ಮಗು ಮೇಲೆ ಅತ್ಯಾಚಾರ ಮಾಡಿದ ಕೇರ್ ಟೇಕರ್ ಬಂಧನ

Posted By:
Subscribe to Oneindia Kannada

ದೆಹಲಿ, ನವೆಂಬರ್ 14 ; ಮಕ್ಕಳ ದಿನದಂದೇ ದೆಹಲಿಯಲ್ಲಿ ಮಗುವಿನ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಮಕ್ಕಳನ್ನು ನೋಡಿಕೊಳ್ಳಲು ಪೋಷಕರು ನೇಮಿಸಿದ್ದ ಮಕ್ಕಳ ಪಾಲಕನೇ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಒಡತಿ ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸಿದ ನಿಯತ್ತಿನ ನಾಯಿ!

ಈ ಹೇಯ ಘಟನೆಯು ದಕ್ಷಿಣ ದೆಹಲಿಯ ಶಾಹಪುರ್ ಘಾಟ್ ಎಂಬಲ್ಲಿ ಸೋಮವಾರ (ನವೆಂಬರ್ 13) ರಾತ್ರಿ ನಡೆದಿದೆ. ತಮ್ಮ ಒಂದೂವರೆ ವರ್ಷದ ಹೆಣ್ಣು ಮಗುವನ್ನು ನೋಡಿಕೊಳ್ಳಲೆಂದು ದಂಪತಿಗಳು ಖ್ಯಾತ ಸಂಸ್ಥೆಯಿಂದ ಕೇರ್ ಟೇಕರ್ ಒಬ್ಬನನ್ನು ನೇಮಿಸಿಕೊಂಡಿದ್ದರು. ಮಗಳ ರಕ್ಷಣೆಗೆಂದು ನೇಮಿಸಿಕೊಂಡವನೇ ಭಕ್ಷಕನಾಗಿ ಸಣ್ಣ ಮಗುವಿನ ಮೇಲೆ ಅತ್ಯಾಚಾರ ಮಾಡಿದ್ದಾನೆ.

Delhi:18 months girl raped by caretaker

ಗೊತ್ತಾದದ್ದು ಹೀಗೆ?
ಮಗುವಿನ ತಾಯಿ ಕೆಲಸ ಮುಗಿಸಿ ಮನೆಗೆ ಬಂದಾಗ ಮಗು ವಿಪರೀತ ಅಳುತಿತ್ತು. ತಾಯಿ ಸಮಾಧಾನ ಪಡಿಸಲು ನೋಡಿದಾಗ ಮಗುವಿನ ಗುಪ್ತಾಂಗದಿಂದ ರಕ್ತಸ್ರಾವವಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕೇರ್ ಟೇಕರ್ ನನ್ನು ಪ್ರಶ್ನಿಸಿದಾಗ ತನಗೆ ಗೊತ್ತಿಲ್ಲವೆಂದು ಆತ ಹೇಳಿದ್ದಾನೆ. ಅನುಮಾನಗೊಂಡ ತಾಯಿ ಕೂಡಲೇ ಆಕೆ ಆತನನ್ನು ಕೋಣೆಯಲ್ಲಿ ಕೂಡಿ ಹಾಕಿ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾಳೆ. ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ವಿಷಯ ತಿಳಿದೊಡನೆ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಆರೋಪಿ ವಿರುದ್ಧ ಹಾಜ್ ಖಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಂಪತಿಗಳಿಬ್ಬರೂ ಕೆಲಸಕ್ಕೆ ಹೋಗುವವರಾದರೆ ಮಕ್ಕಳನ್ನು ನೋಡಿಕೊಳ್ಳಲು ಕೇರ್ ಟೇಕರ್ ಗಳನ್ನು ನೇಮಿಸಿಕೊಳ್ಳುವ ಪದ್ಧತಿ ಕೆಲ ವರ್ಷದಿಂದ ಪ್ರಚಲಿತದಲ್ಲಿದೆ. ಮಕ್ಕಳ ಆಹಾರ, ಉಡುಪುಗಳನ್ನು ನೋಡಿಕೊಳ್ಳುವ ಜೊತೆಗೆ ಅವರನ್ನು ಆಟ ಆಡಿಸುವ ಕೆಲಸಗಳನ್ನು ಈ ಕೇರ್ ಟೇಕರ್ ಗಳು ಮಾಡುತ್ತಾರೆ. ಆದರೆ ದೆಹಲಿಯಲ್ಲಿ ಈಗ ನಡೆದಿರುವ ಘಟನೆ ದೇಶದೆಲ್ಲೆಡೆ ಕೇರ್ ಟೇಕರ್ ಗಳನ್ನು ಪೋಷಕರು ಅನುಮಾನದಿಂದ ನೋಡುವಂತೆ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A one-and-half-year-old girl was allegedly raped by her caretaker in Shahpur Jat village area in South Delhi on Monday. The police said that the accused was hired to be the caretaker of the girl. The girl was rushed to Safdarjung Hospital where she is undergoing treatment.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ