• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಮಾನಯಾನದಲ್ಲಿ 1,000 ಕೋಟಿ ರೂಪಾಯಿ ಉಳಿಸಲು ಹೊಸ ಐಡಿಯಾ!

|

ನವದೆಹಲಿ, ಮೇ.18: ಮುಳುಗುವವನಿಗೆ ಹುಲ್ಲುಕಡ್ಡಿಯೇ ಆಸರೆ ಅಂತಾರಲ್ವಾ. ನೊವೆಲ್ ಕೊರೊನಾ ವೈರಸ್ ಅಟ್ಟಹಾಸಕ್ಕೆ ಸಿಕ್ಕು ನಲುಗಿದ ಜಗತ್ತು ಸಾಧ್ಯವಾದಷ್ಟು ಹಣ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಇನ್ನು, 20 ಲಕ್ಷ ಕೋಟಿ ಘೋಷಿಸಿದ ಭಾರತದಲ್ಲಿ ಈಗಾಗಲೇ ವಿಮಾನಯಾನದ ಸ್ಥಿತಿ ಶೋಚನೀಯವಾಗಿದೆ.

ಕೇಂದ್ರ ಸರ್ಕಾರಿ ಅಧೀನದ ವಿಮಾನಯಾನ ಸಂಸ್ಥೆಗಳೇ ಬಾಗಿಲು ಹಾಕಿಕೊಳ್ಳುವ ದುಸ್ಥಿತಿಗೆ ತಲುಪಿವೆ. ಇಂಥ ಸಂದರ್ಭದಲ್ಲಿ ಕೇಂದ್ರ ವಿಮಾನಯಾನ ಸಂಶೋಧನಾ ತಂಡದ ಸಲಹೆಗಾರ ಸತ್ಯೇಂದ್ರ ಪಾಂಡೆ ಅವರು ಪ್ರತಿವರ್ಷ 1,000 ಕೋಟಿ ರೂಪಾಯಿ ಉಳಿತಾಯ ಮಾಡುವಂತಾ ಐಡಿಯಾವನ್ನು ನೀಡಿದ್ದಾರೆ. ಅಂಕಿ-ಅಂಶಗಳ ಮೂಲಕ ವಿಮಾನಯಾನದಲ್ಲಿ ಪ್ರತಿವರ್ಷವೂ 1,000 ಕೋಟಿ ರೂಪಾಯಿ ಉಳಿಸಲು ಸಾಧ್ಯವೆಂಬ ಬಗ್ಗೆ ವಿಶೇಷ ವರದಿಯೊಂದನ್ನು ಬರೆದಿದ್ದಾರೆ.

ಜುಲೈ ತಿಂಗಳಾಂತ್ಯಕ್ಕೆ ಭಾರತಕ್ಕೆ ಸೇರ್ಪಡೆಯಾಗಲಿದೆ 4 ರಫೇಲ್ ಯುದ್ಧ ವಿಮಾನ

ಕಳೆದ 2019ನೇ ಸಾಲಿನಲ್ಲಿ 26 ಲಕ್ಷ ವಾಣಿಜ್ಯ ವಿಮಾನಗಳು ಹಾರಾಟ ನಡೆಸಿದ್ದು, ಪ್ರತಿನಿತ್ಯ ಕನಿಷ್ಠ 7,000 ವಿಮಾನಗಳು ಹಾರಾಟ ನಡೆಸಲಿವೆ. ಇಂದಿಗೂ ಅದೆಷ್ಟೋ ವಿಮಾನಗಳ ಸಂಚಾರಕ್ಕೆ ನೇರ ಸಂಪರ್ಕ ಕೊಂಡಿ ಬೆಸೆದುಕೊಂಡಿಲ್ಲ. ಸುಖಾಸುಮ್ಮನೆ ಸುತ್ತುಹಾಕಿಕೊಂಡು ಗುರಿ ತಲುಪುವಂತಾ ಪರಿಸ್ಥಿತಿಯಿದೆ.

ಆದರೆ ಸನ್ನಿವೇಶ ಬದಲಾಗಿದೆ. ಎರಡು ಮಾರ್ಗಗಳ ನಡುವಿನ ನೇರ ಸಂಪರ್ಕದ ಪಥವನ್ನು ಕಂಡುಕೊಂಡಿದ್ದೇ ಆದರೆ ವಿಮಾನ ಹಾರಾಟ ನಡೆಸುವ ಎರಡು ಪ್ರದೇಶಗಳ ನಡುವಿನ ಅಂತರ ಕಡಿಮೆಯಾಗುತ್ತದೆ. ಹೀಗೆ ಅಂತರ ಕಡಿಮೆಯಾದಷ್ಟು ವಿಮಾನಯಾನಕ್ಕೆ ಲಾಭ ಹೆಚ್ಚಾಗಲಿದೆ. ಅದು ಹೇಗೆ ಎಂಬುದನ್ನು ಈ ವರದಿಯಲ್ಲಿ ನೋಡೋಣ.

ವಿಮಾನಗಳ ನೇರ ಸಂಚಾರಕ್ಕೆ ನೂರಾರು ವಿಘ್ನ!

ವಿಮಾನಗಳ ನೇರ ಸಂಚಾರಕ್ಕೆ ನೂರಾರು ವಿಘ್ನ!

ಭಾರತದಲ್ಲಿ ವಿಮಾನಗಳ ನೇರ ಸಂಚಾರಕ್ಕೆ ಸಾಕಷ್ಟು ವಿಘ್ನಗಳಿವೆ. ವಾಯು ಪ್ರದೇಶದಲ್ಲಿ ನಿರ್ದಿಷ್ಟ ಗುರಿಯನ್ನು ತಲುಪಲು ನೇರ ಪಥದಲ್ಲಿ ಹಾರಾಟ ನಡೆಸಲು ವಿಮಾನಗಳಿಗೆ ನಿರ್ಬಂಧಗಳಿವೆ. ಕೆಲವು ಬಾರಿ ಸುತ್ತುಹಾಕಿಕೊಂಡು ವಿಮಾನಗಳು ಹಾರಾಟ ನಡೆಸುತ್ತವೆ. ಆದರೆ ಎರಡು ಊರುಗಳ ನಡುವಿನ ವಾಯುಪ್ರದೇಶದಲ್ಲಿ ಕಡಿಮೆ ಅಂತರದ ಪಥದಲ್ಲಿ ಸಂಚರಿಸಿದರೆ ಹೆಚ್ಚು ಇಂಧನ ಉಳಿಸಲು ಸಾಧ್ಯವಾಗುತ್ತದೆ. ಇದರಿಂದ ಹಣವೂ ಉಳಿತಾಯವಾಗುತ್ತದೆ.

ದೇಶದಲ್ಲಿನ ವಾಯುಪ್ರದೇಶದ ಬಗ್ಗೆ ಮಾಹಿತಿ

ದೇಶದಲ್ಲಿನ ವಾಯುಪ್ರದೇಶದ ಬಗ್ಗೆ ಮಾಹಿತಿ

ಭಾರತದ ವಾಯುಪ್ರದೇಶವು 2.8 ಮಿಲಿಯನ್ ಸ್ಕ್ವೇರ್ ನೌಟಿಕಲ್ ಮೈಲ್ಸ್ ಪ್ರದೇಶವನ್ನು ಹೊಂದಿದೆ. ಈ ಪೈಕಿ 1.04 ಮಿಲಿಯನ್ ಸ್ಕ್ವೇರ್ ನೌಟಿಕಲ್ ಮೈಲ್ಸ್ ಭೂಖಂಡ ಪ್ರದೇಶವಾಗಿದ್ದರೆ, 1.74 ಮಿಲಿಯನ್ ಸ್ಕ್ವೇರ್ ನೌಟಿಕಲ್ ಮೈಲ್ಸ್ ಸಮುದ್ರ ಮೇಲ್ಭಾಗದ ಪ್ರದೇಶವಾಗಿದೆ. ಅರಬ್ಬಿ ಸಮುದ್ರದ ಮೇಲ್ಭಾಗದ ಶೇ.65ರಷ್ಟು ಪ್ರದೇಶವು ಸೇನಾ ನಿಯಂತ್ರಣದಲ್ಲಿದ್ದು, ಉಳಿದ ಪ್ರದೇಶವನ್ನು ಭಾರತೀಯ ವಿಮಾನಯಾನ ಪ್ರಾಧಿಕಾರವು ನಿಯಂತ್ರಿಸುತ್ತದೆ. ಇನ್ನು, ಸ್ಕ್ವೇರ್ ನೌಟಿಕಲ್ ಮೈಲ್ಸ್ ಎಂದರೇನು ಅಂತಾ ತಿಳಿದುಕೊಳ್ಳುವುದಾದರೆ ವಾಯು ಸಂಚಾರದಲ್ಲಿ ದೂರವನ್ನು ಅಳೆಯುವ ಒಂದು ಮಾಪನವಾಗಿದೆ. ಒಂದು ಸ್ಕ್ವೇರ್ ನೌಟಿಕಲ್ ಮೈಲ್ಸ್ ಎಂದರೆ 3.43 ಕಿಲೋ ಮೀಟರ್ ಆಗುತ್ತದೆ.

ಭಾರತದಲ್ಲಿ ವಿಮಾನಗಳ ಹಾರಾಟ ಸಂಖ್ಯೆ ಡಬಲ್

ಭಾರತದಲ್ಲಿ ವಿಮಾನಗಳ ಹಾರಾಟ ಸಂಖ್ಯೆ ಡಬಲ್

ಕಳೆದ 2010-2019ನೇ ಸಾಲಿನಲ್ಲಿ ಭಾರತದಲ್ಲಿ ವಿಮಾನಗಳ ಹಾರಾಟ ಸಂಖ್ಯೆಯು 1.36 ಮಿಲಿಯನ್ ನಿಂದ 2.60 ಮಿಲಿಯನ್ ಗೆ ಏರಿಕೆಯಾಗಿದೆ. 9 ವರ್ಷಗಳಲ್ಲೇ ವಿಮಾನಯಾನ ಬಳಕೆಯ ಸಂಖ್ಯೆಯು ಇಮ್ಮಡಿಯಾಿಗಿದೆ. ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಜೊತಗೆ ವೇಗದ ಬದುಕಿಗೆ ಒಗ್ಗಿಕೊಳ್ಳುವ ಜನರು ವಿಮಾನಯಾನದ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಾಯು ಪ್ರದೇಶಗಳ ನಡುವಿನ ಅಂತರ ಕುಗ್ಗಿಸುವುದು

ವಾಯು ಪ್ರದೇಶಗಳ ನಡುವಿನ ಅಂತರ ಕುಗ್ಗಿಸುವುದು

ಎರಡು ಊರುಗಳ ನಡುವೆ ಸಂಚರಿಸುವ ವಿಮಾನಗಳ ಮಾರ್ಗಮಧ್ಯದಲ್ಲಿ ಕೆಲವು ಪಥದಲ್ಲಿ ಸಂಚರಿಸದಂತೆ ನಿರ್ಬಂಧವನ್ನು ವಿಧಿಸಲಾಗಿದೆ. ಈ ನಿರ್ಬಂಧವನ್ನು ಕೊಂಚ ಸಡಿಲಕೊಳಿಸಿದರೆ, ಎರಡು ಕೇಂದ್ರಗಳ ನಡುವಿನ ಶಾರ್ಟ್ ಕಟ್ ರೂಟ್ ನ್ನು ಕಂಡುಕೊಂಡರೆ ಇಂಧನ ಉಳಿತಾಯ ಆಗುತ್ತದೆ. ಇದನ್ನೇ ಫ್ಲೆಕ್ಸಿಬಲ್ ಯೂಸ್ ಆಫ್ ಏರ್ ಸ್ಪೇಸ್ ನಿಯಮ ಎಂದು ಕರೆಯಲಾಗುತ್ತಿದೆ.

ಸುಲಭವಾಗಿ FUA ನಿಯಮ ಪಾಲನೆ ಅನುಮತಿ ಸಿಗದು!

ಸುಲಭವಾಗಿ FUA ನಿಯಮ ಪಾಲನೆ ಅನುಮತಿ ಸಿಗದು!

ಫ್ಲೆಕ್ಸಿಬಲ್ ಯೂಸ್ ಆಫ್ ಏರ್ ಸ್ಪೇಸ್ ನಿಯಮವನ್ನು ಚಾಲ್ತಿಗೆ ತರಬೇಕಾದಲ್ಲಿ ಕೇಂದ್ರ ಗೃಹ ಸಚಿವಾಲಯ, ಭಾರತೀಯ ವಾಯುಸೇನೆ, ಕೇಂದ್ರ ವಿಮಾನಯಾನ ಸಚಿವಾಲಯ, ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ, ಭಾರತೀಯ ವಿಮಾನಯಾನ ಪ್ರಾಧಿಕಾರ ಹಾಗೂ ಇಸ್ರೋ ಸಹಕಾರ ಬೇಕಾಗುತ್ತದೆ. ಪ್ರತಿಯೊಂದು ಕೇಂದ್ರವು ನೀಡುವ ಪ್ರಾಮುಖ್ಯತೆ, ಲೆಕ್ಕಾಚಾರಗಳು ಭಿನ್ನವಾಗಿದೆ. 2012ರಲ್ಲಿ ಒಂದು ಬಾರಿ ಕೇಂದ್ರ ಗೃಹ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಂಸ್ಥೆಯು ಫ್ಲೆಕ್ಸಿಬಲ್ ಯೂಸ್ ಆಫ್ ಏರ್ ಸ್ಪೇಸ್ ಬಗ್ಗೆ ಚರ್ಚೆ ನಡೆಸಿದ್ದರೂ, ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ.

70 ಲೀಟರ್ ಇಂಧನ ವ್ಯಯಕ್ಕೆ ಒಂದೇ ನಿಮಿಷ

70 ಲೀಟರ್ ಇಂಧನ ವ್ಯಯಕ್ಕೆ ಒಂದೇ ನಿಮಿಷ

ದೇಶದಲ್ಲಿ ವಾಯುನೆಲೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಫ್ಲೆಕ್ಸಿಬಲ್ ಯೂಸ್ ಆಫ್ ಏರ್ ಸ್ಪೇಸ್ ನಿಯಮ ಜಾರಿಗೊಳಿಸಲು ಸಾಧ್ಯವಾಗದಿರಬಹುದು. ಆದರೆ ಉಳಿದ ಭಾಗದಲ್ಲಿ ಈ ನಿಯಮವನ್ನು ಅನುಷ್ಛಾಗೊಳಿಸಬೇಕು. ಏಕೆಂದರೆ ಹೆಚ್ಚುವರಿ ಹಾರಾಟದಿಂದ 1 ನಿಮಿಷಕ್ಕೆ 60-70 ಲೀಟರ್ ಇಂಧನವು ಸುಡುತ್ತದೆ. 25 ನಿಮಿಷಗಳ ಕಾಲ ಒಂದು ವಿಮಾನ ಸುತ್ತು ಹಾಕುವುದರಿಂದ ಹೆಚ್ಚುವರಿಯಾಗಿ 1,750 ಲೀಟರ್ ಇಂಧನವು ವ್ಯಯವಾಗುತ್ತದೆ. ಇದು ಕೇವಲ ಒಂದೇ ವಿಮಾನದ ಲೆಕ್ಕವಾಗಿದ್ದು, ನಿತ್ಯವೂ ಹೀಗೆ ಸಾಕಷ್ಟು ವಿಮಾನಗಳು ಸಂಚರಿಸುತ್ತವೆ. ಅಂಥದ್ದೇ ಒಂದು ಮಾರ್ಗವನ್ನು ಇದೀಗ ಪತ್ತೆ ಮಾಡಲಾಗಿದ್ದು, ಶಾರ್ಟ್ ಕಟ್ ಕೂಟ್ ನ್ನು ಕೂಡಾ ಪತ್ತೆ ಹಚ್ಚಲಾಗಿದೆ.

ಮುಂಬೈ-ದೆಹಲಿ ನಡುವಿನ ಸಂಚಾರಕ್ಕೆ ಉಳಿತಾಯ ಮಾರ್ಗ

ಮುಂಬೈ-ದೆಹಲಿ ನಡುವಿನ ಸಂಚಾರಕ್ಕೆ ಉಳಿತಾಯ ಮಾರ್ಗ

ದೆಹಲಿ ಮತ್ತು ಮುಂಬೈ ನಡುವಿನ ವಿಮಾನ ಸಂಚಾರದ ಮಾರ್ಗದಲ್ಲಿ ಶಾರ್ಟ್ ಕಟ್ ಮಾರ್ಗವನ್ನು ಕಂಡುಕೊಳ್ಳಲಾಗಿದೆ. ಇದರಿಂದ ಕನಿಷ್ಠ 15 ರಿಂದ 30 ನಿಮಿಷಗಳ ಕಾಲ ಬೇಗನೇ ನಿರ್ದಿಷ್ಟ ಗುರಿ ತಲುಪುವುದಕ್ಕೆ ಸಾಧ್ಯವಾಗುತ್ತದೆ. ಇಂಧನ ವ್ಯಯದ ಪ್ರಮಾಣವೂ ಕಡಿಮೆಯಾಗಲಿದ್ದು, ಪ್ರತಿವರ್ಷಕ್ಕೆ 1,000 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಉಳಿತಾಯ ಮಾಡಬಹುದು ಎಂದು ಕೇಂದ್ರ ವಿಮಾನಯಾನ ಸಂಶೋಧನಾ ತಂಡದ ಸಲಹೆಗಾರ ಸತ್ಯೇಂದ್ರ ಪಾಂಡೆ ತಮ್ಮ ವರದಿಯಲ್ಲಿ ಸಲಹೆ ನೀಡಿದ್ದಾರೆ.

English summary
New Idea to Save 1,000 Crore Rupees On Airline
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X