ನೋಟು ಬದಲಿಸಲು ಬ್ಯಾಂಕಿನ ಮುಂದೆ ನಿಂತ ರಾಹುಲ್ ಗಾಂಧಿ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 11: 'ಜನ ಸಾಮಾನ್ಯರ ಕಷ್ಟ ನರೇಂದ್ರ ಮೋದಿ ಅವರಿಗೆ ಅರ್ಥವಾಗುತ್ತಿಲ್ಲ. ಜನರ ಕಷ್ಟ ತಿಳಿಯಲು ನಾನು ಬ್ಯಾಂಕಿಗೆ ಬಂದಿದ್ದೇನೆ' ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

500 ಹಾಗೂ 1,000 ರು ಮುಖಬೆಲೆ ನೋಟುಗಳು ರದ್ದಾದ ಬೆನ್ನಲ್ಲೇ ಹೊಸ ನೋಟುಗಳನ್ನು ಪಡೆಯಲು ಬ್ಯಾಂಕಿಗೆ ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ.

Delhi: Congress Vice president Rahul Gandhi in queue at SBI, Parliament street

ಆದರೆ, ಜನರ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಬ್ಯಾಂಕುಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನೇಕ ಕಡೆ ಗೊಂದಲ, ಘರ್ಷಣೆ ಉಂಟಾಗಿದೆ.

ಪರಿಸ್ಥಿತಿ ಹೀಗಿರುವಾಗ ಜನರ ಸಂಕಷ್ಟವನ್ನು ತಿಳಿಯಲು ರಾಹುಲ್ ಗಾಂಧಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಂಸತ್ತಿನ ಶಾಖೆಯ ಮುಂದೆ ಕ್ಯೂನಲ್ಲಿ ನಿಂತುಕೊಂಡಿದ್ದಾರೆ.

ನಾನು 4,000 ರುಪಾಯಿ ವಿನಿಮಯ ಮಾಡಿಕೊಳ್ಳಲು ಬಂದಿದ್ದೇನೆ ಎಂದಿದ್ದಾರೆ. ಕೇಂದ್ರದ ದಿಢೀರ್ ನಿರ್ಧಾರವನ್ನು ಖಂಡಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Delhi: Congress Vice president Rahul Gandhi in queue at SBI, Parliament street
Please Wait while comments are loading...