ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ತೆ-ಮಾವನ ಆಸ್ತಿಯಲ್ಲಿ ಸೊಸೆಗಿಲ್ಲ ಅಧಿಕಾರ

By Kiran B Hegde
|
Google Oneindia Kannada News

ನವದೆಹಲಿ, ಜ. 6: ಮಹಿಳೆಯೋರ್ವಳು ವಿವಾಹ ವಿಚ್ಛೇದನ ಪಡೆದಾಗ ಆಕೆಗೆ ಪತಿಯ ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಆಸ್ತಿಯಲ್ಲಿಯೂ ಶೇ. 50ರಷ್ಟು ಪಾಲು ನೀಡುವ ಕುರಿತು ಕಾನೂನು ಜಾರಿಗೆ ತರುವ ಪ್ರಸ್ತಾವನೆ ಇದೆ.

ದೇಶದಲ್ಲಿ ಕೌಟುಂಬಿಕ ಹಿಂಸೆ ಕಾಯ್ದೆಯ ದುರುಪಯೋಗ ಹೆಚ್ಚುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಉದ್ದೇಶಿತ ಕಾನೂನು ಈಗಾಗಲೇ ವಿವಾದಕ್ಕೆ ಕಾರಣವಾಗಿದೆ. ಈ ಮಧ್ಯೆ ಅತ್ತೆ ಮಾವನ ಆಸ್ತಿ ಮೇಲೆ ಸೊಸೆಗೆ ಯಾವುದೇ ಅಧಿಕಾರ ಇಲ್ಲ ಎಂದು ದಿಲ್ಲಿಯ ನ್ಯಾಯಾಲಯವೊಂದು ತೀರ್ಪು ನೀಡಿದೆ. [ಮದುವೆಗಾಗಿ ಇಸ್ಲಾಂಗೆ ಮತಾಂತರ ಅಸಿಂಧು]

court

ಪ್ರಕರಣವೇನು? : ಗೃಹ ಹಿಂಸೆ ಪ್ರಕರಣವೊಂದರಲ್ಲಿ ಅಧೀನ ನ್ಯಾಯಾಲಯವು ಸೊಸೆಯ ಪರವಾಗಿ ತೀರ್ಪು ನೀಡಿತ್ತು. ಅತ್ತೆ, ಮಾವನ ಮನೆಯಲ್ಲಿ ಸೊಸೆಯೂ ವಾಸ ಮಾಡಬಹುದೆಂದು ತಿಳಿಸಿತ್ತು. [ಮಡೆ ಮಡೆ ಸ್ನಾನ : ಹೈ ಆದೇಶಕ್ಕೆ ಸುಪ್ರೀಂ ತಡೆ]

ಇದನ್ನು ಪ್ರಶ್ನಿಸಿ ಅತ್ತೆ-ಮಾವ ನವದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಸೊಸೆಗೆ ನಾವು ಯಾವುದೇ ಹಿಂಸೆ ನೀಡಿಲ್ಲ. ಈ ಮನೆ ನಮಗೆ ಸೇರಿದ್ದು ಎಂದು ವಾದಿಸಿದ್ದರು. ಈ ವಾದವನ್ನು ಪುರಸ್ಕರಿಸಿದ ಸೆಷನ್ಸ್ ನ್ಯಾಯಾಲಯವು ಅಧೀನ ನ್ಯಾಯಾಲಯ ನೀಡಿದ್ದ ಆದೇಶ ರದ್ದುಗೊಳಿಸಿ ತೀರ್ಪು ನೀಡಿತು.

ಅತ್ತೆ-ಮಾವನಿಗೆ ಪರಿಪೂರ್ಣವಾಗಿ ಸೇರಿದ ಯಾವುದೇ ಆಸ್ತಿಯಲ್ಲಿ ಸೊಸೆಗೆ ಹಕ್ಕಿಲ್ಲ. ಅದು ಪತಿಯ ಆಸ್ತಿಯಾಗಿದ್ದರೆ ಅಥವಾ ಪತಿಗೆ ಪಾಲಿದ್ದರೆ ಮಾತ್ರ ಸೊಸೆ ಹಕ್ಕು ಮಂಡಿಸಬಹುದು ಎಂದು ತೀರ್ಪಿನಲ್ಲಿ ತಿಳಿಸಿದೆ.

English summary
A additional sessions court of New Delhi has denied a woman the right to reside in a house owned by her father-in-law in a domestic violence case. Earliar trial court had directed to allow her re-entry in father-in-law's house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X