ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲರ 'ಡಿಎನ್‌ಎ' ಒಂದೇ ಆದರೆ ಮತಾಂತರ ವಿರೋಧಿ ಕಾನೂನು ಏಕೆ?: ದಿಗ್ವಿಜಯ್ ಸಿಂಗ್

|
Google Oneindia Kannada News

ನವದೆಹಲಿ, ಜುಲೈ 09: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರ 'ಡಿಎನ್‌ಎ' ಹೇಳಿಕೆ ಒಪ್ಪುವುದಾದರೆ ಮತಾಂತರ ವಿರೋಧಿ ಕಾನೂನು ಏಕೆ ಬೇಕು ಎಂದು ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.

ಬಿಜೆಪಿ ಆಡಳಿತದ ರಾಜ್ಯಗಳು ಧಾರ್ಮಿಕ ಮತಾಂತರ ಮತ್ತು ಕಾನೂನು ವಿರುದ್ಧ ಕಾನೂನುಗಳನ್ನು ತರಬೇಕಾದ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳು, ಮದುವೆ ಅಥವಾ ಮೋಸದ ಮೂಲಕ ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಶಾಸನಗಳನ್ನು ಜಾರಿಗೆ ತಂದಿವೆ ಎಂದರು.

Digvijaya Singh

""ಹಿಂದೂ-ಮುಸ್ಲಿಮರ ಡಿಎನ್‌ಎ ಒಂದೇ ಆಗಿದ್ದರೆ ಧಾರ್ಮಿಕ ಮತಾಂತರ ಕಾನೂನು ಅಥವಾ ಲವ್-ಜಿಹಾದ್ ಕಾನೂನಿನ ಅವಶ್ಯಕತೆ ಏನು? ಆಗ, ಮೋಹನ್ ಭಾಗವತ್ ಜೀ ಮತ್ತು ಎಐಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಅವರ ಡಿಎನ್‌ಎ ಒಂದೇ ಆಗಿರುತ್ತದೆ'' ಎಂದು ಸಿಂಗ್ ಹೇಳಿದ್ದಾರೆ.

ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಟೀಕಿಸಿದ ದಿಗ್ವಿಜಯ್ ಸಿಂಗ್ ವಿರುದ್ಧ ಮಧ್ಯಪ್ರದೇಶದ ಗೃಹ ಸಚಿವ ಮತ್ತು ಬಿಜೆಪಿ ಮುಖಂಡ ನರೋತ್ತಮ್ ಮಿಶ್ರಾ ವಾಗ್ದಾಳಿ ನಡೆಸಿದರು.

ಹಿಂದುತ್ವ ವಿಚಾರ: ಮೋಹನ್ ಭಾಗವತ್, ಅಸಾದುದ್ದೀನ್ ಓವೈಸಿ ವಾಕ್ಸಮರ
ದೇಶದ ಏಕತೆ ಮತ್ತು ಸಮಗ್ರತೆಯನ್ನು ಹಾಗೇ ಉಳಿಸಿಕೊಳ್ಳುವುದು ಭಗವತ್‌ರ ಚಿಂತನೆಯಾಗಿದ್ದರೆ ಅದಕ್ಕೆ ವಿರೋಧವಾಗಿ ಸಿಂಗ್ ಚಿಂತಿಸುತ್ತಿದ್ದಾರೆ ಎಂದು ಮಿಶ್ರಾ ಟ್ವೀಟ್ ಮಾಡಿದ್ದಾರೆ.

ಭಾನುವಾರ ಗಾಜಿಯಾಬಾದ್‌ನಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ "ಹಿಂದೂಸ್ತಾನ್ ಫಸ್ಟ್, ಹಿಂದೂಸ್ತಾನಿ ಬೆಸ್ಟ್' ಕಾರ್ಯಕ್ರಮವೊಂದರಲ್ಲಿ ತಮ್ಮ ಭಾಷಣದಲ್ಲಿ ಭಾಗವತ್ ಅವರು "ಎಲ್ಲ ಭಾರತೀಯರ ಡಿಎನ್‌ಎ ಒಂದೇ' ಎಂದು ಹೇಳಿದ್ದರು. ಇದಲ್ಲದೆ, ಭಗವತ್ ಹಸು ಪವಿತ್ರ ಪ್ರಾಣಿ, ಅದಕ್ಕೆ ಬೇರೆಯವರನ್ನು ಹತ್ಯೆ ಮಾಡುವುದು ಹಿಂದುತ್ವಕ್ಕೆ ವಿರುದ್ಧ'' ಎಂದು ಹೇಳಿದ್ದರು.

ಮರುದಿನ, ಬಿಜೆಪಿಯ ಕಟು ವಿಮರ್ಶಕ ಸಿಂಗ್, ಭಾಗವತ್ ಅವರ ಮಾತುಗಳು ನಿಜವಾಗಿದ್ದರೆ, ಮುಗ್ಧ ಮುಸ್ಲಿಂರಿಗೆ ಕಿರುಕುಳ ನೀಡಿದ ಕೇಸರಿ ಪಕ್ಷದ ಎಲ್ಲ ನಾಯಕರನ್ನು ಅವರ ಹುದ್ದೆಗಳಿಂದ ತೆಗೆದುಹಾಕುವಂತೆ ಅವರು ನಿರ್ದೇಶನಗಳನ್ನು ನೀಡಬೇಕು ಎಂದು ಹೇಳಿದ್ದಾರೆ.

English summary
Continuing his attack on RSS chief Mohan Bhagwat over his “DNA of all Indians is the same” remark, Congress veteran Digvijaya Singh has if that was the case what was the need for BJP-ruled states to bring in laws against religious conversion and inter-faith marriages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X