ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಟ್ಟೆಯೊಳಗೆ ಹತ್ತು ಕೋಟಿ ಮಾಲು ಹೊತ್ತಿದ್ದ ವ್ಯಕ್ತಿ ದೆಹಲಿಯಲ್ಲಿ ಬಂಧನ

|
Google Oneindia Kannada News

ನವದೆಹಲಿ, ಜನವರಿ 13: ಹೊಟ್ಟೆಯೊಳಗೆ ಬರೋಬ್ಬರಿ ಹತ್ತು ಕೋಟಿ ಮೌಲ್ಯದ ಮಾದಕ ದ್ರವ್ಯವನ್ನು ಸಾಗಿಸುತ್ತಿದ್ದ ಗುಂಪನ್ನು ದೆಹಲಿ ವಿಮಾನ ನಿಲ್ದಾಣ ಅಧಿಕಾರಿಗಳು ಬಂಧಿಸಿದ್ದಾರೆ.

ಏಳು ಮಂದಿ ಅಫ್ಗಾನಿಸ್ತಾನ ಯುವಕರು ಹೆರಾಯಿನ್ ತುಂಬಿದ ಮಾತ್ರೆಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು ಭಾರತಕ್ಕೆ ಬಂದಿದ್ದರು. ಅನುಮಾನದ ಮೇಲೆ ವಿಚಾರಣೆ ನಡೆಸಿದ ವಿಮಾನ ನಿಲ್ದಾಣ ಸಿಬ್ಬಂದಿ ಬಂಧಿಸಿದ್ದಾರೆ.

ಬೆಂಗಳೂರು: ಹೈಟೆಕ್ ಗಾಂಜಾ 'ಕೃಷಿಕ' ಪೊಲೀಸರ ಬಲೆಗೆಬೆಂಗಳೂರು: ಹೈಟೆಕ್ ಗಾಂಜಾ 'ಕೃಷಿಕ' ಪೊಲೀಸರ ಬಲೆಗೆ

ಹತ್ತು ದಿನದ ಹಿಂದೆ ಈ ಗುಂಪು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಇವರಲ್ಲಿ ಕೆಲವರು ಹೆರಾಯಿನ್ ತುಂಬಿದ ಮಾತ್ರೆಗಳನ್ನು ನುಂಗಿದ್ದರು. ಅವರ ಹೊಟ್ಟೆಯಲ್ಲಿದ್ದ ಹೆರಾಯಿನ್ ಮಾದಕ ದ್ರವ್ಯದ ಮಾರುಕಟ್ಟೆ ಮೌಲ್ಯ ಬರೋಬ್ಬರಿ ಹತ್ತು ಕೋಟಿ ರೂಪಾಯಿ.

Delhi Airport Officer Arrest 9 Men Who Carried Heroine Capsule In Stomach

ಏಳು ಮಂದಿಯ ಹೊಟ್ಟೆಯೊಳಗಿನಿಂದ 177 ಹೆರಾಯಿನ್ ತುಂಬಿದ ಮಾತ್ರೆಗಳನ್ನು ಹೊರಕ್ಕೆ ತೆಗೆಯಲಾಗಿದೆ. ಈ ಮಾತ್ರೆಗಳನ್ನು ಹೊರಕ್ಕೆ ತೆಗೆಯಲು ವಿಮಾನ ನಿಲ್ದಾಣ ಸಿಬ್ಬಂದಿ 10 ಡಜನ್ ಬಾಳೆಹಣ್ಣು ಖರ್ಚು ಮಾಡಿದ್ದಾರಂತೆ.

ಈ ಏಳು ಯುವಕರು ಅಫ್ಗಾನಿಸ್ತಾನದಿಂದ ದೆಹಲಿಗೆ ಬರುವ ಹಾದಿಯಲ್ಲಿ ಏನೂ ತಿನ್ನದೆ, ಕುಡಿಯದೇ ಬಂದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಹ ಅನುಮಾನಾಸ್ಪದವಾಗಿ ನಡೆದುಕೊಂಡಿದ್ದಾರೆ ಹಾಗಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಸ್ಕ್ಯಾನಿಂಗ್ ಮಾಡಿಸಿದಾಗ ನಿಜ ಸಂಗತಿ ಗೊತ್ತಾಗಿದೆ.

ಬೆಂಗಳೂರು: ಕೋಟ್ಯಂತರ ಮೌಲ್ಯದ ಮಾದಕ ವಸ್ತು ವಶ, ಭಾರಿ ಜಾಲ ಪತ್ತೆಬೆಂಗಳೂರು: ಕೋಟ್ಯಂತರ ಮೌಲ್ಯದ ಮಾದಕ ವಸ್ತು ವಶ, ಭಾರಿ ಜಾಲ ಪತ್ತೆ

ಈ ಏಳು ಮಂದಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಇಬ್ಬರನ್ನು ವಿಮಾನ ನಿಲ್ದಾಣ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ದೆಹಲಿಯ ಹೊಟೆಲ್ ಗೆ ತೆರಳಿ ಅಲ್ಲಿ ಕ್ಯಾಪ್ಸೂಲ್ ಅನ್ನು ಹೊರಕ್ಕೆ ತೆಗೆಯುವ ಯೋಜನೆ ರೂಪಿಸಿದ್ದರು.

English summary
New Delhi airport officers arrest 9 men who carried heroine drug capsules in their stomach. 7 were caries drugs and two of them are the buyers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X