• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ಪಕ್ಷ ಒಂದು ಸಿಂಹವನ್ನು ಕಳೆದುಕೊಂಡಿದೆ: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಆಗಸ್ಟ್ 13: ಕಾಂಗ್ರೆಸ್‌ನ ಹಿರಿಯ ನಾಯಕ ರಾಜೀವ್ ತ್ಯಾಗಿ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಅವರ ಸಾವು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರ ನಷ್ಟ, ಕಾಂಗ್ರೆಸ್ ಒಂದು ಸಿಂಹವನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.ರಾಜೀವ್ ತ್ಯಾಗಿ ಅವರು ಉತ್ತರಪ್ರದೇಶ ಕಾಂಗ್ರಸ್ ಘಟಕದ ಕಾರ್ಯದರ್ಶಿ ಹುದ್ದೆಯಲ್ಲಿದ್ದರು ಹಾಗೂ ವಕ್ತಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ತ್ಯಾಗಿ ಅವರು ನಿಧನರಾಗುವುದಕ್ಕೆ ಕೆಲವೇ ತಾಸುಗಳ ಮೊದಲು ಟಿವಿ ಚರ್ಚೆಯೊಂದರಲ್ಲಿ ಭಾಗವಹಿಸಿದ್ದರು.

ಕಾಂಗ್ರೆಸ್ ನಾಯಕ ರಾಜೀವ್ ತ್ಯಾಗಿ ನಿಧನ; ಡಿಕೆಶಿ ಸಂತಾಪಕಾಂಗ್ರೆಸ್ ನಾಯಕ ರಾಜೀವ್ ತ್ಯಾಗಿ ನಿಧನ; ಡಿಕೆಶಿ ಸಂತಾಪ

ಆ ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಪಕ್ಷದ ವಕ್ತಾರ ಸಂಬಿತ್ ಪಾತ್ರ ಅವರು ರಾಜಿವ್ ತ್ಯಾಗಿ ಅವರ ಅಚಾನಕ್ ಅಗಲುವಿಕೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. 'ನನ್ನ ಗೆಳೆಯರಾಗಿದ್ದ ಕಾಂಗ್ರೆಸ್ ವಕ್ತಾರ ರಾಜೀವ್ ತ್ಯಾಗಿ ಅವರು ಇದೀಗ ನಮ್ಮೊಂದಿಗಿಲ್ಲ ಎಂಬುದನ್ನು ನನ್ನಿಂದ ನಂಬಲಾಗುತ್ತಿಲ್ಲ.

ಆಜ್ ತಕ್ ಚಾನೆಲ್ ನಲ್ಲಿ ಇಂದು ಸಾಯಂಕಾಲ 5 ಗಂಟೆಗೆ ನಾವು ಚರ್ಚೆಯಲ್ಲಿ ಭಾಗವಹಿಸಿದ್ದೆವು. ಜೀವನ ನಿಜವಾಗಿಯೂ ಕ್ಷಣಿಕವಾದದ್ದು' ಎಂದು ಸಂಬಿತ್ ಪಾತ್ರ ಅವರು ತಮ್ಮ ಟ್ವೀಟ್ ನಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.

ರಾಜೀವ್ ತ್ಯಾಗಿ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ಎನ್.ಸಿ.ಪಿ. ನಾಯಕ ನವಾಬ್ ಮಲಿಕ್ ಸೇರಿದಂತೆ ಹಲವರು ಆಘಾತ ವ್ಯಕ್ತಪಡಿಸಿದ್ದಾರೆ.
ರಾಜೀವ್ ತ್ಯಾಗಿ ಮುಂಬರುವ ತಿಂಗಳು ತಮ್ಮ 54ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವವರಿದ್ದರು. ಪಕ್ಷಕ್ಕೋಸ್ಕರ ಅವರು ಮಾಡಿರುವ ತ್ಯಾಗ, ಕಷ್ಟವನ್ನು ನಾವೆಂದಿಗೂ ಮರೆಯುವುದಿಲ್ಲ.

ಹಾಗೆಯೇ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದು, ರಾಜಿವ್ ತ್ಯಾಗಿ ಅವರ ಸಾವು ನನಗೆ ವೈಯುಕ್ತಿಕವಾಗಿ ದುಃಖವನ್ನುಂಟು ಮಾಡಿದೆ. ಆ ನಷ್ಟವನ್ನು ಎಂದಿಗೂ ಭರ್ತಿಮಾಡಲಾಗದು. ಇಡೀ ಉತ್ತರ ಪ್ರದೇಶ ಕಾಂಗ್ರೆಸ್ ಪರವಾಗಿ ಅವರಿಗೆ ಸಂತಾಪ ಸೂಚಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

English summary
Congress leader Rahul Gandhi condoled the death of party spokesperson Rajiv Tyagi due to a cardiac arrest this evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X