• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕಿಸ್ತಾನಕ್ಕೆ ರಕ್ಷಣಾ ಸಚಿವರ ಎಚ್ಚರಿಕೆ

|

ನವದೆಹಲಿ, ಸೆಪ್ಟೆಂಬರ್ 6: ಪಾಕಿಸ್ತಾನಕ್ಕೆ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಭಾರತೀಯರು ಎಂದಿಗೂ ಯುದ್ಧೋತ್ಸಾಹಿಗಳಲ್ಲ. ಆದರೆ ನಮ್ಮ ಮೇಲೆ ದಾಳಿಗೆ ಬಂದರೆ ಎಲ್ಲ ಕುತಂತ್ರಗಳನ್ನೂ ಭೇದಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಕ್ಷಣೆಯ ರಾಜತಂತ್ರ ಭಾರತದ ಮೂಲ ಧ್ಯೇಯವಾಗಿದ್ದು, ಅಷ್ಟೇ ಸಾಮರ್ಥ್ಯದಿಂದ ವೈರಿಗಳನ್ನು ಎದುರಿಸಲೂ ಬಲ್ಲೆವು. ಭಾರತೀಯ ಸೇನೆ ದೇಶ ರಕ್ಷಣೆ ಮಾಡುವುದಲ್ಲದೆ , ಯಾವುದೇ ಕುತಂತ್ರಗಳನ್ನು ಭೇದಿಸುವ ಚಾಕಚಕ್ಯತೆ ಹೊಂದಿದೆ ಎಂದು ಕೊರಿಯಾ ಪ್ರವಾಸದಲ್ಲಿರುವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇಮ್ರಾನ್ ಖಾನ್ 'ಗೂಗ್ಲಿ'ಗೆ ರಾಜನಾಥ್ ಸಿಂಗ್ 'ರಿವರ್ಸ್ ಸ್ವೀಪ್'

ಹಾಗೆಯೇ ಚೀನಾಕ್ಕೂ ಹೆಸರು ಹೇಳದೆ ಎಚ್ಚರಿಕೆ ನೀಡಿರುವ ಅವರು ಎಲ್ಲಾ ದೇಶಗಳಿಗೂ ಖಾಲಿ ಜಾಗಗಳಾದ ಸಮುದ್ರ ಹಾಗೂ ಗಾಳಿಯ ಮೇಲೆ ಸಮಾನ ಹಕ್ಕಿದೆ. ಅವುಗಳನ್ನು ಸೌಹಾರ್ದತೆಯಿಂದ ಹೊಂದಬೇಕು. ಇಂಡೋ-ಫೆಸಿಪಿಕ್ ವಿಚಾರದಲ್ಲೂ ಇದನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

ರಕ್ಷಣೆಗಾಗಿ 5 ಮಂತ್ರಗಳನ್ನೂ ತಿಳಿಸಿರುವ ರಕ್ಷಣಾ ಸಚಿವರ ಪರಸ್ಪರ ಗೌರವ, ಸಂವಾದ ಮತ್ತು ಚರ್ಚೆಗಳು, ಸಹಯೋಗದ ಕಾರ್ಯಗಳು, ಶಾಂತಿ ಹಾಗೂ ಸಮೃದ್ಧಿಯಿಂದ ದೇಶ ಯಶಸ್ಸು ಕಾಣಲು ಸಾಧ್ಯವಿದೆ.

English summary
Defense Minister Rajnath Singh Says that The Indians were never militants. But the Indian army is ready to crack all the machinations if it attacks us.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X