• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ, ಟಿಕೆಟ್ ಸೆಮಿಫೈನಲ್, ಸಂಭಾವ್ಯರು?

|
   Lok Sabha Elections 2019 : ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ, ಟಿಕೆಟ್ ಸೆಮಿಫೈನಲ್ | Oneindia Kannada

   ನವದೆಹಲಿ, ಮಾರ್ಚ್ 11: ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಈ ಹಿನ್ನೆಯಲ್ಲಿ ಎಲ್ಲಾ ಪಕ್ಷದಲ್ಲಿ ಚುನಾವಣೆಗೆ ಸಿದ್ಧತೆ ಭರದಿಂದ ಸಾಗಿದೆ. ದೆಹಲಿಯಲ್ಲಿ ಸೋಮವಾರ ಮಧ್ಯಾಹ್ನ ನಡೆಯಲಿರುವ ಸಭೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಲಿದೆ.

   ಪ್ರಸ್ತುತ ಕಾಂಗ್ರೆಸ್‌ನಲ್ಲಿ ತಿಕ್ಕಾಟಕ್ಕೆ ಕಾರಣವಾಗಿರುವ ಅಭ್ಯರ್ಥಿಗಳ ಅಂತಿಮಗೊಳಿಸುವ ಕಾರ್ಯ ಸೋಮವಾರ ನಡೆಯಲಿದೆ. ಕಾಂಗ್ರೆಸ್‌ನ ಹಾಲಿ ಸಂದಸರಿಗೆ 10 ಕ್ಷೇತ್ರ ಹಾಗೂ ಮೈತ್ರಿ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಡಲು ನಿರ್ಧರಿಸಿರುವ ಮೂರು ಕ್ಷೇತ್ರ ಹೊರತುಪಡಿಸಿ ಉಳಿದ 15 ಕ್ಷೇತ್ರಗಳಿಗೆ ಸಂಭಾವ್ಯರ ಪಟ್ಟಿಯೊಂದಿಗೆ ರಾಜ್ಯದ ಕಾಂಗ್ರೆಸ್ ನಾಯಕರು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.

   ಸೀಟು ಹಂಚಿಕೆ: ಜೆಡಿಎಸ್‌ಗೆ 7, ಕಾಂಗ್ರೆಸ್‌ 21: ಯಾವ ಕ್ಷೇತ್ರ ಯಾರಿಗೆ?

   ಲೋಕಸಭಾ ಸಮರಕ್ಕೆ ಮುಹೂರ್ತ ಫಿಕ್ಸ್ ಆಗಿರುವ ಹಿನ್ನೆಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಬಗ್ಗೆಯೂ ಇಂದು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

   ಕರ್ನಾಟಕದ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಂತಿದೆ

   ಮಂಗಳೂರು-ರಮಾನಾಥ ರೈ, ಐವಾನ್ ಡಿಸೋಜಾ, ಮೋಯುದ್ದೀನ್ ಬಾವಾ

   ಉತ್ತರ ಕನ್ನಡ-ಪ್ರಶಾಂತ್ ದೇಶಪಾಂಡೆ, ಭೀಮಣ್ಣ ನಾಯ್ಕ್

   ಮೈಸೂರು-ಕೊಡಗು- ವಿಜಯ್ ಶಂಕರ್, ಸೂರಜ್ ಹೆಗ್ಡೆ

   ಉಡುಪಿ-ಚಿಕ್ಕಮಗಳೂರು: ಆರತಿ ಕೃಷ್ಣ, ಪ್ರಮೋದ್ ಮಧ್ವರಾಜ್, ಬಿಕೆ ಹರಿಪ್ರಸಾದ್

   ದಾವಣಗೆರೆ: ಎಸ್‌ಎಸ್ ಮಲ್ಲಿಕಾರ್ಜುನ

   ವಿಜಯಪುರ: ರಾಜು ಅಲಗೂರು, ಪ್ರಕಾಶ್ ರಾಠೋಡ್, ಕಾಂತಾ ನಾಯಕ್, ಶಿವರಾಜ್ ತಂಗಡಗಿ

   ಬಾಗಲಕೋಟೆ: ಬಾಯಕ್ಕ ಮೇಟಿ, ವೀಣಾ ಕಾಶಪ್ಪನವರ್, ಅಜಯ್ ಕುಮಾರ್ ಸರನಾಯಕ್

   ಕೊಪ್ಪಳ: ಬಸನಗೌಡ ಬಾದರ್ಲಿ, ಬಸವರಾಜ್ ಹಿಟ್ನಾಳ್, ವಿರೂಪಾಕ್ಷಪ್ಪ, ಬಸವರಾಜ ರಾಯರೆಡ್ಡಿ

   ಬೆಳಗಾವಿ: ಅಂಜಲಿ ನಿಂಬಾಳ್ಕರ್, ಚನ್ನರಾಜ್ ಹೆಬ್ಬಾಳ್ಕರ್, ನಾಗರಾಜ್ ಯಾದವ್, ರಮೇಶ್ ಜಾರಕಿಹೊಳಿ, ವಿವೇಕ್ ರಾವ್ ಪಾಟೀಲ

   ಬೀದರ್: ಈಶ್ವರ ಖಂಡ್ರೆ, ವಿಜಯ್ ಸಿಂಗ್

   ಬೆಂಗಳೂರು ದಕ್ಷಿಣ: ಪ್ರಿಯ ಕೃಷ್ಣ

   ಬೆಂಗಳೂರು ಉತ್ತರ: ಆರ್ ರಾಜಕುಮಾರ್, ಎಂಆರ್ ಸೀತಾರಾಂ, ಬಿವಿ ಶ್ರೀನಿವಾಸ್, ರವಿಶಂಕರ್ ಶೆಟ್ಟಿ, ಬಿಎಲ್ ಶಂಕರ್

   ಬೆಂಗಳೂರು ಕೇಂದ್ರ: ಬಿಕೆ ಹರಿಪ್ರಸಾದ್, ರೋಷನ್ ಬೇಗ್, ಎಚ್‌ಟಿ ಸಾಂಗ್ಲಿಯಾನಾ, ರಿಜ್ವಾನ್ ಅರ್ಷದ್

   ಗದಗ-ಹಾವೇರಿ: ಬಸವರಾಜ್ ಶಿವಣ್ಣವರ, ಸಲೀಂ ಅಹಮದ್, ಡಿಆರ್ ಪಾಟೀಲ

   ಹುಬ್ಬಳ್ಳಿ-ಧಾರವಾಡ: ವಿನಯ್ ಕುಲಕರ್ಣಿ, ಶಾಕಿರ್ ಸನದಿ, ವೀರಣ್ಣ ಮತ್ತಿಕಟ್ಟಿ

   English summary
   Congress to hold screening committee meeting today to discuss candidates for LokSabha polls. Congress state in-charge K C Venugopal, Former CM Siddaramaiah and other leaders to attend the meeting.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X