ಚೆಕ್ ಬುಕ್ ನಿಷೇಧಿಸುವ ಯಾವುದೇ ಪ್ರಸ್ತಾಪವಿಲ್ಲ: ಸ್ಪಷ್ಟನೆ

Posted By: Nayana
Subscribe to Oneindia Kannada

ನವದೆಹಲಿ, ನವೆಂಬರ್24 : ಬ್ಯಾಂಕಿಂಗ್ ವ್ಯವಹಾರಕ್ಕೆ ಬಳಸುವ ಚೆಕ್ ಬುಕ್ ಗಳನ್ನು ರದ್ದುಪಡಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ಸ್ಪಷ್ಟ ಪಡಿಸಿದೆ.

ನೋಟ್ ಬ್ಯಾನ್ ಆಯ್ತು, ಇದೇನು ಮೋದಿ ಸರಕಾರದ ಚೆಕ್ ಬ್ಯಾನ್ ಸುದ್ದಿ!

ಟಿಜಿಟಲ್ ವ್ಯವಹಾರವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಚೆಕ್ ಬುಕ್ ರದ್ದುಪಡಿಸಲಾಗುತ್ತದೆ ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಯಿಸಿರುವ ಹಣಕಾಸು ಸಚಿವಾಲಯ, ಅಂತಹ ಯಾವುದೇ ಪ್ರಸ್ತಾಪ ಸಚಿವಾಲಯದಲ್ಲಿ ಇಲ್ಲ ಎಂದು ಹೇಳಿದೆ. ಈ ಬಗ್ಗೆ ಸಚಿವಾಲಯ ಟ್ವೀಟ್ ಮಾಡುವ ಮೂಲಕ ಗೊಂದಲ ಬಗೆಹರಿಸಿದೆ. ಚೆಕ್ ಬುಕ್ ರದ್ದುಪಡಿಸುವ ಬೆಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.

Cheque Book will not Ban: Finance Ministry

ಕೆಲವು ಬ್ಯಾಂಕ್ ಗಳು ತಮ್ಮ ಬ್ಯಾಂಕ್ ಗಳನ್ನು ಡಿಜಿಟಲೀಕರಣ ಮಾಡುವ ದೃಷ್ಟಿಯಿಂದ ಚೆಕ್ ಬುಕ್ ಗಳನ್ನು ರದ್ದು ಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ ಎಂದು ಸುದ್ದಿ ಹರಿದಾಡಿತ್ತು ಆದರೆ ಹಣಕಾಸು ಸಚಿವಾಲಯವು ನಾವು ಕೇಂದ್ರ ಸರ್ಕಾರದ ಮುಂದೆ ಈ ಪ್ರಸ್ತಾಪವನ್ನು ಇಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಈಗಾಗಲೇ ಕೇಂದ್ರ ಸರ್ಕಾರ ಜನರ ಭದ್ರತಾ ದೃಷ್ಟಿಯಿಂದ ಎಲ್ಲ ವ್ಯವಹಾರವನ್ನು ಕ್ಯಾಶ್ ಲೆಸ್ ಮಾಡುವ ಕುರಿತು ಜನರಲ್ಲಿ ಅರಿವು ಮೂಡಿಸುತ್ತಿದೆ. ಆದರೆ ಚೆಕ್ ಬುಕ್ ನ್ನು ರದ್ದುಪಡಿಸುವ ಕುರಿತು ಬರುತ್ತಿರುವ ಸುದ್ದಿಗಳೆಲ್ಲ ಸುಳ್ಳಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Finance Ministry has clarified that there was no proposal to ban Cheque Books.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ