ಬಾಡಿಗೆದಾರರಿಗೆ ಸಿಹಿ ಸುದ್ದಿ ಕೊಟ್ಟ ದೆಹಲಿ ಸರ್ಕಾರ.!

ನವದೆಹಲಿ, ಮಾರ್ಚ್ 30: ದೆಹಲಿ ಬಾಡಿಗೆದಾರರು ಮೂರು ತಿಂಗಳ ಅವಧಿಯಲ್ಲಿ ಬಾಡಿಗೆ ಕಟ್ಟುವಲ್ಲಿ ವಿಫಲವಾದರೆ, ಸರ್ಕಾರ ಅದನ್ನು ಭರಿಸುತ್ತದೆ ಎಂಬ ಮಹತ್ವದ ಘೋಷಣೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಡಿದ್ದಾರೆ.

Recommended Video

      ಒಂದು ವಾರದಿಂದ ಒಬ್ಬರೂ ದೇವರ ದರ್ಶನಕ್ಕೆ ಬಂದಿಲ್ಲ | Veerendra Hedge | Dharmastala

      ಈ ಬಗ್ಗೆ ಡಿಜಿಟಲ್ ಪ್ರೆಸ್ ಕಾನ್ಫರೆನ್ಸ್ ನಡೆಸಿದ ಅರವಿಂದ್ ಕೇಜ್ರಿವಾಲ್, ''ಎರಡ್ಮೂರು ತಿಂಗಳ ಕಾಲ ಬಾಡಿಗೆ ನೀಡುವಂತೆ ಬಾಡಿಗೆದಾರರಿಗೆ ಲ್ಯಾಂಡ್ ಲಾರ್ಡ್ ಗಳು ಒತ್ತಾಯಿಸಬಾರದು. ಬಾಡಿಗೆ ಪಡೆಯುವುದನ್ನು ಕೆಲವು ತಿಂಗಳುಗಳ ಮಟ್ಟಿಗೆ ಮುಂದೂಡಬೇಕು. ಪರಿಸ್ಥಿತಿ ಸರಿಯಾದ ಬಳಿಕ ಬಾಡಿಗೆ ಕಟ್ಟಲು ಯಾರಾದರೂ ವಿಫಲವಾದರೆ, ಸರ್ಕಾರ ಅದನ್ನು ಭರಿಸುತ್ತದೆ. ಒಂದು ವೇಳೆ ಲ್ಯಾಂಡ್ ಲಾರ್ಡ್ ಗಳು ಒತ್ತಡ ಹಾಕಿದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು'' ಎಂದು ಹೇಳಿದರು.

      ಇದೇ ವೇಳೆ ಉದ್ಯಮಿಗಳು ಹಾಗೂ ಭೂಮಾಲೀಕರಿಗೆ ಮನವಿ ಮಾಡಿದ ಅರವಿಂದ್ ಕೇಜ್ರಿವಾಲ್, ''ಸಂಕಷ್ಟದ ಸಮಯವನ್ನು ಅರಿತು ನಡೆಯಿರಿ. ನಿಮ್ಮನ್ನ ಅವಲಂಬಿಸಿದವರಿಗೆ ಸಹಾಯವಾಗುವ ರೀತಿ ನಡೆದುಕೊಳ್ಳಿ. ಹಸಿವು ಮತ್ತು ಆರ್ಥಿಕ ಸಂಕಷ್ಟದಿಂದ ಬಳಲದಂತೆ ನೋಡಿಕೊಳ್ಳಿ'' ಎಂದರು.

      Coronavirus Scare: Good news for Tenants from Delhi Government

      ಹಸಿವಿನಿಂದ ಬಳಲುವವರ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ದೆಹಲಿ ಸರ್ಕಾರ 568 ರಿಲೀಫ್ ಸೆಂಟರ್ ಮತ್ತು 239 ನಿರಾಶ್ರಿತ ತಾಣಗಳನ್ನು ತೆರೆದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+