ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ವಿರುದ್ಧ ಕೆಂಡಕಾರುತ್ತಿರುವ ಚರ್ಚ್ ಗೆ ಟ್ವಿಟ್ಟಿಗರ ಗುದ್ದು!

|
Google Oneindia Kannada News

Recommended Video

ನರೇಂದ್ರ ಮೋದಿಯವರನ್ನ ಚರ್ಚ್ ಗಳು ಟಾರ್ಗೆಟ್ ಮಾಡ್ತಿದ್ಯಾ? ಟ್ವಿಟ್ಟರ್ ನಲ್ಲಿ ಇದು ಈಗ ಟ್ರೆಂಡಿಂಗ್

ನವದೆಹಲಿ, ಮೇ 22: ದೆಹಲಿಯ ಆರ್ಚ್ ಬಿಶಪ್ ವೊಬ್ಬರು ಹೊರಡಿಸಿದ ಪ್ರಕಟಣೆಯೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಅನಿಲ್ ಶೋಸೆಫ್ ಥಾಮಸ್ ಕೌಟೋ ಎಂಬ ಕ್ರೈಸ್ತ ಗುರುವೊಬ್ಬರು ಇತ್ತೀಚೆಗೆ ಹೊರಡಿಸಿದ್ದ ಪ್ರಕಟಣೆಯೊಂದರಲ್ಲಿ, "ನಾವಿಂದು ದೇಶದಲ್ಲಿ ರಾಜಕೀಯ ಪ್ರಕ್ಷುಬ್ಧತೆಯನ್ನು ಕಾಣುತ್ತಿದ್ದೇವೆ. ಇದು ನಮ್ಮ ಸಂವಿಧಾನ ನೀಡಿದ ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ಅತೀದೊಡ್ಡ ಅಪಾಯ. ಅಷ್ಟೇ ಅಲ್ಲ, ಇದು ನಮ್ಮ ಜಾತ್ಯತೀತ ತತ್ತ್ವಕ್ಕೂ ವಿರುದ್ಧ. ಆದ್ದರಿಂದ ಪ್ರತಿಯೊಬ್ಬ ಕ್ರೈಸ್ತನೂ ಇನ್ನು ಮೇಲೆ ನಮ್ಮ ದೇಶಕ್ಕಾಗಿ, ಸದೃಢ ನಾಯಕತ್ವಕ್ಕಾಗಿ ಪ್ರಾರ್ಥನೆ ಮತ್ತು ವಾರಕ್ಕೊಂದು ದಿನ ಉಪವಾಸ ವ್ರತ ನಡೆಸಬೇಕಿದೆ" ಎಂದಿದ್ದರು.

ಅದೇ ಖದರ್, ಅದೇ ಗತ್ತು: ಬಿಜೆಪಿ ವಿರುದ್ದ ಕೆಂಡಕಾರಿದ ಮಾಜಿ ಸಿಎಂ ಸಿದ್ದರಾಮಯ್ಯ ಅದೇ ಖದರ್, ಅದೇ ಗತ್ತು: ಬಿಜೆಪಿ ವಿರುದ್ದ ಕೆಂಡಕಾರಿದ ಮಾಜಿ ಸಿಎಂ ಸಿದ್ದರಾಮಯ್ಯ

"2019 ರ ಲೋಕಸಭಾ ಚುನಾವಣೆಯಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಪ್ರಾರ್ಥಿಸೋಣ" ಎನ್ನುವ ಮೂಲಕ ಹಾಲಿ ಸರ್ಕಾರದ ಕುರಿತ ತಮ್ಮ ಅಸಮಾಧಾನವನ್ನು ಕ್ರೈಸ್ತ ಗುರು ಹೊರಹಾಕಿದ್ದಾರೆ. ಈ ಪ್ರಕಟಣೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಚರ್ಚುಗಳು ಟಾರ್ಗೆಟ್ ಮಾಡುತ್ತಿವೆ ಎಂದು ಹಲವರು ದೂರಿದ್ದಾರೆ. ಮೋದಿ ಸರ್ಕಾರದ ಅಡಿಯಲ್ಲಿ ಮತಾಂತರಕ್ಕೆ ಹೆಚ್ಚು ಅವಕಾಶ ಸಿಗುತ್ತಿಲ್ಲವಾದ್ದರಿಂದ ಅವರಿಗೆ ಆತಂಕವಾದಂತಿದೆ ಎಂದು ಕೆಲವರು ಕುಟುಕಿದ್ದಾರೆ.

ಪೆದ್ದ ಹಿಂದುಗಳಿಗೆ ಅರ್ಥವಾಗುತ್ತಿಲ್ಲ!

ನೀವು ನಮ್ಮ ದೇಶಕ್ಕೆ ಬಂದಿರಿ, ನಮ್ಮನ್ನು ಕೊಳ್ಳಲೆಹೊಡೆದಿರಿ, ನಿಮ್ಮ ಮತವನ್ನು ನಮ್ಮ ಮೇಲೆ ಹೇರಿದಿರಿ, ಈಗ ನಮ್ಮನ್ನು ಆಳುವುದಕ್ಕೂ ನೋಡುತ್ತಿದ್ದೀರಿ. ಅಷ್ಟೇ ಅಲ್ಲ, ಹಿಂದುಗಳಿಗೆ ಹಿಂದುಗಳೇ ಬೆಂಬಲ ನೀಡದಂತೆ ಮಾಡುತ್ತಿದ್ದೀರಿ. ಇಷ್ಟಾದರೂ ಪೆದ್ದ ಹಿಂದುಗಳಿಗೆ ಗೊತ್ತಾಗುತ್ತಿಲ್ಲ, ಅವರು ಸುಮ್ಮನೇ ಕುರುಡಾಗಿ ಮೋದಿಯವರನ್ನು ದ್ವೇಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಸೂರ್ಯ.

ಸಿಕ್ಯುಲರ್ ಮೀಡಿಯಾಗಳೆಲ್ಲಿ?

ರಾಜಕೀಯದಲ್ಲಿ ಚರ್ಚ್ ಮಧ್ಯಸ್ಥಿಕೆ ವಹಿಸುತ್ತಿದೆ. ಯಾರಿಗೆ ಮತ ಚಲಾಯಿಸಬೇಕೆಂದು ಮುಲ್ಲಾಗಳು ಫತ್ವಾ ಹೊರಡಿಸುತ್ತಾರೆ! ಇವೆಲ್ಲವೂ ಜಾತ್ಯತೀತತೆ! ಇಷ್ಟಾದರೂ ಸಿಕ್ಯುಲರ್ ಮಾಧ್ಯಮಗಳು ಈ ಕುರಿತು ಚರ್ಚೆ ನಡೆಸೋಲ್ಲ, ಪ್ರತಿಭಟನೆ ಮಾಡೋಲ್ಲ, ಎಡಪಂಥೀಯರು, ಸೆಲೆಬ್ರಿಟಿಗಳು ಮಾತೆತ್ತೋಲ್ಲ. ಎಂಗಥ ಕಪಟ ಜಗತ್ತು ಇದು ಎಂದಿದ್ದಾರೆ ಶ್ಯಾಮ್ ಶ್ರೀವಾತ್ಸವ್.

ಮೋದಿಯೂ ಅಲ್ಪಸಂಖ್ಯಾತರನ್ನು ಓಲೈಸಿಲ್ಲವೇ?

ಪ್ರಧಾನಿ ನರೇಂದ್ರ ಮೋದಿಯವರು ಅಲ್ಪಸಂಖ್ಯಾತರನ್ನು ಓಲೈಸುವುದಕ್ಕಾಗಿ ಹಲವು ಯೋಜನೆಗಳನ್ನು ಕೈಗೊಂಡರೂ ಚರ್ಚ್ ಏಕೆ ಮೋದಿಯವರನ್ನು ಟಾರ್ಗೆಟ್ ಮಾಡುತ್ತಿದೆ. ಬಿಜೆಪಿಯಾಗಲೀ, ಆರೆಸ್ಸೆಸ್ ಆಗಲಿ ಹಿಂದುಗಳಿಗಾಗಿ ಏನನ್ನೂ ಮಾಡಿಲ್ಲ. ಸುಮ್ಮನೇ ಪ್ರಚಾರ ಗಿಟ್ಟಿಸುತ್ತಿದೆ ಯಷ್ಟೇ ಎಂದಿದ್ದಾರೆ ವಿಕಾಸ್.

ಕುಂಬಳಕಾಯಿ ಕಳ್ಳ ಅಂದ್ರೆ...

ಆ ಪ್ರಕಟಣೆಯಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ, ಯಾರನ್ನೂ ಟಾರ್ಗೆಟ್ ಮಾಡಲಾಗಿಲ್ಲ. ಆದರೂ ಕೆಲವರು ಇದನ್ನು ತಮಗೇ ಹೇಳಿದ್ದು ಎಂದು ಕೂಗುತ್ತಿರುವುದೇಕೆ ಎಂದು ಪ್ರಶ್ಬಿಸಿದ್ದಾರೆ ರಾಜ್ ಕುಮಾರ್.

ಇದಕ್ಕೆ ಕಾರಣವೇನು?

ಚರ್ಚುಗಳು ಮೋದಿಯನ್ನು ಟಾರ್ಗೆಟ್ ಮಾಡುತ್ತಿವೆ. ಇದಕ್ಕೆ ಕಾರಣ ಏನು ಗೊತ್ತೆ? ಅವರಿಗೆ ಎನ್ ಜಿ ಒಗಳ ಕಡೆಯಿಂದ ಅಕ್ರಮ ಹಣ ಬರುತ್ತಿಲ್ಲ, ಮತಾಂತರ ಮಾಡುವುದಕ್ಕೆ ಎಂದು ಕಾಲೆಳೆದಿದ್ದಾರೆ ರಂಜಿತ್.

ನಮಗೆ ಇದು ಅರ್ಥವಾಗೋಲ್ಲ!

ಚರ್ಚ್ ಎಂದಿಗೂ ತಾನು ತಪ್ಪು ಮಾಡುತ್ತಿದ್ದೇನೆ ಎಂದು ಯೋಚಿಸುವುದಿಲ್ಲ. ಅವರ ಕೆಲಸವೇನಿದ್ದರೂ ಮತಾಂತರ. ಅದಕ್ಕೆ ಬೆಮಬಲ ನೀಡುವಂಥ ಸರ್ಕಾರವನ್ನೇ ಅಧಿಕಾರಕ್ಕೆ ತರಲು ನೋಡುತ್ತದೆ. ಆದರೆ ನಮಗೆ ಇದು ಅರ್ಥವಾಗುವುದಿಲ್ಲವಲ್ಲ, ಅದೇ ಸಮಸ್ಯೆ ಎಂದಿದ್ದಾರೆ ಮಾರಿಯಾ ವರ್ಥ್.

ನಾನು ಕ್ರಿಶ್ಚಿಯನ್, ನನ್ನ ಬೆಂಬಲ ಮೋದಿಗೆ

ನಾನೊಬ್ಬ ಕ್ರಿಶ್ಚಿಯನ್. ಆದರೂ ನನಗೆ ಗೊತ್ತು 2019 ರಲ್ಲಿ ಭಾರತಕ್ಕೆ ಇರುವ ಏಕೈಕ ಆಯ್ಕೆ ಎಂದರೆ ಅದು ಮೋದಿಯವರು ಮಾತಗ್ರ ಎಂದಿದ್ದಾರೆ ಮಿಸ್ ನಿಶಾ.

ಜೀರ್ಣಿಸಿಕೊಳ್ಳಲು ಆಗದ್ದು...

ಕೆಲವರಿಗೆ ಜೀರ್ಣಿಸಿಕೊಳ್ಳಲು ಆಗದಿರುವ ಸಂಗತಿ ಹಲವಿದೆ.
1. ಇಡೀ ಜಗತ್ತಿನಾದ್ಯಂತ ಹಿಂದು ವ್ಯಕ್ತಿಯೊಬ್ಬರು ಅತ್ಯಂತ ಜನಪ್ರಿಯರಾಗಿರುವುದು
2. ಮತಾಂತರಕ್ಕಾಗಿ ಎನ್ ಜಿ ಒಗಳಿಂದ ಹಣ ಹರಿದುಬರದಿರುವುದು.
3. ಸೋನಿಯಾಗಾಂಧಿ ಅಧಿಕಾರದಿಂದ ಹೊರಗಿರುವುದು.

English summary
An archbishop of Delhi has come out with a circular in which he is asking christians to offer prayers and observe a day fast for the nation ahead of the general elections. After this incident ChurchTargetsModi hashtag is trending on twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X