ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಬಂದ 15 ಇಟಲಿ ಪ್ರವಾಸಿಗರಿಗೆ ಕೊರೊನಾ: ಖಚಿತ ಪಡಿಸಿದ ಏಮ್ಸ್!

|
Google Oneindia Kannada News

ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಣಾಂತಿಕ ಕೊರೊನಾ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ನಿನ್ನೆಯವರೆಗೂ ಭಾರತದಲ್ಲಿ 6 ಮಂದಿಗೆ ಕೊರೊನಾ ಸೋಂಕಿರುವುದು ಕನ್ಫರ್ಮ್ ಆಗಿತ್ತು. ಆದ್ರೀಗ, ಭಾರತಕ್ಕೆ ಬಂದಿಳಿದ 15 ಇಟಲಿ ಪ್ರವಾಸಿಗರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಭಾರತಕ್ಕೆ ಬಂದಿಳಿದ 21 ಇಟಲಿ ಪ್ರವಾಸಿಗರ ಪೈಕಿ 15 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಏಮ್ಸ್ ಆಸ್ಪತ್ರೆ ವೈದ್ಯರು ಖಚಿತ ಪಡಿಸಿದ್ದಾರೆ.

'ನಮಸ್ತೆ' ಹೇಳಿ.. ಡೆಡ್ಲಿ ಕೊರೊನಾ ವೈರಸ್ ನ ದೂರ ತಳ್ಳಿ!'ನಮಸ್ತೆ' ಹೇಳಿ.. ಡೆಡ್ಲಿ ಕೊರೊನಾ ವೈರಸ್ ನ ದೂರ ತಳ್ಳಿ!

ಇಟಲಿಯಿಂದ ಭಾರತಕ್ಕೆ ಬಂದ 21 ಪ್ರವಾಸಿಗರನ್ನು (13 ಮಹಿಳೆಯರು, 8 ಪುರುಷರು) ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 15 ಮಂದಿಯ ರಕ್ತದ ಮಾದರಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಹೀಗಾಗಿ, ಆ 15 ಇಟಲಿ ಪ್ರವಾಸಿಗರನ್ನು ನವದೆಹಲಿಯ ಚಾವ್ಲಾದಲ್ಲಿ ಇರುವ ITBP ಕ್ಯಾಂಪ್ ನಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

Coronavirus 15 Italian Tourists In India Test Positive, Confirms AIIMS

ಇತ್ತೀಚೆಗಷ್ಟೇ ಜೈಪುರಕ್ಕೆ ಆಗಮಿಸಿದ ಇಟಲಿಯ ಪ್ರವಾಸಿಗನಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಬಳಿಕ ಆತನ ಪತ್ನಿಗೂ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿತ್ತು. ಇವರಿಬ್ಬರ ಜೊತೆಗಿದ್ದ ಇಟಲಿಯಿಂದ ಬಂದಿದ್ದ ಉಳಿದ ಪ್ರವಾಸಿಗರಿಗೆ ಮತ್ತು ಮೂರು ಮಂದಿ ಭಾರತೀಯ ಟೂರ್ ಆಪರೇಟರ್ಸ್ ಗೆ ಇದೀಗ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಕೊರೊನಾ ಪೀಡಿತರನ್ನು ITBP ಕ್ಯಾಂಪ್ ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.

ಕೊರೊನಾ ವೈರಸ್: ಯಾವ ದೇಶದಲ್ಲಿ ಎಷ್ಟು ಪ್ರಕರಣ, ಎಷ್ಟು ಸಾವು?ಕೊರೊನಾ ವೈರಸ್: ಯಾವ ದೇಶದಲ್ಲಿ ಎಷ್ಟು ಪ್ರಕರಣ, ಎಷ್ಟು ಸಾವು?

ಕೊರೊನಾ ಪೀಡಿತರು ಈಗಾಗಲೇ ರಾಜಸ್ಥಾನದಲ್ಲಿ ಸುತ್ತಾಡಿದ್ದಾರೆ. ಹೀಗಾಗಿ, ರಾಜಸ್ಥಾನದ ಹಲವೆಡೆ ಕೊರೊನಾ ಸೋಂಕು ಹರಡದಂತೆ ಕಟ್ಟುನಿಟ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ.

English summary
15 Italian Tourists In India Test Coronavirus Positive, Confirms AIIMS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X