ಮಾರ್ಗಸೂಚಿ: ಮಾಲ್ ತೆರೆಯಬಹುದು, ಆದರೆ ಚಿತ್ರಮಂದಿರ ಬಂದ್
ದೆಹಲಿ, ಜೂನ್ 4: ಕಂಟೈನ್‌ಮೆಂಟ್ ಜೋನ್ ಬಿಟ್ಟು ಹೊರಗಿನ ಪ್ರದೇಶಗಳಲ್ಲಿ ಮಾಲ್‌ಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಜೂನ್ 8 ರಿಂದ ದೇಶಾದ್ಯಂತ ಮಾಲ್‌ಗಳು ಕಾರ್ಯಾರಂಭ ಮಾಡಬಹುದು. ಆದರೆ, ಮಾಲ್‌ಗಳಲ್ಲಿರುವ ಚಿತ್ರಮಂದಿರಗಳನ್ನು ತೆರೆಯುವಂತಿಲ್ಲ ಎಂದು ಕೇಂದ್ರ ಆದೇಶಿಸಿದೆ.
Recommended Video
ಅದಕ್ಕಾಗಿ, ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಮಾಲ್‌ಗಳು ಪಾಲಿಸಬೇಕಾಗಿದೆ. ಮಾಲ್‌ಗಳಲ್ಲಿ ಮಕ್ಕಳು ಆಡುವ ಪ್ರದೇಶವನ್ನು ಕಡ್ಡಾಯವಾಗಿ ಬಂದ್ ಮಾಡಬೇಕೆಂದು ಸೂಚಿಸಲಾಗಿದೆ.
ಮಾಲ್‌ಗಳ ಪ್ರವೇಶದ್ವಾರದ ಬಳಿ ಥರ್ಮಲ್ ಸ್ಕ್ರೀನಿಂಗ್ ಬಳಸಬೇಕು. ಪ್ರವೇಶದ್ವಾರದ ಬಳಿಕ ಕಾರ್ಯನಿರ್ವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಗ್ಲೌಸ್ ಮತ್ತು ಮಾಸ್ಕ್ ಧರಿಸಬೇಕು. ಗ್ರಾಹಕರು ಕೂಡ ಎಲ್ಲ ಸಂದರ್ಭದಲ್ಲಿ ಮಾಸ್ಕ್ ಧರಿಸಲೇಬೇಕು.

ಕೊರೊನಾ ವೈರಸ್ ರೋಗ ಲಕ್ಷಣ ರಹಿತ ಗ್ರಾಹಕರು ಮತ್ತು ಸಂದರ್ಶಕರು ಹಾಗೂ ಸಿಬ್ಬಂದಿಗೆ ಮಾತ್ರ ಅವಕಾಶವಿರುತ್ತದೆ. ಮಾಲ್‌ಗಳು ಮನರಂಜನಾ ಸ್ಥಳವಾಗಿರುವುದರಿಂದ ಹೆಚ್ಚಿನ ಜನರು ಬರ್ತಾರೆ. ಹಾಗಾಗಿ, ಸಾಮಾಜಿಕ ಅಂತರವನ್ನು ಕಾಪಾಡಬೇಕು.
ಕೊರೊನಾ ವೈರಸ್ ತಡೆಗಟ್ಟುವ ಕ್ರಮಗಳ ಕುರಿತು ಪೋಸ್ಟರ್‌ಗಳು ಮತ್ತು ಆಡಿಯೋ-ದೃಶ್ಯ ಮಾಧ್ಯಮವನ್ನು ಪ್ರಮುಖವಾಗಿ ಪ್ರದರ್ಶಿಸಬೇಕು ಎಂದು ಸಚಿವಾಲಯ ತಿಳಿಸಿದೆ. ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ವೈದ್ಯಕೀಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಕುರಿತು ಮುನ್ನೆಚ್ಚರಿಕೆ ವಹಿಸಬೇಕು.
ಪಾರ್ಕಿಂಗ್ ಸ್ಥಳಗಳಲ್ಲಿ ಮತ್ತು ಆವರಣದ ಹೊರಗೆ ಜನಸಂಖ್ಯೆಯನ್ನು ನಿರ್ವಹಣೆ ಮಾಡಬೇಕು. ಸಂದರ್ಶಕರು, ಕಾರ್ಮಿಕರು ಮತ್ತು ಸರಕು / ಸರಬರಾಜುಗಳಿಗಾಗಿ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನಗಳನ್ನು ಆಯೋಜಿಸಬೇಕು. ಲಿಫ್ಟ್‌ಗಳಲ್ಲಿ ಜನರ ಸಂಚರಿಸುವುದನ್ನು ನಿರ್ಬಂಧಿಸಬೇಕು












Click it and Unblock the Notifications