• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಗ್ರಾಫ್ ಹಾಕಿ ಪ್ರಧಾನಿ ಮೋದಿಯನ್ನು ಕಾಂಗ್ರೆಸ್ ಅಣಕವಾಡಿದ್ದು ಹೀಗೆ..

|

ನವದೆಹಲಿ, ಮೇ 9: ಕೊರೊನಾ ಸೋಂಕಿತರ ವಿಚಾರವನ್ನು ಇಟ್ಟುಕೊಂಡು, ಗ್ರಾಫ್ ಹಾಕಿ ಪ್ರಧಾನಿ ನರೇಂದ್ರ ಮೋದಿಯವರನ್ನು, ಟ್ವೀಟ್ ಮೂಲಕ ಕಾಂಗ್ರೆಸ್ ಅಣಕವಾಡಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಒಂದು ದಿನದ ಹಿಂದೆ ಕೊರೊನಾ ವೈರಸ್ ನಿಯಂತ್ರಿಸುವ ವಿಚಾರದಲ್ಲಿ ಸುಮಾರು ಒಂದು ತಾಸು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಗೋಷ್ಠಿ ನಡೆಸಿದ್ದರು.

ಲಾಕ್ ಡೌನ್ ಅಂದರೆ ಆನ್, ಆಫ್ ಸ್ವಿಚ್ ಅಲ್ಲ: ಮೋದಿಗೆ ಗಂಭೀರ ಪ್ರಶ್ನೆ ಎಸೆದ ರಾಹುಲ್ ಗಾಂಧಿ

'ಇಂಡಿಯಾ ಲೀಡ್ಸ್ ದಿ ವೇ' ಎನ್ನುವ ಟೈಟಲ್ ಅನ್ನು ಕೊಟ್ಟು, ಅದಕ್ಕೆ 'ಕ್ಲೂಲೆಸ್ ಬಿಜೆಪಿ ಗವರ್ನಮೆಂಟ್' ಎನ್ನುವ ಹ್ಯಾಷ್ ಟ್ಯಾಗ್ ಅನ್ನು ಹಾಕಿ, ಭಾರತವೇ ನಂಬರ್ ಒನ್ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

"ಭಾರತವನ್ನು ವಿಶ್ವದಲ್ಲೇ ಲೀಡರ್ ಮಾಡುವೆ ಎನ್ನುವ ನರೇಂದ್ರ ಮೋದಿಯವರ ಮಾತು ಸುಳ್ಳಾಗಲಿಲ್ಲ. ಆದರೆ, ಯಾವುದರಲ್ಲಿ ಲೀಡರ್ ಎನ್ನುವುದರ ಬಗ್ಗೆ ಮೋದಿ ಹೇಳಿರಲಿಲ್ಲ" ಎನ್ನುವ ಒಕ್ಕಣೆಯನ್ನು ಬರೆದು ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ.

ಟ್ವೀಟ್ ನಲ್ಲಿ ಭಾರತ, ಪಾಕಿಸ್ತಾನ, ಇಂಡೋನೇಶ್ಯಾ, ಸಿಂಗಾಪುರ ಮತ್ತು ಜಪಾನ್ ದೇಶದ ಕೊರೊನಾ ಸೋಂಕಿತರ ಸಂಖ್ಯೆಯನ್ನು ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ಹಾಕಿದೆ.

ಅಂತ್ಯ ಸಂಸ್ಕಾರಕ್ಕೆ 20 ಜನ, ಮದ್ಯದಂಗಡಿ ಮುಂದೆ ಸಾವಿರ ಜನ: ಇದು ಓಕೆನಾ ಮಿ.ಮೋದಿ?

ವಿಶ್ವದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರತ ಹದಿನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕಾ, ಸ್ಪೇನ್, ಇಟೆಲಿ, ಬ್ರಿಟನ್ ಮತ್ತು ರಷ್ಯಾ ಮೊದಲ ಐದರ ಪಟ್ಟಿಯಲ್ಲಿದೆ.

English summary
PM Modi Not Wrong, India Leading In Corona Total Cases: Congress Twitter,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X