ಕೊರೊನಾದಿಂದ ಕಾಂಡೋಮ್ ಮಾರಾಟದಲ್ಲಿ ಭಾರಿ ಏರಿಕೆ
ನವ ದೆಹಲಿ, ಮಾರ್ಚ್ 24: ಕೊರೊನಾ ವೈರಸ್ ಪರಿಣಾಮದಿಂದ ಮಾಸ್ಕ್ ಗಳ ಮಾರಾಟ ಹೆಚ್ಚಾಗಿದೆ. ಆದರೆ, ಅದರೊಂದಿಗೆ ಕಾಂಡೋಮ್ ಮಾರಾಟ ಕೂಡ ಭಾರಿ ಏರಿಕೆ ಕಂಡಿದೆ. ಭಾರತ ಮಾತ್ರವಲ್ಲದೆ, ಇಂಗ್ಲೆಂಡ್‌ನಲ್ಲಿಯೂ ಕಾಂಡೋಮ್ ಮಾರಾಟ ಜಾಸ್ತಿಯಾಗಿದೆ.
ಕೊರೊನಾ ಭೀತಿಯಲ್ಲಿ ಕಾಂಡೋಮ್ ಮಾರಾಟ ಜಾಸ್ತಿ ಆಗಿರುವುದಕ್ಕೆ ಅನೇಕ ಕಾರಣಗಳನ್ನು ವೈದ್ಯರು ನೀಡಿದ್ದಾರೆ. ಯುದ್ಧ ಮತ್ತು ಸಾಂಕ್ರಾಮಿಕ ಸಮಯದಲ್ಲಿ, ಲೈಂಗಿಕ ಪಾಲುದಾರರಲ್ಲಿ ಅನ್ಯೋನ್ಯತೆಯ ಮಟ್ಟವು ಹೆಚ್ಚಾಗುತ್ತದೆ ಎಂದು ದೆಹಲಿಯ ಗಂಗಾ ರಾಮ್ ಆಸ್ಪತ್ರೆಯ ಮನೋವೈದ್ಯ ರಾಜೀವ್ ಮೆಹ್ತಾ ಹೇಳಿದ್ದಾರೆ.
ದೊಡ್ಡ ನಗರಗಳಲ್ಲಿ ವಿವಾಹಿತ ದಂಪತಿಗಳು ಕೆಲಸದ ಒತ್ತಡ, ಆಯಾಸದಿಂದ ನಿಯಮಿತವಾಗಿ ಸಂಭೋಗಿಸದಿರಲು ಆಗುವುದಿಲ್ಲ. ಆದ್ದರಿಂದ, ಈ ಸಮಯದಲ್ಲಿ ಜನರು ಸಾಮಾನ್ಯ ಲೈಂಗಿಕ ಜೀವನಕ್ಕೆ ಮರಳುತ್ತಿದ್ದಾರೆ. ಎಂದು ವೈದ್ಯರು ತಿಳಿಸಿದ್ದಾರೆ.

ಮನೆಯಲ್ಲಿಯೇ ಇರುವ ಸಂಗಾತಿಗಳು
ಕೊರೊನಾ ಭೀತಿಯಿಂದ ಆಫೀಸ್‌ಗಳಿಗೆ ರಜೆ ಇದೆ. ಐಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ನೀಡಿವೆ. ಸ್ವತಃ ಅಂಗಡಿ, ಬ್ಯುಸಿನೆಸ್ ಮಾಡುವವರು ಕೂಡ ಮನೆಯಲ್ಲಿಯೇ ಇರಬೇಕಾಗಿದೆ. ಗಂಡ ಹೆಂಡತಿ ಮನೆಯಲ್ಲಿಯೇ ಇರುವ ಕಾರಣ ಅವರಿಬ್ಬರ ಸೇರುವಿಕೆ ಹೆಚ್ಚಾಗಿದೆ. ಪರಿಣಾಮ ಕಾಂಡೋಮ್ ಗಳ ಬೇಡಿಕೆ ಜಾಸ್ತಿಯಾಗಿದೆ. ಇ-ಕಾಮರ್ಸ್ ತಾಣಗಳು ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳ ಮಾರಾಟವನ್ನು ಹೆಚ್ಚಿಸುತ್ತಿವೆ.

ವೈದ್ಯರು ಏನಂತಾರೆ?
ಈ ಬಗ್ಗೆ ಮಾತನಾಡಿರುವ ವೈದ್ಯರೊಬ್ಬರು ''ಜನರು ಆತಂಕ ಮತ್ತು ಮನೆಯಲ್ಲಿ ವಾಸಿಸುತ್ತಿದ್ದಾರೆ. ತಮ್ಮ ವೃತ್ತಿಪರ ಜೀವನದಲ್ಲಿ ತುಂಬಾ ಕಾರ್ಯನಿರತವಾಗಿದ್ದ ದಂಪತಿಗಳು ಅಥವಾ ಹುಡುಗ-ಹುಡುಗಿ ಈಗ ಸಾಮೀಪ್ಯ ಮತ್ತು ಸಮಯವನ್ನು ಪಡೆಯುತ್ತಿದ್ದಾರೆ. ಯುದ್ಧಗಳ ಸಮಯದಲ್ಲಿ ಅನ್ಯೋನ್ಯತೆ ಹೆಚ್ಚಾಗುತ್ತದೆ. ಇದು ಯುದ್ಧದಂತಹ ಪರಿಸ್ಥಿತಿಯೇ'' ಎಂದಿದ್ದಾರೆ.

ಅಂಗಡಿ ಮಾಲೀಕರ ಮಾತು
ದಕ್ಷಿಣ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ ಪ್ರದೇಶದ ಲಾಯಲ್ ಫಾರ್ಮಸಿಯ ಶಾ ನವಾಜ್ ಕಾಂಡೋಮ್ ಮಾರಾಟದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಅಂಗಡಿಯಲ್ಲಿ ಮಾಸ್ಕ್ ಗಳು ಜೊತೆಗೆ ಕಾಂಡೋಮ್‌ಗಳ ಮಾರಾಟ ಕೂಡ ಬಹಳ ಹೆಚ್ಚಿದೆ ಎಂದಿದ್ದಾರೆ. ಕೆಲವರು ಹೆಚ್ಚು ಸಂಖ್ಯೆಯ ಕಾಂಡೋಮ್‌ಗಳನ್ನು ಖರೀದಿ ಮಾಡಿ ಸ್ಟಾಕ್ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ವಿವಾಹಿತ ಮಹಿಳೆಯ ಮಾತು
ಈ ಬಗ್ಗೆ ಮಾತಾನಾಡಿರುವ ವಿವಾಹಿತ ಮಹಿಳೆಯೊಬ್ಬರು "ನಾನು ಮತ್ತು ನಮ್ಮ ಪತಿ ನಮ್ಮ ಕಚೇರಿಗಳಲ್ಲಿ ಬೇರೆ ಬೇರೆ ಶಿಫ್ಟ್ ಹೊಂದಿದ್ದೇವೆ. ಹಾಗಾಗಿ ಒಟ್ಟಿಗೆ ಸಮಯ ಕಳೆಯಲು ಆಗುತ್ತಿರಲಿಲ್ಲ. ಆದರೆ ಈಗ ನಾವು ಪರಸ್ಪರ ಹೆಚ್ಚು ಸಮಯ ಜೊತೆಗಿದ್ದೇವೆ. ನಮ್ಮ ದೈಹಿಕ ಸಂಬಂಧವು ತುಂಬ ಚೆನ್ನಾಗಿದೆ.'' ಎಂದು ಹೇಳಿದರು.

ತಾಯ್ತನವನ್ನು ಮುಂದುಡುವ ಸಲಹೆ
ಇಂಗ್ಲೆಂಡ್‌ನಲ್ಲಿ ಜನಿಸಿದ ನವಜಾತ ಶಿಶುವಿಗೆ ತಾಯಿಯಿಂದ ಕೊರೊನಾ ವೈರಸ್ ಹರಡಿದೆ. ಹೀಗಾಗಿ, ಕೊರೊನಾ ಹರಡುತ್ತಿರುವ ಈ ಸಮಯದಲ್ಲಿ ತಾಯ್ತನವನ್ನು ಮುಂದುಡುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಅಲ್ಲದೆ, ಸೆಕ್ಸ್ ಮಾಡಿದರೆ, ಕೊರೊನಾ ಬರುವುದಿಲ್ಲ ಎನ್ನುವ ಸುಳ್ಳು ಸುದ್ದಿ ಕೂಡ ಹರಿದಾಡಿದೆ. ಈ ಕಾರಣಗಳಿಂದ ಕಾಂಡೋಮ್ ಮಾರಾಟ ಹೆಚ್ಚಾಗಿದೆ.












Click it and Unblock the Notifications