• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೋಕಸಭೆ 2019 : ಬಿಜೆಪಿಯ ನಿದ್ದೆ ಕೆಡಿಸಲಿದೆ ಕಾಂಗ್ರೆಸ್ ನ ಹೊಸ ಕಾರ್ಯತಂತ್ರ!

By ವಿನೋದ್ ಕುಮಾರ್ ಶುಕ್ಲಾ
|
   ಬಿಜೆಪಿಯ ನಿದ್ದೆ ಕೆಡಿಸಲಿದೆ ಕಾಂಗ್ರೆಸ್ ನ ಹೊಸ ಕಾರ್ಯತಂತ್ರ! | Oneindia Kannada

   ನವದೆಹಲಿ, ನವೆಂಬರ್ 30 : 2019 ರ ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಈಗಲೇ ಕಾರ್ಯತಂತ್ರ ರೂಪಿಸುತ್ತಿರುವ ಕಾಂಗ್ರೆಸ್, ಆಡಳಿತಾರೂಢ ಬಿಜೆಪಿಯನ್ನು ಬಗ್ಗುಬಡಿಯಲು ಇರುವ ಎಲ್ಲ ಸಾಧ್ಯತೆಗಳನ್ನೂ ಕಾರ್ಯರೂಪಕ್ಕೆ ತರಲು ನಿರ್ಧರಿಸಿದೆ.

   ಮಧ್ಯಮ ವರ್ಗದ ಜನರನ್ನು ಓಲೈಸುವುದನ್ನು ಮುಖ್ಯ ಅಜೆಂಡಾವನ್ನಾಗಿ ಇಟ್ಟುಕೊಂಡಿರುವ ಕಾಂಗ್ರೆಸ್ , ಇದರೊಟ್ಟಿಗೆ ಬಿಜೆಪಿಯ ನಿದ್ದೆ ಕೆಡಿಸುವಂಥ ಕೆಲವು ಕಾರ್ಯತಂತ್ರಗಳನ್ನು ತನ್ನ ಬತ್ತಳಿಕೆಯಲ್ಲಿ ಇರಿಸಿಕೊಂಡಿದೆ.

   ಲೋಕಸಭಾ ಚುನಾವಣೆ : ಸರಣಿ ಸಭೆಗಳನ್ನು ಕರೆದ ಕೆಪಿಸಿಸಿ ಅಧ್ಯಕ್ಷರು

   ನರೇಂದ್ರ ಮೋದಿ ನಾಯಕತ್ವದ ಬಗ್ಗೆ ಮುನಿಸಿಕೊಂಡು ಬಿಜೆಪಿ ತೊರೆದ, ಮತ್ತು ಬಿಜೆಪಿ ವಿರೋಧಿ ಮನೋಭಾವ ಹೊಂದಿರುವವರನ್ನು ಹಲವಾರು ನಾಯಕರನ್ನು ಸೇರಿಸಿ, ಅವರನ್ನು ಕಾಂಗ್ರೆಸ್ ಪರ ಪ್ರಚಾರಕ್ಕಲ್ಲದಿದ್ದರೂ, ಬಿಜೆಪಿ ವಿರುದ್ಧದ ಪ್ರಚಾರಕ್ಕಾದರೂ ಬಳಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಈ ತಂತ್ರ ಕೈಹಿಡಿದರೆ ಬಿಜೆಪಿಗೆ ನಷ್ಟವಾಗುವುದು ಖಂಡಿತ.

   ಕರ್ನಾಟಕದಲ್ಲಿ ಮೈನಸ್ ಡಿಗ್ರಿ ಪಾಲಿಟಿಕ್ಸ್ ಶುರುವಾಗಿದೆ!

   ಇದನ್ನೇ ರಾಜಕೀಯದಲ್ಲಿ ಮೈನಸ್ ಡಿಗ್ರಿ ಪಾಲಿಟಿಕ್ಸ್ ಅಂತ ಕರೆಯುತ್ತಾರೆ. ಕರ್ನಾಟಕದಲ್ಲಿ 2013ರಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಅನುಸರಿಸಿದ್ದು ಇದೇ ಮೈನಸ್ ಡಿಗ್ರಿ ಪಾಲಿಟಿಕ್ಸ್ ಎಂಬುದನ್ನು ಮರೆಯಬಾರದು. ಆದರೆ ಈ ನೆಗೆಟಿವ್ ಸ್ಟ್ರಾಟಜಿ ಕಾಂಗ್ರೆಸ್ ಕೈಹಿಡಿಯುವುದಾ ಅಥವಾ ಕೈಕೊಡುವುದಾ?

   ಯಾರ್ಯಾರ ಮೇಲೆ ಕಾಂಗ್ರೆಸ್ ಕಣ್ಣು?

   ಯಾರ್ಯಾರ ಮೇಲೆ ಕಾಂಗ್ರೆಸ್ ಕಣ್ಣು?

   ರಿಸರ್ವ್ ಬ್ಯಾಂಕ ನ ಮಾಜಿ ಗವರ್ನರ್ ರಘುರಾಮ್ ರಾಜನ್, ಬಿಜೆಪಿಯ ಮಾಜಿ ನಾಯಕ ಯಶವಂತ್ ಸಿನ್ಹಾ, ವಕೀಲ ಪ್ರಶಾಂತ್ ಭೂಷಣ್ ಸೇರಿದಂತೆ ಹಲವು ನಾಯಕರ ಮೇಲೆ ಕಾಂಗ್ರೆಸ್ ಕಣ್ಣು ಹಾಕಿದೆ! ಇವರೆಲ್ಲ ನೇರವಾಗಿ ಪ್ರಚಾರದಲ್ಲಿ ಭಾಗವಹಿಸಲು ಒಪ್ಪದಿರಬಹುದಾದ್ದರಿಂದ ಪರೋಕ್ಷವಾಗಿ ಅವರ ಸಲಹೆ, ಸಹಕಾರವನ್ನು ಕಾಂಗ್ರೆಸ್ ಪಡೆಯಲಿದೆ.

   ಲೋಕಸಭೆ ಚುನಾವಣೆಗಾಗಿ ಘೋಷಣೆ: 'ಮಂದಿರ ಮೊದಲು, ಸರ್ಕಾರ ನಂತರ'

   ಪರ್ಯಾಯ ಅಜೆಂಡಾಗಳು

   ಪರ್ಯಾಯ ಅಜೆಂಡಾಗಳು

   ಕಾಂಗ್ರೆಸ್ ಈ ಬಾರಿ ಲೋಕಸಭಾ ಚುನಾವಣೆಯನ್ನು ಗೆಲ್ಲಲೇ ಬೇಕೆಂಬ ಜಿದ್ದಿಗೆ ಬಿದ್ದಿದ್ದು, ಒಂದಲ್ಲ, ನೂರು ಅಜೆಂಡಾಗಳನ್ನು ತನ್ನ ಕೈಲಿರಿಸಿಕೊಂಡಿದೆ. ಆಲ್ ಇಂಡಿಯಾ ಪ್ರೊಫೆಶನಲ್ ಕಾಂಗ್ರೆಸ್(ಎಐಪಿಸಿ) ಘಟಕವು ಇತ್ತೀಚೆಗಷ್ಟೇ ನಿವೃತ್ತ ನ್ಯಾಯಮೂರ್ತಿ ಚಲಮೇಶ್ವರ್ ಅವರನ್ನು ಕರೆಸಿ, ಚರ್ಚೆ ನಡೆಸಿದೆ. ಅಷ್ಟೇ ಅಲ್ಲ, ನ.30 ರಂದು ರಾಷ್ಟ್ರೀಯ ಸೆಮಿನಾರ್ ವೋಂದನ್ನು ಈ ಘಟಕ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಸಾಕಷ್ಟು ವೈದ್ಯರು, ಇಂಜಿನಿಯರ್ ಗಳು, ಕಾನೂನು ಮತ್ತು ಹಣಕಾಸು ತಜ್ಞರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಎಐಪಿಸಿ ಮುಖ್ಯಸ್ಥ ಶಶಿ ತರೂರ್ ಅವರ ನೇತೃತ್ವದಲ್ಲಿ ನಡೆಯಲಿದೆ. ಮಾಜಿ ವಿತ್ತ ಸಚಿವ ಪಿ ಚಿದಂಬರಂ, ಮುಖಂಡರಾದ ಅಭಿಷೇಕ್ ಮನು ಸಿಂಗ್ವಿ, ರಂದೀಪ್ ಸುರ್ಜೇವಾಲಾ ಮತ್ತು ಸಲ್ಮಾನ್ ಖುರ್ಷಿದ್, ಕಪಿಲ್ ಸಿಬಲ್ ಮುಂತಾದವರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

   ಲೋಕಸಭಾ ಚುನಾವಣೆ 2019 : ಕರ್ನಾಟಕ ಬಿಜೆಪಿ ಸಂಚಾಲಕರ ಪಟ್ಟಿ

   ಮಧ್ಯಮ ವರ್ಗದ ಓಲೈಕೆಗೆ ಒತ್ತು!

   ಮಧ್ಯಮ ವರ್ಗದ ಓಲೈಕೆಗೆ ಒತ್ತು!

   ದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಮತದಾರರು ಮಧ್ಯಮ ವರ್ಗದವರು ಎಂಬುದನ್ನು ಬಲ್ಲ ಕಾಂಗ್ರೆಸ್ ಅವರತ್ತಲೇ ಹೆಚ್ಚು ಒತ್ತು ನೀಡಲು ನಿರ್ಧರಿಸಿದೆ. ಅದಕ್ಕಾಗಿ ಮುಖಂಡ ಸಲ್ಮಾನ್ ಸೋಜ್ ಮತ್ತು ಅಮಿತ್ ಸಿಂಗ್ ಅವರನ್ನು ಉಸ್ತುವಾರಿಗಾಗಿ ನೇಮಿಸಲಾಗಿದೆ. ಬೆಂಗಳೂರು, ಚೆನ್ನೈ, ಲಕ್ನೋ, ಜೇಮ್ಶೆಡ್ಪುರ ಸೇರಿದಂತೆ ನಾನಾ ನಗರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಮಧ್ಯಮ ವರ್ಗದ ಮತದಾರರನ್ನು ಸೆಳೆಯುವ ಇಂಗಿತ ಕಾಂಗ್ರೆಸ್ ನದ್ದು.

   ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ನಾಯಕ!

   ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ನಾಯಕ!

   ಇತ್ತೀಚೆಗೆ ಮುಂಬೈಯಲ್ಲಿ ನಡೆದ ಎಐಪಿಸಿ ಕಾರ್ಯಕ್ರಮದಲ್ಲಿ ಬಿಜೆಪಿಯ ಮಾಜಿ ಮುಖಂಡ ಮತ್ತು ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಅವರು ಸಹ ಭಾಗವಹಿಸಿ ಅಚ್ಚರಿ ಮೂಡಿಸಿದ್ದರು. ಅಷ್ಟೇ ಅಲ್ಲ, ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರೂ ಭಾಗವಹಿಸಿದ್ದರು. ಕೇವಲ ಇಷ್ಟೇ ಜನರಲ್ಲ, ಬೇರೆ ಬೇರೆ ಪಕ್ಷದ ಇನ್ನೂ ಹಲವು ಮುಖಂಡರು ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   To reach out to the middle-class voters for 2019 Lok Sabha elections, the Congress may take help of people like former Reserve Bank of India governor Raghuram Rajan and former Lok Sabha speaker Meira Kumar.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more