ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ ಮುಂಗಾರು ಅಧಿವೇಶನಕ್ಕೆ ಜಿಎಸ್‌ಟಿ, ಬೆಲೆ ಏರಿಕೆ ಬಿಸಿ ಮುಟ್ಟಿಸಿದ ಕೈ ನಾಯಕರು

|
Google Oneindia Kannada News

ಹೊಸದಿಲ್ಲಿ ಜು.18: ಬೆಲೆ ಏರಿಕೆ ಮತ್ತು ಜಿಎಸ್‌ಟಿಯಂತಹ ವಿಷಯಗಳ ಕುರಿತು ಕಾಂಗ್ರೆಸ್ ಸಂಸದರಿಂದ ಘೋಷಣೆಗಳ ನಡುವೆ ಸೋಮವಾರದ ಮೊದಲ ದಿನದ ಸಂಸತ್ತಿನ ಮುಂಗಾರು ಅಧಿವೇಶನದ ಮುಂದೂಡಲ್ಪಟ್ಟಿದೆ. ಇದಕ್ಕೂ ಮುನ್ನ ಮೇಲ್ಮನೆಗೆ ಹೊಸದಾಗಿ ಆಯ್ಕೆಯಾದ ಹಲವು ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಂದು ಬಿರುಸಿನಿಂದ ಆರಂಭಗೊಂಡಿದ್ದು, ಬೆಲೆ ಏರಿಕೆಯಿಂದ ಹಿಡಿದು ಅಗ್ನಿಪಥ ಯೋಜನೆಯವರೆಗಿನ ವಿಷಯಗಳ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸಿವೆ. ವಿರೋಧ ಪಕ್ಷದ ಸದಸ್ಯರು ಕೆಲವು ವಿಷಯಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸಿದಾಗ ಲೋಕಸಭೆಯ ಬೆಳಗಿನ ಅಧಿವೇಶನವನ್ನು ಮುಂದೂಡಲಾಯಿತು. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಲಾರಂಭಿಸಿದರು. ಸದನದ ಕಲಾಪಕ್ಕೆ ಅವಕಾಶ ನೀಡದಿರಲು ಸದನವನ್ನು ದಿನಕ್ಕೆ ಮುಂದೂಡುತ್ತಿದ್ದೇನೆ ಎಂದು ಸಭಾಪತಿ ಎಂ ವೆಂಕಯ್ಯ ನಾಯ್ಡು ಹೇಳಿದರು.

ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದೆ. ಆಗಸ್ಟ್ 12ರವರೆಗೆ ನಡೆಯುವ ಅಧಿವೇಶನ ನಡೆಯಲಿದೆ. ಈ ವೇಳೆ ಒಟ್ಟು 32 ಮಸೂದೆಗಳ ಮಂಡನೆ ಆಗಲಿವೆ. ಆದರೆ, ಸಮಯ ಬಹಳ‌ ಕಡಿಮೆ ಇರುವ ಕಾರಣಕ್ಕೆ ಪ್ರತಿಪಕ್ಷಗಳು ಬೇರೆ ಬೇರೆ ಪ್ರಮುಖ ವಿಷಯಗಳ ಬಗ್ಗೆ ವಿದ್ಯಮಾನಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗಲಿಲ್ಲ. ಅದಕ್ಕೆ ಆಡಳಿತ ಪಕ್ಷ ಅವಕಾಶ ನೀಡದಿರಲು ಸದನದಲ್ಲಿ ಸದ್ದು ಗದ್ದಲ ಜೋರಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಂಸದೀಯ ಅಧಿವೇಶನದಲ್ಲಿ ಪ್ರತಿಪಕ್ಷಗಳು ಹಾಗೂ ಆಡಳಿತ ಪಕ್ಷದ ನಡುವೆ ಘರ್ಷಣೆಗಳು, ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು.

Congress leaders hit on GST, price hike for Monsoon session of Parliament

ಲೋಕಸಭೆಯಲ್ಲಿ ಹೊಸದಾಗಿ ಚುನಾಯಿತರಾದ ಮೂವರು ಸದಸ್ಯರು - ಬಾಲಿವುಡ್ ನಟ ಮತ್ತು ತೃಣಮೂಲ ಕಾಂಗ್ರೆಸ್‌ನ ಶತ್ರುಘ್ನ ಸಿನ್ಹಾ (ಅಸನ್ಸೋಲ್, ಪಶ್ಚಿಮ ಬಂಗಾಳ) ಮತ್ತು ಉತ್ತರ ಪ್ರದೇಶದ ಇಬ್ಬರು ಬಿಜೆಪಿ ಸದಸ್ಯರು ದಿನೇಶ್ ಲಾಲ್ ಯಾದವ್ ನಿರಾಹುವಾ (ಅಜಂಗಢ) ಮತ್ತು ಘನಶ್ಯಾಮ್ ಸಿಂಗ್ ಲೋಧಿ (ರಾಂಪುರ) ಅವರು ಪ್ರಮಾಣ ವಚನ ಸ್ವೀಕರಿಸಿದರು. ಪ್ರತಿಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗುತ್ತಿದ್ದಂತೆ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಭಾರತದಲ್ಲಿ ಚುನಾವಣೆಗಳನ್ನು ಹಬ್ಬದಂತೆ ಆಚರಿಸಲಾಗುತ್ತದೆ ಮತ್ತು ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿರುವುದರಿಂದ ಅದನ್ನು ಸಹ ಆಚರಿಸಬೇಕು ಎಂದು ಹೇಳಿದರು.

ಸದಸ್ಯರು ಉತ್ಸವದಲ್ಲಿ ಭಾಗವಹಿಸಬೇಕು ಎಂದು ಹೇಳಿದ ಸ್ಪೀಕರ್, ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಲೋಕಸಭೆಯಲ್ಲಿ ಉಪಸ್ಥಿತರಿದ್ದರು. ಲೋಕಸಭೆಯು ಮಧ್ಯಾಹ್ನ 2 ಗಂಟೆಗೆ ಪುನಃ ಸೇರುತ್ತಿದ್ದಂತೆ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಕೆಲವು ವಿಷಯವನ್ನು ಪ್ರಸ್ತಾಪಿಸಲು ಪ್ರಯತ್ನಿಸುತ್ತಿರುವಾಗ, ಎಡಪಕ್ಷಗಳ ಸದಸ್ಯರು ಸದನದ ಬಾವಿಯಲ್ಲಿ ಭಿತ್ತಿಪತ್ರಗಳನ್ನು ಬಿಸಾಡಿದರು. ಹೀಗಾಗಿ ಕಲಾಪವನ್ನು ಮುಂದೂಡಲಾಯಿತು.

English summary
The first day of Monsoon session of Parliament was adjourned amid announcements by Congress MPs on issues like price hike and GST.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X