ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ರೂಪಾಂತರದ ಬಗ್ಗೆ ಏಮ್ಸ್ ಕೊಟ್ಟ ಎಚ್ಚರಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 26: ಬ್ರಿಟನ್ ನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರದ ಕೊರೊನಾ ವೈರಸ್ ಹಲವು ದೇಶಗಳಲ್ಲಿ ಆತಂಕ ಮೂಡಿಸಿದೆ. ಭಾರತದಲ್ಲೂ ಬ್ರಿಟನ್ ನಿಂದ ಬಂದವರ ಮಾಹಿತಿ ಕಲೆ ಹಾಕಿ, ಕೊರೊನಾ ಪರೀಕ್ಷೆ ಮಾಡುವ ಕಾರ್ಯ ನಡೆಯುತ್ತಿದೆ.

ದಕ್ಷಿಣ ಆಫ್ರಿಕಾ, ನೈಜೀರಿಯಾ, ಇಸ್ರೇಲ್ ನಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್ ಪ್ರಕರಣಗಳು ಕಂಡುಬಂದಿದೆ. ಬ್ರಿಟನ್ ನಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್ ರೂಪಾಂತರದ ಕುರಿತು ಮಾತನಾಡಿರುವ ದೆಹಲಿಯ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ, "ಒಂದು ತಿಂಗಳಿಗೆ ಈ ಸೋಂಕು ಹಲವು ರೂಪಾಂತರಗಳನ್ನು ಪಡೆಯಬಹುದು" ಎಂದು ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ...

"ಹಲವು ರೂಪಾಂತರ ಪಡೆಯಬಹುದು"

"ಕೊರೊನಾ ಸೋಂಕು ತಿಂಗಳಿಗೆ ಹಲವು ರೂಪಾಂತರಗಳನ್ನು ಪಡೆಯಬಲ್ಲದ್ದಾಗಿದೆ. ಕಡಿಮೆ ಎಂದರೂ ತಿಂಗಳಿಗೆ ಎರಡು ರೂಪಾಂತರವನ್ನು ಈ ಸೋಂಕು ಪಡೆಯಬಹುದಾಗಿದೆ" ಎಂದು ಹೇಳಿದ್ದಾರೆ ರಣದೀಪ್.

ಅಮೆರಿಕದ ಮಾಡೆರ್ನಾ ಲಸಿಕೆ ಪಡೆದ ವೈದ್ಯರಲ್ಲಿ ತೀವ್ರ ಅಲರ್ಜಿಅಮೆರಿಕದ ಮಾಡೆರ್ನಾ ಲಸಿಕೆ ಪಡೆದ ವೈದ್ಯರಲ್ಲಿ ತೀವ್ರ ಅಲರ್ಜಿ

"ಆತಂಕ ಪಡುವ ಅಗತ್ಯವಿಲ್ಲ"

"ಆದರೆ ಈ ಸೋಂಕಿನ ಬಗ್ಗೆ ಆತಂಕ ಪಡುವ ಅಗತ್ಯವೇನಿಲ್ಲ. ಈ ರೂಪಾಂತರ ಸೋಂಕಿನ ಲಕ್ಷಣಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಸದ್ಯಕ್ಕೆ ಪ್ರಾಯೋಗಿಕ ಹಂತದಲ್ಲಿರುವ ಲಸಿಕೆಗಳನ್ನು ಈ ಹೊಸ ರೂಪಾಂತರದ ವಿರುದ್ಧ ಹೋರಾಡುವಂತೆ ರೂಪಿಸಬೇಕಿದೆ" ಎಂದು ಹೇಳಿದ್ದಾರೆ. "ಬ್ರಿಟನ್ ನಲ್ಲಿ ಪತ್ತೆಯಾಗಿರುವ ಈ ಸೋಂಕು ಅತಿ ಬೇಗನೆ ಹರಡಬಲ್ಲದ್ದಾಗಿದೆ. ಹೀಗಾಗಿ ನಿಗಾ ವಹಿಸಲಾಗಿದೆ" ಎಂದು ಹೇಳಿದ್ದಾರೆ.

 ಭಾರತದಲ್ಲಿ ಇನ್ನೂ ಪತ್ತೆಯಾಗಿಲ್ಲ

ಭಾರತದಲ್ಲಿ ಇನ್ನೂ ಪತ್ತೆಯಾಗಿಲ್ಲ

ಬ್ರಿಟನ್ ನಲ್ಲಿ ಪತ್ತೆಯಾಗಿರುವ ರೂಪಾಂತರದ ಸೋಂಕು ಭಾರತದಲ್ಲಿ ಕಾಣಿಸಿಕೊಂಡಿಲ್ಲ ಎಂದು ಆರೋಗ್ಯ ಸಲಹೆಗಾರ ವಿಕೆ ಪೌಲ್ ತಿಳಿಸಿದ್ದಾರೆ. ಈ ವೈರಸ್ ಸಾಮಾನ್ಯ ವೈರಸ್ ಗಿಂತ 70% ವೇಗವಾಗಿದೆ. ಇದನ್ನು ಸೂಪರ್ ಸ್ಪ್ರೆಡರ್ ಎಂದು ಕರೆಯಲಾಗಿದ್ದು, ಈ ರೂಪಾಂತರದ ಸೋಂಕಿನಿಂದ ಸಾವಿನ ಪ್ರಮಾಣ ಹೆಚ್ಚಾದ ದಾಖಲೆಗಳಿಲ್ಲ. ಆದರೆ ಹೆಚ್ಚೆಚ್ಚು ಜನರಿಗೆ ತಲುಗುತ್ತಿರುವುದೇ ಸಮಸ್ಯೆಯಾಗಿ ಪರಿಣಮಿಸಿದೆ.

 ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ಪ್ರಕರಣ

ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ಪ್ರಕರಣ

ಬ್ರಿಟನ್ ನಲ್ಲಿ ಈ ಸೋಂಕು ಅತಿ ವೇಗವಾಗಿ ಹರಡುತ್ತಿದೆ ಎಂದು ಡಿ.19ರಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ ಸನ್ ತಿಳಿಸಿದ್ದರು. ಈವರೆಗೆ ಬ್ರಿಟನ್ ನಲ್ಲಿ 62%, ಪೂರ್ವ ಬ್ರಿಟನ್ ನಲ್ಲಿ 59% ಹಾಗೂ ಆಗ್ನೇಯ ಭಾಗದಲ್ಲಿ 43% ಮಟ್ಟದಲ್ಲಿ ಈ ಸೋಂಕು ಹರಡಿದೆ ಎಂದು ತಿಳಿದುಬಂದಿದೆ.

English summary
There is no need to panic as coronavirus undergoes several mutations at an average per month said AIIMS Delhi Randeep Guleria
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X