ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ ಎಂದ ಕೇಂದ್ರ - ಭಾರತ್‌ ಬಯೋಟೆಕ್‌ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಮೇ, 29: ವರ್ಷಾಂತ್ಯಕ್ಕೆ ಎಲ್ಲ ಭಾರತೀಯರಿಗೆ ಕೋವಿಡ್‌ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಭರವಸೆ ನೀಡಿದ ಬೆನ್ನಲ್ಲೇ ಭಾರತೀಯ ಕೋವಿಡ್‌ ಲಸಿಕೆ ಕೋವಾಕ್ಸಿನ್ ತಯಾರಕ ಸಂಸ್ಥೆ ಭಾರತ್ ಬಯೋಟೆಕ್, ಉತ್ಪಾದಿಸಿದ ಲಸಿಕೆಯನ್ನು ಸರಬರಾಜು ಮಾಡಲು 120 ದಿನಗಳಿಂದ ಸುಮಾರು ನಾಲ್ಕು ತಿಂಗಳುಗಳು ಬೇಕಾಗುತ್ತದೆ ಎಂದು ಹೇಳಿದೆ.

ಈ ವರ್ಷದ ಮಾರ್ಚ್‌ನಲ್ಲಿ ಪ್ರಾರಂಭಿಸಲಾದ ಕೋವಾಕ್ಸಿನ್ ಉತ್ಪಾದನೆಯು ಜೂನ್ ತಿಂಗಳಲ್ಲಿ ಸರಬರಾಜಿಗೆ ಸಿದ್ಧವಾಗಲಿದೆ ಎಂದು ಕಂಪನಿಯು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಕೊರೊನಾ ಲಸಿಕೆಗಳ ಕೊರತೆಗೆ ರಾಜ್ಯಗಳೇ ಹೊಣೆ: ಡಾ. ವಿಕೆ ಪೌಲ್ಕೊರೊನಾ ಲಸಿಕೆಗಳ ಕೊರತೆಗೆ ರಾಜ್ಯಗಳೇ ಹೊಣೆ: ಡಾ. ವಿಕೆ ಪೌಲ್

ಇನ್ನು ಈವರೆಗೆ ಭಾರತ್ ಬಯೋಟೆಕ್‌ ಸಂಸ್ಥೆಯು ಸುಮಾರು 2 ರಿಂದ 2.5 ಕೋಟಿ ಡೋಸ್‌ ಕೋವಾಕ್ಸಿನ್‌ ಸರಬರಾಜು ಮಾಡಿದೆ ಎಂದು ವರದಿಯಾಗಿದೆ.

ಡಿಸೆಂಬರ್ ವೇಳೆಗೆ 216 ಕೋಟಿ ಡೋಸ್ ಲಸಿಕೆ ಲಭ್ಯ ಎಂದಿದ್ದ ಪೌಲ್‌

ಡಿಸೆಂಬರ್ ವೇಳೆಗೆ 216 ಕೋಟಿ ಡೋಸ್ ಲಸಿಕೆ ಲಭ್ಯ ಎಂದಿದ್ದ ಪೌಲ್‌

ಇತ್ತೀಚೆಗೆ ಭಾರತದ ಕೋವಿಡ್‌ ಸಲಹೆಗಾರ ಡಾ. ವಿ ಕೆ ಪೌಲ್‌, ಡಿಸೆಂಬರ್ ವೇಳೆಗೆ 216 ಕೋಟಿ ಡೋಸ್ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದ್ದರು. ಹಾಗೆಯೇ ಈ ಸಂದರ್ಭದಲ್ಲೇ ಕೋವಿಡ್‌ ಲಸಿಕೆಗಳಲ್ಲಿ ಕೊರತೆ ಉಂಟಾದರೆ ರಾಜ್ಯಗಳೇ ಹೊಣೆ ಎಂದು ಹೇಳಿದ್ದರು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆಯ 2-3 ಹಂತದ ಪ್ರಯೋಗಕ್ಕೆ ಜೂನ್‌ನಲ್ಲಿ ಚಾಲನೆಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆಯ 2-3 ಹಂತದ ಪ್ರಯೋಗಕ್ಕೆ ಜೂನ್‌ನಲ್ಲಿ ಚಾಲನೆ

ಭಾರತ್‌ ಬಯೋಟೆಕ್‌ ಹೇಳಿದ್ದೇನು?

ಭಾರತ್‌ ಬಯೋಟೆಕ್‌ ಹೇಳಿದ್ದೇನು?

ಏಪ್ರಿಲ್ 15 ರಂದು ಭಾರತ್‌ ಬಯೋಟೆಕ್‌ ನೀಡಿದ ಹೇಳಿಕೆಯ ಪ್ರಕಾರ, ಸಂಸ್ಥೆಯು ಜುಲೈ-ಆಗಸ್ಟ್‌ನಲ್ಲಿ 6-7 ಕೋಟಿ ಡೋಸ್‌ ಲಸಿಕೆ ಉತ್ಪಾದಿಸಲಿದೆ. ಸೆಪ್ಟೆಂಬರ್‌ನಿಂದ ಲಸಿಕೆ ಉತ್ಪದಾನೆ ಹೆಚ್ಚಿಸಿ ಈ ಅವಧಿಯಲ್ಲಿ 10 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡಲಿದೆ. ಜುಲೈ-ಡಿಸೆಂಬರ್‌ನ ಅವಧಿಯಲ್ಲಿ ಕನಿಷ್ಠ 52 ಕೋಟಿ ಡೋಸ್‌ಗಳು ಉತ್ಪಾದನೆ ಮಾಲಿದೆ. ಈ ಪೈಕಿ ಸೆಪ್ಟೆಂಬರ್-ಡಿಸೆಂಬರ್‌ನ ಅವಧಿಯಲ್ಲಿ 40 ಕೋಟಿ ಲಸಿಕೆ ಉತ್ಪಾದನೆ ಆಗಲಿದೆ.

ಈ ವರ್ಷದ ಅಂತ್ಯಕ್ಕೆ ಕೋವಿಡ್‌ ಲಸಿಕೆ ಅಭಿಯಾನ ಅಂತ್ಯ?

ಈ ವರ್ಷದ ಅಂತ್ಯಕ್ಕೆ ಕೋವಿಡ್‌ ಲಸಿಕೆ ಅಭಿಯಾನ ಅಂತ್ಯ?

ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎಂಬ ಎರಡು ಲಸಿಕೆಗಳ ಪೂರೈಕೆಯಲ್ಲಿ ವೇಗ ಹೆಚ್ಚಿದರೆ ಸುಮಾರು ಶೇ.60 ರಷ್ಟು ಅಥವಾ ಸುಮಾರು 130 ಕೋಟಿ ಲಸಿಕೆ ಪ್ರತಿ ಭಾರತೀಯರಿಗೆ ಒಂದು ಬಾರಿಗೆ ಹಾಕಬಹುದು ಎಂದು ವರದಿಯಾಗಿದೆ. ಆದಾಗ್ಯೂ ಉತ್ಪಾದನೆ ಮತ್ತು ಪೂರೈಕೆಯ ನಡುವಿನ ಸಮಯದ ಬಗ್ಗೆ ಭಾರತ್ ಬಯೋಟೆಕ್ ಹೇಳಿದ್ದರಿಂದ, ಈ ವರ್ಷದಲ್ಲಿ ಎಲ್ಲಾ ಈ ಅಭಿಯಾನ ಮುಕ್ತಾಯವಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗಿದೆ.

43ನೇ GST ಮಂಡಳಿ ಸಭೆ: ಕೊರೊನಾ ಉಪಕರಣಗಳ ಮೇಲೆ ವಿಶೇಷ ವಿನಾಯತಿ43ನೇ GST ಮಂಡಳಿ ಸಭೆ: ಕೊರೊನಾ ಉಪಕರಣಗಳ ಮೇಲೆ ವಿಶೇಷ ವಿನಾಯತಿ

 ಕೇಂದ್ರ ಹೇಳಿದ್ದೇನು?

ಕೇಂದ್ರ ಹೇಳಿದ್ದೇನು?

ಕೇಂದ್ರವು ಶುಕ್ರವಾರದವರೆಗೆ 2.1 ಕೋಟಿ ಡೋಸ್‌ಗಳನ್ನು ನೀಡಿದೆ. ಈ ಕೊವಾಕ್ಸಿನ್ ಪ್ರಮಾಣವನ್ನು ಒಳಗೊಂಡಂತೆ ಜನವರಿಯಲ್ಲಿ ಲಸಿಕೆ ಚಾಲನೆ ಪ್ರಾರಂಭವಾದಾಗಿನಿಂದ ಭಾರತ್ ಬಯೋಟೆಕ್‌ನಿಂದ 3.1 ಕೋಟಿ ಡೋಸ್‌ಗಳನ್ನು ಕೇಂದ್ರ ಪಡೆದಿದೆ. ಜೂನ್ ಅಂತ್ಯದ ವೇಳೆಗೆ ಇದು ಇನ್ನೂ 1 ಕೋಟಿಗೆ ಲಭಿಸಲಿದೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಹಾಗೆಯೇ ಸರ್ಕಾರ ಈವರೆಗೆ 7.5 ಕೋಟಿ ಡೋಸ್‌ ಕೋವಾಕ್ಸಿನ್‌ ಲಸಿಕೆ ಸರಬರಾಜು ಮಾಡಲು ಭಾರತ್‌ ಬಯೋಟೆಕ್‌ ಸಂಸ್ಥೆಗೆ ತಿಳಿಸಿದೆ. ಜೂನ್ ವೇಳೆಗೆ ಸುಮಾರು 4 ಕೋಟಿ ಡೋಸ್‌ ಪೂರೈಕೆಯಾದರೆ, ಇನ್ನೂ 3.5 ಕೋಟಿ ಡೋಸ್‌ಗಳು ಭಾರತ್‌ ಬಯೋಟೆಕ್‌ ಸರಬರಾಜು ಮಾಡಬೇಕಾಗಿದೆ.

ಒಂದು ಬ್ಯಾಚ್‌ ಕೋವಾಕ್ಸಿನ್ ತಯಾರಿಕೆ ಪ್ರಕ್ರಿಯೆಗೆ ನಾಲ್ಕು ತಿಂಗಳಾದರೂ ಬೇಕು

ಒಂದು ಬ್ಯಾಚ್‌ ಕೋವಾಕ್ಸಿನ್ ತಯಾರಿಕೆ ಪ್ರಕ್ರಿಯೆಗೆ ನಾಲ್ಕು ತಿಂಗಳಾದರೂ ಬೇಕು

ಲಸಿಕೆ ತಯಾರಿಕೆ ಮಾಡುವುದು ಬಹಳ ಸೂಕ್ಷ್ಮವಾದ ವಿಚಾರ. ಲಸಿಕೆಗಳ ತಯಾರಿಕೆ, ಪರೀಕ್ಷೆ, ಬಿಡುಗಡೆ ಮತ್ತು ವಿತರಣೆ ಮಾಡುವ ನಡುವೆ ನೂರಾರು ಹಂತಗಳು ಇದೆ. ಹಾಗೆಯೇ ಈ ಪ್ರಕ್ರಿಯೆಗೆ ಮಾನವ ಸಂಪನ್ಮೂಲಗಳ ಅಗತ್ಯವೂ ಇದೆ. ಯಾವುದೇ ಲಸಿಕೆಗಳ ಉತ್ಪಾದನೆಯು ಹಲವು ಹಂತದ ಪ್ರಕ್ರಿಯೆಯನ್ನು ಹೊಂದಿದೆ. ಎಲ್ಲಾ ಹಂತಗಳನ್ನು ದಾಟಿ ಕೊನೆಯದಾಗಿ ಕೋವಾಕ್ಸಿನ್‌ ಎಂಬ ಲಸಿಕೆಯನ್ನು ಸಿದ್ದಪಡಿಸಬೇಕಾದರೆ ನಾಲ್ಕು ತಿಂಗಳು ಬೇಕಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸಲು 120 ದಿನ ಬೇಕೇ ಬೇಕು!ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸಲು 120 ದಿನ ಬೇಕೇ ಬೇಕು!

ಸರಬರಾಜು ಪ್ರಕ್ರಿಯೆ

ಸರಬರಾಜು ಪ್ರಕ್ರಿಯೆ

ಭಾರತದಲ್ಲಿ ಸರಬರಾಜು ಮಾಡಲಾದ ಎಲ್ಲಾ ಲಸಿಕೆಗಳನ್ನು ಭಾರತ ಸರ್ಕಾರದ ಕೇಂದ್ರ ಔಷಧ ಪ್ರಯೋಗಾಲಯಕ್ಕೆ ಪರೀಕ್ಷೆ ಮತ್ತು ಬಿಡುಗಡೆಗಾಗಿ ಕಳುಹಿಸಲಾಗುತ್ತದೆ. ಆ ಬಳಿಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಡಿಪೋಗಳಿಗೆ ತಲುಪಲು ಎರಡು ದಿನಗಳು ಬೇಕಾಗುತ್ತದೆ. ಅಲ್ಲಿಂದ ರಾಜ್ಯ ಸರ್ಕಾರಗಳು ವಿವಿಧ ಜಿಲ್ಲೆಗಳಿಗೆ ವಿತರಿಸುತ್ತವೆ. ಇದಕ್ಕೆ ಹಲವು ದಿನಗಳು ಬೇಕಾಗುತ್ತದೆ. ಆ ಬಳಿಕ ಜಿಲ್ಲೆಯಿಂದ ಗೊತ್ತುಪಡಿಸಿದ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಲಸಿಕೆಗಳನ್ನು ತಲುಪಿಸಲಾಗುತ್ತದೆ.

ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ರೇಣು ಸ್ವರೂಪ್ ಮಾತನಾಡಿ, ಒಂದು ಬ್ಯಾಚ್ ಲಸಿಕೆ ತಯಾರಿಸಲು ಸುಮಾರು ನಾಲ್ಕು ತಿಂಗಳುಗಳು ಬೇಕಾಗಬಹುದು, ಆದರೆ ತಯಾರಕರು ಸರ್ಕಾರಕ್ಕೆ ಸರಬರಾಜು ಮಾಡಲು ಬದ್ಧರಾಗಿರುವುದರ ಆಧಾರದ ಮೇಲೆ ಸರ್ಕಾರ ತನ್ನ ಅಂದಾಜು ಲೆಕ್ಕ ಹಾಕಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

English summary
Covid Vaccine for all by the end of the this year- What Bharat Biotech said ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X