• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇಸರಿ, ಬಿಳಿ, ಹಸಿರು ಬಣ್ಣದ ಮಾಸ್ಕ್ ನಿಷೇಧಿಸಲು ಕಾಂಗ್ರೆಸ್ ಮನವಿ

|
Google Oneindia Kannada News

ನವದೆಹಲಿ, ಆಗಸ್ಟ್.13: ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವುದಕ್ಕೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 74ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ತ್ರಿವರ್ಣ ಧ್ವಜ ಬಣ್ಣಗಳಿಂದ ಕೂಡಿದ ಮಾಸ್ಕ್ ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

   DJ ಹಳ್ಳಿಯಲ್ಲಿ ಇದೀಗ ಶುರುವಾಯ್ತು ಹೊಸ ಆತಂಕ | Oneindia Kannada

   ಕೇಸರಿ, ಬಿಳಿ, ಹಸಿರು ಬಣ್ಣದ ಜೊತೆಗೆ ಅಶೋಕ ಚಕ್ರವನ್ನು ಹೊಂದಿರುವ ಮಾಸ್ಕ್ ಗಳ ಮಾರಾಟವನ್ನು ನಿಷೇಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ದಿಗಂಬರ ಕಾಮತ್ ಆಗ್ರಹಿಸಿದ್ದಾರೆ. ರಾಷ್ಟ್ರಧ್ವಜದ ಬಣ್ಣವಿರುವ ಮಾಸ್ಕ್ ಗಳ ವಿರುದ್ಧ ಟ್ವಿಟರ್ ನಲ್ಲಿ ಅಭಿಯಾನ ಶುರು ಮಾಡಿದ್ದಾರೆ.

   ಭಾರತದಲ್ಲಿ ಒಂದೇ ದಿನ 66,999 ಮಂದಿಗೆ ಕೊರೊನಾವೈರಸ್ ಪಾಸಿಟಿವ್ಭಾರತದಲ್ಲಿ ಒಂದೇ ದಿನ 66,999 ಮಂದಿಗೆ ಕೊರೊನಾವೈರಸ್ ಪಾಸಿಟಿವ್

   ಸಾಮಾಜಿಕ ಜಾಲತಾಣಗಳಲ್ಲಿ ತ್ರಿವರ್ಣ ಧ್ವಜದ ಬಣ್ಣಗಳಿಂದ ಕೂಡಿದ ಮಾಸ್ಕ್ ಗಳ ಫೋಟೋವನ್ನು ನೋಡಿ ಬೇಸರವಾಗುತ್ತಿದೆ. 74ನೇ ಸ್ವಾತಂತ್ರ್ಯ ದಿನಾಚರಣೆ ಹೊಸ್ತಿಲಿನಲ್ಲಿ ದೇಶದ ರಾಷ್ಟ್ರಧ್ವಜವನ್ನು ನಾವೆಲ್ಲರೂ ಸೇರಿ ಗೌರವಿಸಬೇಕಿದೆ ಎಂದಿದ್ದಾರೆ.

   ತ್ರಿವರ್ಣದ ಮಾಸ್ಕ್ ಬಳಕೆ ನಿಷೇಧಿಸಲು ಮನವಿ:

   ಅಶೋಕ್ ಚಕ್ರದೊಂದಿಗೆ ತ್ರಿವರ್ಣದಲ್ಲಿರುವ ಮಾಸ್ಕ್ ಗಳ ಬಳಕೆಯನ್ನು ನಿಷೇಧಿಸುವಂತೆ ಎಲ್ಲಾ ರಾಜ್ಯಗಳಿಗೆ ನಿರ್ದೇಶನಗಳನ್ನು ನೀಡಬೇಕು ಎಂದು ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ. ನಾವೆಲ್ಲರೂ ನಮ್ಮ ರಾಷ್ಟ್ರೀಯ ಧ್ವಜವನ್ನು ಗೌರವಿಸೋಣ" ಎಂದು ದಿಗಂಬರ ಕಾಮತ್ ಟ್ವೀಟ್ ಮಾಡಿದ್ದಾರೆ.

   ಭಾರತದಲ್ಲಿ ಒಂದೇ ದಿನ 66999 ಮಂದಿಗೆ ಕೊವಿಡ್-19 ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 2396638ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

   English summary
   Congress Leader Digamber Kamat Demands Ban On Tricolour Mask Pattern.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X