ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ?

|
Google Oneindia Kannada News

ನವದೆಹಲಿ, ಫೆಬ್ರವರಿ 09 : ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆಯೇ?. ಫೆಬ್ರವರಿ 11ರ ಮಂಗಳವಾರ ಪ್ರಕಟವಾಗುವ ಚುನಾವಣಾ ಫಲಿತಾಂಶದ ಮೇಲೆ ಇದು ನಿರ್ಧಾರವಾಗಲಿದೆ.

ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಚಾಕೋ ಭಾನುವಾರ ಮೈತ್ರಿ ಸರ್ಕಾರ ರಚನೆ ಬಗ್ಗೆ ಸುಳಿವು ನೀಡಿದ್ದಾರೆ. ಶನಿವಾರ ದೆಹಲಿ ಚುನಾವಣೆ ನಡೆದಿದ್ದು, 70 ಸದಸ್ಯ ಬಲದ ವಿಧಾನಸಭೆಯಲ್ಲಿ ಎಎಪಿ ಪುನಃ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.

EXIT POLL: ದೆಹಲಿಯಲ್ಲಿ ಎಎಪಿ 3.0 ಸರ್ಕಾರ ಖಚಿತEXIT POLL: ದೆಹಲಿಯಲ್ಲಿ ಎಎಪಿ 3.0 ಸರ್ಕಾರ ಖಚಿತ

ಕಾಂಗ್ರೆಸ್-ಎಎಪಿ ಮೈತ್ರಿ ಸರ್ಕಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಾಕೋ, "ಇದು ಚುನಾವಣಾ ಫಲಿತಾಂಶದ ಮೇಲೆ ತೀರ್ಮಾನವಾಗಲಿದೆ. ಫಲಿತಾಂಶ ಬಂದ ಬಳಿಕ ನಾವು ಈ ಕುರಿತು ಚರ್ಚಿಸುತ್ತೇವೆ" ಎಂದರು.

ದೆಹಲಿ ಚುನಾವಣೆ ಎಕ್ಸಿಟ್ ಪೋಲ್ ಫಲಿತಾಂಶದೆಹಲಿ ಚುನಾವಣೆ ಎಕ್ಸಿಟ್ ಪೋಲ್ ಫಲಿತಾಂಶ

PC Chacko

"ದೆಹಲಿ ಚುನಾವಣೆ ಬಗ್ಗೆ ಬಂದಿರುವ ಸಮೀಕ್ಷೆಗಳು ಸರಿ ಇಲ್ಲ. ಸಮೀಕ್ಷೆಗಳು ಹೇಳಿರುವುದಕ್ಕಿಂತ ಹೆಚ್ಚಿನ ಸ ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದೆ" ಎಂದು ಚಾಕೋ ಹೇಳಿದ್ದಾರೆ. ಮಂಗಳವಾರ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ.

ದೆಹಲಿ ಅಸೆಂಬ್ಲಿ ಚುನಾವಣೆ, ಮತಗಟ್ಟೆ ಸಮೀಕ್ಷೆ: ಭಾರತ 56, ಇಟೆಲಿ 1, ಪಾಕ್ 13 ದೆಹಲಿ ಅಸೆಂಬ್ಲಿ ಚುನಾವಣೆ, ಮತಗಟ್ಟೆ ಸಮೀಕ್ಷೆ: ಭಾರತ 56, ಇಟೆಲಿ 1, ಪಾಕ್ 13

ದೆಹಲಿ ಚುನಾವಣೋತ್ತರ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಸಮೀಕ್ಷೆಗಳ ಸಮೀಕ್ಷೆ ಪ್ರಕಾರ ಎಎಪಿ 55, ಬಿಜೆಪಿ 15 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಸಿ-ವೋಟರ್ ಸಮೀಕ್ಷೆ ಕಾಂಗ್ರೆಸ್ 1 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ.

ಆಮ್‌ ಆದ್ಮಿ ಪಕ್ಷ ಈ ಬಾರಿಯೂ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡುವ ವಿಶ್ವಾಸದಲ್ಲಿದೆ. ಪೂರ್ಣ ಬಹುಮತ ಬಂದರೆ ಮೈತ್ರಿ ಮಾತುಕತೆಯ ಸಾಧ್ಯತೆಗಳು ಮುರಿದು ಬೀಳಲಿವೆ.

English summary
Congress-AAP alliance in Delhi depends on the results said P.C.Chacko. Delhi assembly elections 2020 result will be announced on February 11, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X