ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೌರತ್ವ ತಿದ್ದುಪಡಿ ಮಸೂದೆ: ಬಿಜೆಪಿಯನ್ನು ಬೆಂಬಲಿಸಿದವರು ಯಾರು? ವಿರೋಧಿಸಿದವರು ಯಾರು?

|
Google Oneindia Kannada News

ನವದೆಹಲಿ, ಡಿಸೆಂಬರ್ 12: ವ್ಯಾಪಕ ಟೀಕೆ, ಆಕ್ರೋಶ, ಪ್ರತಿಭಟನೆಗಳ ನಡುವೆಯೇ ರಾಜ್ಯಸಭೆಯಲ್ಲಿ ಕೂಡ ಬುಧವಾರ ಪೌರತ್ವ ತಿದ್ದುಪಡಿ ಮಸೂದೆ 2019 ಅಂಗೀಕಾರವಾಗಿದೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಿಂದ ಬಂದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವ ಮಸೂದೆಯು ಎರಡೂ ಸದನಗಳಲ್ಲಿ ಅಂಗೀಕೃತವಾಗಿದ್ದು, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅನುಮೋದನೆಗೆ ಕಳುಹಿಸಲಾಗುತ್ತದೆ. ನಂತರ ಶೀಘ್ರದಲ್ಲಿಯೇ ಕಾನೂನು ರೂಪ ಪಡೆದುಕೊಳ್ಳಲಿದೆ. ಈ ನಡುವೆ ಮಸೂದೆಯ ವಿರುದ್ಧದ ಪ್ರತಿಭಟನೆಗಳು ತೀವ್ರವಾಗಿದೆ. ಮಸೂದೆಯು ಸ್ಥಳೀಯ ಜನರ ಭಾಷೆ, ಸಂಸ್ಕೃತಿ ಮತ್ತು ಬದುಕಿಗೆ ಮಾರಕವಾಗಲಿದೆ ಎಂದು ಆರೋಪಿಸಿ ಈಶಾನ್ಯ ರಾಜ್ಯಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, 48 ಗಂಟೆಗಳ ಕರ್ಫ್ಯೂ ವಿಧಿಸಲಾಗಿದೆ.

ಪೌರತ್ವ ತಿದ್ದುಪಡಿ ಮಸೂದೆ ಪಾಸ್; ಯಾರು, ಏನು ಹೇಳಿದರು? ಪೌರತ್ವ ತಿದ್ದುಪಡಿ ಮಸೂದೆ ಪಾಸ್; ಯಾರು, ಏನು ಹೇಳಿದರು?

ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಬುಧವಾರ ಮಸೂದೆ ಮಂಡನೆ ಮಾಡಿದ ಬಳಿಕ ಸುಮಾರು ಆರೂವರೆ ತಾಸುಗಳ ಕಾಲ ಅದರ ಬಗ್ಗ ಚರ್ಚೆ ನಡೆಯಿತು. ಬಳಿಕ ಮಸೂದೆಯನ್ನು ಮತಕ್ಕೆ ಹಾಕುವ ಪ್ರಕ್ರಿಯೆ ನಡೆಸಲಾಯಿತು. ಒಟ್ಟು 240 ಸದಸ್ಯರನ್ನು ಹೊಂದಿರುವ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗಲು ಕನಿಷ್ಠ 121 ಸದಸ್ಯರ ಬೆಂಬಲದ ಅಗತ್ಯವಿತ್ತು.

ಸಮಿತಿಗೆ ಕಳಿಸುವ ನಿರ್ಣಯಕ್ಕೆ ಸೋಲು

ಸಮಿತಿಗೆ ಕಳಿಸುವ ನಿರ್ಣಯಕ್ಕೆ ಸೋಲು

ಪೌರತ್ವ ತಿದ್ದುಪಡಿ ಮಸೂದೆಯನ್ನು ಅಂಗೀಕಾರ ಮಾಡುವುದಕ್ಕೂ ಮುನ್ನ ಆಯ್ಕೆ ಸಮಿತಿಯ ಪರಿಶೀಲನೆಗೆ ಕಳುಹಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ಹಾಗೂ ಇತರೆ ವಿರೋಧಪಕ್ಷಗಳು ನಿರ್ಣಯ ಮಂಡಿಸಿದವು. ಈ ನಿರ್ಣಯದ ಪರ ಕೇವಲ 99 ಮತಗಳು ಬಿದ್ದರೆ, ವಿರುದ್ಧವಾಗಿ 124 ಮತಗಳು ಚಲಾವಣೆಗೊಂಡವು. ಹೀಗಾಗಿ ನಿರ್ಣಯ ಬಿದ್ದುಹೋಯಿತು.

ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಮತ

ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಮತ

ಈ ಮಸೂದೆಗೆ ಕೆಲವು ತಿದ್ದುಪಡಿಗಳನ್ನು ತರಬೇಕೆಂದು ವಿರೋಧಪಕ್ಷಗಳು ಮಂಡಿಸಿದ ಒತ್ತಾಯವೂ ಧ್ವನಿಮತ ಪ್ರಕ್ರಿಯೆಯಲ್ಲಿ ತಿರಸ್ಕೃತಗೊಂಡಿತು. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟವು 64 ಸದಸ್ಯರನ್ನು ಹೊಂದಿತ್ತು. ಅದಕ್ಕೆ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೆಲಂಗಾಣ ರಾಷ್ಟ್ರೀಯ ಸಮಿತಿ ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷ ಸೇರಿದಂತೆ ಇನ್ನೂ 46 ಸದಸ್ಯರ ಬೆಂಬಲ ನಿರೀಕ್ಷಿಸಿತ್ತು. ಒಟ್ಟು 110 ಮತಗಳು ತನ್ನ ಪರವಾಗಿ ಬೀಳಲಿದೆ ಎಂದು ಯುಪಿಎ ಭಾವಿಸಿತ್ತು. ಆದರೆ 105 ಸದಸ್ಯರ ಬೆಂಬಲವಷ್ಟೇ ಸಿಕ್ಕಿತು.

ಕೆಲವು ರಾಜ್ಯಗಳಿಗೆ ಪೌರತ್ವ ಮಸೂದೆ ಅನ್ವಯವಾಗದು, ಕಾರಣ ಹೀಗಿದೆಕೆಲವು ರಾಜ್ಯಗಳಿಗೆ ಪೌರತ್ವ ಮಸೂದೆ ಅನ್ವಯವಾಗದು, ಕಾರಣ ಹೀಗಿದೆ

ಶಿವಸೇನಾ ಸಭಾತ್ಯಾಗ

ಶಿವಸೇನಾ ಸಭಾತ್ಯಾಗ

ಎನ್‌ಸಿಪಿಯ ಇಬ್ಬರು, ಸಮಾಜವಾದಿ ಪಕ್ಷ ಹಾಗೂ ಟಿಎಂಸಿಯ ತಲಾ ಒಬ್ಬ ಸದಸ್ಯರು ಸದನಕ್ಕೆ ಗೈರಾಗಿದ್ದರು. ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ಕಾಂಗ್ರೆಸ್ ಮತ್ತು ಎನ್‌ಸಿಪಿ ಜತೆಗೂಡಿ ಸರ್ಕಾರ ರಚಿಸಿರುವ ಅದರ ಮಾಜಿ ಮಿತ್ರ ಶಿವಸೇನಾದ ಮೂವರು ಸದಸ್ಯರು, ಮಸೂದೆಯನ್ನು ಮತಕ್ಕೆ ಹಾಕುವ ಮೊದಲೇ ಸಭಾತ್ಯಾಗ ಮಾಡಿದರು.

ಬಿಜೆಪಿಗೆ ಬೆಂಬಲ ನೀಡಿದ ಪಕ್ಷಗಳು

ಬಿಜೆಪಿಗೆ ಬೆಂಬಲ ನೀಡಿದ ಪಕ್ಷಗಳು

ಜೆಡಿಯು, ಶಿರೋಮಣಿ ಅಕಾಲಿದಳ, ಎಐಎಡಿಎಂಕೆ ಮುಂತಾದವುಗಳನ್ನು ಒಳಗೊಂಡ ಎನ್‌ಡಿಎಗೆ ಬಿಜೆಡಿ, ಟಿಡಿಪಿ, ವೈಎಸ್ಆರ್ ಕಾಂಗ್ರೆಸ್ ಮತ್ತು ಸ್ವತಂತ್ರ ಅಭ್ಯರ್ಥಿಗಳ ಬೆಂಬಲ ಸಿಕ್ಕಿತು. ಎನ್‌ಡಿಎ ಮೈತ್ರಿಕೂಟಕ್ಕೆ ಒಟ್ಟು 125 ಸದಸ್ಯರ ಬೆಂಬಲ ದೊರೆತರೆ, ವಿರೋಧಪಕ್ಷಗಳ ಸವಾಲು 105ಕ್ಕೆ ಸೀಮಿತಗೊಂಡಿತು.

English summary
Controversial Citizenship Amendment Bill was passed in Parliament during Winter Session Rajya Sabha on Wednesday. NDA got 125 votes for the bill and 105 members were voted against it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X