Breaking: 15 ದಿನಗಳ ಬಳಿಕ ನಟ ರಾಜು ಶ್ರೀವಾಸ್ತವ್‌ಗೆ ಪ್ರಜ್ಞೆ

ನವದೆಹಲಿ, ಆಗಸ್ಟ್ 25: ಹೃದಯಾಘಾತದಿಂದ ಕಳೆದ 15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಸ್ಯನಟ ರಾಜು ಶ್ರೀವಾಸ್ತವ ಅವರಿಗೆ ಗುರುವಾರ ಪ್ರಜ್ಞೆ ಬಂದಿದೆ.

15 ದಿನಗಳ ನಂತರ ಇಂದು ರಾಜು ಶ್ರೀವಾಸ್ತವ ಅವರಿಗೆ ಪ್ರಜ್ಞೆ ಬಂದಿದೆ, ಅವರನ್ನು ದೆಹಲಿಯ ಏಮ್ಸ್‌ನಲ್ಲಿ ವೈದ್ಯರು ನಿಗಾ ವಹಿಸುತ್ತಿದ್ದಾರೆ ಎಂದು ನಟನ ಆಪ್ತ ಕಾರ್ಯದರ್ಶಿ ಗಾರ್ವಿತ್ ನಾರಂಗ್ ಹೇಳಿದ್ದಾರೆ.

ನಟ ರಾಜು ಶ್ರೀವಾಸ್ತವ ಅವರು ಹೃದಯಾಘಾತದಿಂದ ಆಗಸ್ಟ್ 10 ರಂದು ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಎದೆ ನೋವಿನಿಂದ ಕುಸಿದುಬಿದ್ದರು.

Comedia Raju Srivastava Gains Consciousness After 15 Days

ರಾಜು ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ರಾಜು ಅವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

58 ವರ್ಷದ ಅವರು ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡ ಬಗ್ಗೆ ದೂರು ನೀಡಿದರು. ಅದೇ ದಿನ ಅವರು ಆಂಜಿಯೋಪ್ಲಾಸ್ಟಿಗೂ ಒಳಗಾಗಿದ್ದರು.

ಇದಕ್ಕೂ ಮೊದಲು, ನಟ ರಾಜು ಅವರ ಕಿರಿಯ ಸಹೋದರ ದೀಪು ಶ್ರೀವಾಸ್ತವ ತಮ್ಮ ಸಹೋದರನ ಆರೋಗ್ಯ ಸ್ಥಿತಿಯ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲು ವಿಡಿಯೋ ಸಂದೇಶವನ್ನು ಕೂಡ ಹಂಚಿಕೊಂಡಿದ್ದಾರೆ.

Comedia Raju Srivastava Gains Consciousness After 15 Days

ರಾಜು ಅವರ ಕಿರಿಯ ಸಹೋದರ ಹಂಚಿಕೊಂಡಿರುವ ವಿಡಿಯೋದಲ್ಲಿ, ಹಾಸ್ಯನಟನ ಆರೋಗ್ಯ ಸರಿಯಾಗಲು, ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದ್ದ ಅಭಿಮಾನಿಗಳಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಜು ಅವರ ಆರೋಗ್ಯದ ಬಗ್ಗೆ ತಪ್ಪಾದ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ದೀಪು ಶ್ರೀವಾಸ್ತವ ಅವರು ವಿಡಿಯೋ ಸಂದೇಶದಲ್ಲಿ ರಾಜು ಅವರನ್ನು ಫೈಟರ್ ಎಂದು ಕರೆದಿದ್ದಾರೆ. "ಅವರೊಬ್ಬ ಹೋರಾಟಗಾರ ಮತ್ತು ಶೀಘ್ರದಲ್ಲೇ ಯುದ್ಧದಲ್ಲಿ ಗೆದ್ದು ಹಿಂತಿರುಗುತ್ತಾರೆ ಮತ್ತು ತಮ್ಮ ಹಾಸ್ಯದ ಮೂಲಕ ಎಲ್ಲರನ್ನು ರಂಜಿಸುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

1980 ರ ದಶಕದಿಂದ ಮನರಂಜನಾ ಉದ್ಯಮದಲ್ಲಿ ಸಕ್ರಿಯವಾಗಿರುವ ರಾಜು ಶ್ರೀವಾಸ್ತವ, 2005 ರಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ಶೋ "ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್" ನ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ ಬಳಿಕ ಭಾರಿ ಮನ್ನಣೆಯನ್ನು ಪಡೆದ್ದಾರೆ.

ಅವರು "ಮೈನೆ ಪ್ಯಾರ್ ಕಿಯಾ", "ಬಾಜಿಗರ್", "ಬಾಂಬೆ ಟು ಗೋವಾ" (ರೀಮೇಕ್) ಮತ್ತು "ಆಮ್ದಾನಿ ಅಥಾನಿ ಖರ್ಚಾ ರುಪೈಯಾ" ಮುಂತಾದ ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಹಿಂದಿ "ಬಿಗ್ ಬಾಸ್" ಸೀಸನ್ ಮೂರರಲ್ಲಿ ಸ್ಪರ್ಧಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+