• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈಲು ಟಿಕೆಟ್‌ನ್ನು ರದ್ದು ಮಾಡ್ತಿದ್ದೀರಾ, ಯಾವ ಕೋಚ್‌ಗೆ ಎಷ್ಟು ದರ?

|

ಬೆಂಗಳೂರು, ಫೆಬ್ರವರಿ 26: ನೀವು ರೈಲ್ವೆ ಟಿಕೆಟ್‌ನ್ನು ಕ್ಯಾನ್ಸಲ್ ಮಾಡ್ತಿದ್ದೀರಾ, ಟಿಕೆಟ್ ರದ್ದು ಮಾಡಿದರೆ ದರ ಎಷ್ಟು ಎನ್ನುವ ಮಾಹಿತಿ ಪಡೆಯಲು ತಪ್ಪದೆ ಈ ಸುದ್ದಿ ಓದಿ..

ಇನ್ನುಮುಂದೆ ರೈಲ್ವೆ ಟಿಕೆಟ್‌ನ್ನು ರದ್ದುಪಡಿಸಿದರೆ ದಂಡ ತೆರಬೇಕಾಗುತ್ತದೆ ಎಂದು ಐಆರ್‌ಸಿಟಿಸಿ ತಿಳಿಸಿದೆ. ಐಆರ್‌ಸಿಟಿಸಿ ನಿಯಮದ ಪ್ರಕಾರ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಮಾತ್ರ ಟಿಕೆಟ್ ರದ್ದುಪಡಿಸಬಹುದು ಆದರೆ ಐಆರ್‌ಸಿಟಿಸಿ ಕೌಂಟರ್‌ಗೆ ತೆರಳಿ ಯಾವುದೇ ಟಿಕೆಟ್ ರದ್ದುಪಡಿಸುವ ಹಾಗಿಲ್ಲ. ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಬುಕ್ಡ್‌ ಟಿಕೆಟ್ ಸೆಕ್ಷನ್‌ಗೆ ತೆರಳಿ ಯಾವ ಟಿಕೆಟ್ ನ್ನು ರದ್ದು ಪಡಿಸಬೇಕು ಎನ್ನುವುದನ್ನು ಕ್ಲಿಕ್ ಮಾಡಬೇಕು.

ಟಿಕೆಟ್ ರದ್ದುಪಡಿಸಿರುವ ಕುರಿತು ಆನ್‌ಲೈನ್‌ನಲ್ಲಿಯೇ ಮಾಹಿತಿ ಲಭ್ಯವಾಗುತ್ತದೆ ಹಾಗೆಯೇ ನೇರವಾಗಿ ಖಾತೆಗೆ ರಿಫಂಡ್ ಕೂಡ ಮಾಡಲಾಗುತ್ತದೆ. ನಾರ್ಮಲ್ ಟಿಕೆಟ್ ಬಿಟ್ಟು ಉಳಿದ ಟಿಕೆಟ್ ಆದರೆ ಎ-ರಿಸರ್ವೇಷನ್ ಸ್ಲಿಪ್‌ನ್ನು ಇಟ್ಟುಕೊಂಡಿರಬೇಕಾಗುತ್ತದೆ. ಒಂದೊಮ್ಮೆ ಟಿಕೆಟ್ ಕ್ಯಾನ್ಸಲ್ ಮಾಡಬೇಕಿದ್ದರೆ 48 ತಾಸುಗಳ ಮುಂಚಿತವಾಗಿಯೇ ಮಾಡಬೇಕು.

ರದ್ದತಿ ಶುಲ್ಕ

ಎಸಿ ಕ್ಲಾಸ್, ಎಕ್ಸಿಕ್ಯೂಟಿವ್ ಕ್ಲಾಸ್- 240 ರೂ

ಎಸಿ 2 ಟೈಯರ್, ಫರ್ಸ್ಟ ಕ್ಲಾಸ್-200 ರೂ.

ಎಸಿ 3, ಎಸಿ ಚೇರ್ ಕಾರ್-180 ರೂ

ಸ್ಲೀಪರ್ ಕ್ಲಾಸ್-120

ಸೆಕಂಡ್ ಕ್ಲಾಸ್-60 ರೂ ನೀಡಬೇಕಾಗುತ್ತದೆ.

English summary
With regard to the cancellation of train tickets, the Indian Railway Catering and Tourism Corporation (IRCTC) charges cancellation fees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X