ಚುನಾವಣಾ ಆಯೋಗದ ಸಾಚಾತನ: ಕಾಂಗ್ರೆಸ್ ಅನುಮಾನ
ನವದೆಹಲಿ, ಅಕ್ಟೋಬರ್ 6: ಕೇಂದ್ರ ಚುನಾವಣಾ ಆಯೋಗ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳು ಒಂದೇ ದಿನದಲ್ಲಿ ಎರೆಡೆರಡು ಬಾರಿ ಬದಲಾಗಿರುವುದು ಚುನಾವಣಾ ಆಯೋಗದ ಸಾಚಾತನಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.
ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲ ಈ ಕುರಿತು ಟ್ವೀಟ್ ಮಾಡಿದ್ದು, ಐದು ರಾಜ್ಯಗಳ ಚುನಾವಣಾ ಘೋಷಣೆಗೆ ಚುನಾವಣಾ ಆಯೋಗ ಶನಿವಾರ ಮಧ್ಯಾಹ್ನ 12.30ಕ್ಕೆ ಪತ್ರಿಕಾಗೋಷ್ಠಿ ಕರೆದಿತ್ತು.
3 Facts- Draw your own conclusions.
— Randeep Singh Surjewala (@rssurjewala) October 6, 2018
1. ECI announces a PC at 12.30 today to announce elction dates to the 5 states.
2. PM Modi is addressing a rally in Ajmer, Rajasthan at 1 PM today.
3. ECI suddenly changes the time of announcement and PC to 3 PM.
Independence of ECI?
ಆ ವೇಳೆ ಪ್ರಧಾನಿ ಮೋದಿಯವರು ರಾಜಸ್ತಾನದ ಅಜ್ ಮಿರ್ ನಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದರು, ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಚುನಾವಣಾ ಆಯೋಗ ಪತ್ರಿಕಾಗೋಷ್ಠಿಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದೆ. ಹೀಗೆ ಪರಸ್ಪರ ಎಷ್ಟೊಂದು ಹೊಂದಾಣಿಕೆಯಿಂದ ಎರಡೂ ವೇಳಾ ಪಟ್ಟಿಗಳು ಬದಲಾಗುತ್ತಿವೆ ಎಂದು ತೀಕ್ಷ್ಣವಾಗಿ ಟೀಕಿಸಿದ್ದಾರೆ.

ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳಿಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಲಿದೆ.ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ಮಿಜೋರಾಂ ರಾಜ್ಯಗಳಲ್ಲಿ ವಿಧಾನಸಭೆಯ ಕಾಲಾವಧಿ ಡಿಸೆಂಬರ್ -ಜನವರಿಯಲ್ಲಿ ಅಂತ್ಯವಾಗಲಿದ್ದು, ಅದಕ್ಕೂ ಮುನ್ನ ಈ ರಾಜ್ಯಗಳಲ್ಲಿ ಚುನಾವಣೆ ನಡೆಯಬೇಕಿದೆ.












Click it and Unblock the Notifications