂ ತಗೊಳ್ಳಿ

ನಮ್ಮ ಫೋಟೋನೂ ತಗೊಳ್ಳಿ

ದೆಹಲಿಯಲ್ಲಿ ಶನಿವಾರ ಮತದಾನ ಮಾಡಲು ಸಾಲುಗಟ್ಟಿ ನಿಂತಿದ್ದ ಮುಸ್ಲಿಂ ಮಹಿಳೆಯರು ವೋಟರ್ ಕಾರ್ಡ್ ಹಿಡಿದು ಫೋಸ್ ಕೊಟ್ಟಿದ್ದು ಹೀಗೆ.

ಉತ್ಸಾಹದಿಂದ ಮತದಾನ ಮಾಡಿದ ಮಹಿಳೆಯರು

ಉತ್ಸಾಹದಿಂದ ಮತದಾನ ಮಾಡಿದ ಮಹಿಳೆಯರು

ನವದೆಹಲಿಯಲ್ಲಿ ಮಹಿಳೆಯರು ಉತ್ಸಾಹದಿಂದ ಶನಿವಾರ ಮತದಾನ ಮಾಡಿದರು. ದೆಹಲಿಯ ಮತಗಟ್ಟೆಯಲ್ಲಿ ಮುಸ್ಲಿಂ ಮಹಿಳೆಯರು ಮತದಾನ ಮಾಡುವಾಗ ಕಂಡಿದ್ದು ಹೀಗೆ.

ನಮ್ಮ ಸರದಿ ಯಾವಾಗ ಬರುತ್ತೋ?

ನಮ್ಮ ಸರದಿ ಯಾವಾಗ ಬರುತ್ತೋ?

ದೆಹಲಿಯಲ್ಲಿ ಶನಿವಾರ ಮತದಾನ ಮಾಡಲು ಜನರು ಸಾಲುಗಟ್ಟಿ ನಿಂತಿದ್ದಾಗ ಕಂಡಿದ್ದು ಹೀಗೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+