• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್‌ಗೆ ರಾಜ್ಯಸಭಾ ಟಿಕೆಟ್

|

ನವದೆಹಲಿ, ಮಾರ್ಚ್ 12: ಮಾರ್ಚ್‌ 26 ಕ್ಕೆ ನಡೆಯುವ ಒಂಬತ್ತು ರಾಜ್ಯಗಳಲ್ಲಿನ ರಾಜ್ಯಸಭಾ ಸ್ಥಾನಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಗುರುವಾರ ಈ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆದೇಶ ಹೊರಡಿಸಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಆಪ್ತ ಕೆ ಸಿ ವೇಣುಗೋಪಾಲ್ ಅವರಿಗೆ ಮಣೆ ಹಾಕಲಾಗಿದೆ. ರಾಜಸ್ತಾನದಿಂದ ಅವರಿಗೆ ಟಿಕೆಟ್ ನೀಡಲಾಗಿದೆ. ರಾಜಸ್ತಾನದ ಇನ್ನೊಂದು ಸ್ಥಾನಕ್ಕೆ ನೀರಜ್ ಡಾಂಗಿ ಅವರಿಗೆ ಟಿಕೆಟ್ ನೀಡಲಾಗಿದೆ.

ಮಧ್ಯಪ್ರದೇಶ; ಬಿಜೆಪಿ ಸೇರಲಿರುವ ಜ್ಯೋತಿರಾಧಿತ್ಯಾ ಸಿಂದಿಯಾ

ಛತ್ತಿಸ್ ಗಢ್‌ದ ಎರಡು ಸ್ಥಾನಗಳಿಗೆ ಕೆಟಿಎಸ್ ತುಳಸಿ, ಶ್ರೀಮತಿ ಪುಲೋ ದೇವಿ ನೀತಮ್, ಝಾರ್ಖಂಡ್‌ನ ಒಂದು ಸ್ಥಾನಕ್ಕೆ ಶಹಜಾದ್ ಅನ್ವರ್, ಮಧ್ಯಪ್ರದೇಶದ ಎರಡು ಸ್ಥಾನಗಳಿಗೆ ದಿಗ್ವಿಜಯ್ ಸಿಂಗ್ ಹಾಗೂ ಪೂಲ್ ಸಿಂಗ್ ಭರಿಯಾ ಅವರಿಗೆ, ಮಹಾರಾಷ್ಟ್ರದ ಒಂದು ಸ್ಥಾನಕ್ಕೆ ರಾಜೀವ್ ಸತ್ವಾ, ಮೇಘಾಲಯದ ಒಂದು ಸ್ಥಾನಕ್ಕೆ ಕೆನಡಿ ಕರ್ನೇಲಿಯಸ್ ಅವರಿಗೆ ಟಿಕೆಟ್ ನೀಡಲಾಗಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರು ಬುಧವಾರ ವಿವಿಧ ರಾಜ್ಯಗಳಲ್ಲಿನ ರಾಜ್ಯಸಭಾ ಚುನಾವಣೆಗೆ 9 ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ಘೋಷಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾಧಿತ್ಯಾ ಸಿಂಧಿಯಾ, ಅಸ್ಸಾಂ ಭುವನೇಶ್ವರ ಕಾಳಿತಾ, ಬಿಹಾರ್ ವಿವೇಕ ಠಾಕೂರ್, ಗುಜರಾತ್ ಅಭಯ್ ಭಾರದ್ವಾಜ್, ಝಾರ್ಖಂಡ್ ದೀಪಕ್ ಪ್ರಕಾಶ್, ಮಣಿಪುರ ಲಿಯಸೆಂಬಾ ಮಹಾರಂಜ್, ಮಹಾರಾಷ್ಟ್ರ ಉದಯನ್ ಭೋಸ್ಲೆ, ರಾಜಸ್ತಾನಕ್ಕೆ ರಾಜೇಂದ್ರ ಗೇಹ್ಲೋಟ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

English summary
Congress Rajya Sabha Ticket Announce To KC Venugopal And 8 Others. Congress National President Soniya Gandhi Announce It On Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X