ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭಯ: ದೆಹಲಿಯಲ್ಲಿ ನೈಟ್ ಕ್ಲಬ್, ಜಿಮ್, ಸ್ಪಾ ಬಂದ್

|
Google Oneindia Kannada News

ನವದೆಹಲಿ, ಮಾರ್ಚ್ 16: ಕೊರೊನಾ ಭೀತಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾರ್ಚ್ 31 ರವರೆಗೆ ನೈಟ್ ಕ್ಲಬ್, ಜಿಮ್, ಸ್ಪಾಗಳನ್ನು ಬಂದ್ ಮಾಡಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೂಚಿಸಿದ್ದಾರೆ.

ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು, 50 ಕ್ಕಿಂತ ಹೆಚ್ಚು ಜನರು ಒಟ್ಟಿಗೆ ಸೇರುವ ಎಲ್ಲಾ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬ್ಯಾನ್ ಮಾಡುವಂತೆ ಅರವಿಂದ್ ಕೇಜ್ರಿವಾಲ್ ಆದೇಶಿಸಿದ್ದಾರೆ.

ಮದುವೆಗಳಿಗೆ ನಿರ್ಬಂಧ ಇಲ್ಲ ಎಂದಿದ್ದರೂ, ವಿವಾಹ ಮತ್ತು ಇತರೆ ಕಾರ್ಯಕ್ರಮಗಳನ್ನು ಮುಂದೂಡುವಂತೆ ದೆಹಲಿ ಜನತೆಗೆ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

coronavirus-scare-night-clubs-gyms-and-spas-will-be-shut-in-delhi-till-march-31st

ಶಾಲೆ, ಕಾಲೇಜು, ಸಿನಿಮಾ ಹಾಲ್ ಗಳನ್ನು ಈಗಾಗಲೇ ಮುಚ್ಚಲಾಗಿದ್ದು, ವಾರದ ಸಂತೆಗಳನ್ನೂ ನಡೆಸದಂತೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ನಿವಾಸದಲ್ಲಿ ನಡೆಯುವ ಜನತಾ ಸಂವಾದಕ್ಕೂ ಸದ್ಯಕ್ಕೆ ಬ್ರೇಕ್ ಹಾಕಲಾಗಿದೆ.

ಸದ್ಯಕ್ಕೆ ಶಾಪಿಂಗ್ ಮಾಲ್ ಗಳಿಗೆ ಬೀಗ ಹಾಕಲಾಗಿಲ್ಲ. ಆದ್ರೆ, ಎಲ್ಲಾ ಮಾಲ್ ಗಳನ್ನು ಸೋಂಕು ರಹಿತವಾಗಿ ಸ್ವಚ್ಛಗೊಳಿಸಲಾಗುವುದು ಮತ್ತು ಗ್ರಾಹಕರ ಬಳಕೆಗೆ ಪ್ರತಿ ಅಂಗಡಿಯ ಮುಂಭಾಗದಲ್ಲೂ ಹ್ಯಾಂಡ್ ಸ್ಯಾನಿಟೈಝರ್ ಗಳನ್ನು ಇಡಲಾಗುವುದು ಅಂತ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಎಲ್ಲಾ ಆಟೋ ಮತ್ತು ಟ್ಯಾಕ್ಸಿಗಳನ್ನೂ ಉಚಿತವಾಗಿ ಸ್ವಚ್ಛಗೊಳಿಸಿ, ಸೋಂಕು ರಹಿತ ಮಾಡಲಾಗುವುದು ಎಂದಿದ್ದಾರೆ ಅರವಿಂದ್ ಕೇಜ್ರಿವಾಲ್.

ಅಂದ್ಹಾಗೆ, ದೆಹಲಿಯಲ್ಲಿ ಈವರೆಗೂ 7 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಇಬ್ಬರು ಗುಣಮುಖರಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.

English summary
Coronavirus Scare: Night Clubs, Gyms and spas will be shut in Delhi till March 31st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X