• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕದಲ್ಲಿ 750 ಮೆ.ವ್ಯಾಟ್ ಬೃಹತ್ ಸೌರಶಕ್ತಿ ಪಾರ್ಕ್

By Kiran B Hegde
|

ನವದೆಹಲಿ, ನ. 25: ದೇಶದಲ್ಲಿರುವ ತೀವ್ರ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೃಹತ್ ಸೌರಶಕ್ತಿ ಪಾರ್ಕ್‌ಗಳ ಸ್ಥಾಪನೆಗೆ ಮುಂದಾಗಿದೆ. ಕರ್ನಾಟಕ ಸೇರಿದಂತೆ 12 ವಿವಿಧ ರಾಜ್ಯಗಳಲ್ಲಿ 25 ಬೃಹತ್ ಸೌರಶಕ್ತಿ ಪಾರ್ಕ್‌ಗಳನ್ನು ನಿರ್ಮಿಸಲು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಯೋಜಿಸಿದೆ.

ಈ ಕುರಿತು ಮಾಧ್ಯಮಕ್ಕೆ ಸಚಿವಾಲಯದ ಜಂಟಿ ಕಾರ್ಯದರ್ಶಿ ತರುಣ್ ಕಪೂರ್ ಮಾಹಿತಿ ನೀಡಿದ್ದಾರೆ. ಕರ್ನಾಟಕ, ಆಂದ್ರ ಪ್ರದೇಶ, ತೆಲಂಗಾಣ, ಮದ್ಯ ಪ್ರದೇಶ, ರಾಜಸ್ತಾನ, ಓಡಿಶಾ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸೌರಶಕ್ತಿ ಪಾರ್ಕ್ ಸ್ಥಾಪನೆಗೆ ಸ್ಥಳ ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. [ಕರ್ನಾಟಕದಲ್ಲಿ ಹರ್ಭಜನ್ ಸೌರ ಘಟಕ]

ಕರ್ನಾಟಕದಲ್ಲಿ 750 ಮೆ.ವ್ಯಾಟ್, ತೆಲಂಗಾಣ 1 ಸಾವಿರ, ಮಧ್ಯಪ್ರದೇಶದಲ್ಲಿ 750 ಮೆ.ವ್ಯಾಟ್‌ನ ಎರಡು ಪಾರ್ಕ್, ಓಡಿಶಾ ಮತ್ತು ಪಂಜಾಬ್‌ನಲ್ಲಿ 3 ಸಾವಿರ, ಆಂದ್ರ ಪ್ರದೇಶದಲ್ಲಿ 2,500 ಹಾಗೂ ರಾಜಸ್ಥಾನದಲ್ಲಿ ಅತ್ಯಂತ ದೊಡ್ಡದಾಗ 4-5 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಸೌರಶಕ್ತಿ ಪಾರ್ಕ್ ಸ್ಥಾಪಿಸಲಾಗುವುದು.

ಗುಜರಾತ್, ರಾಜಸ್ಥಾನ ಮಾದರಿ: ಗುಜರಾತ್ ಹಾಗೂ ರಾಜಸ್ಥಾನದಲ್ಲಿರುವ ಸೌರಶಕ್ತಿ ಪಾರ್ಕ್ ಮಾದರಿಯಲ್ಲಿ ನಿರ್ಮಿಸಲಾಗುವುದು. ಐದು ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಸಚಿವಾಲಯ ಉದ್ದೇಶಿಸಿದೆ.

25 ವಿವಿಧ ಸೋಲಾರ್ ಪಾರ್ಕ್‌ಗಳಲ್ಲಿ 20 ಸಾವಿರ ಮೆ. ವ್ಯಾಟ್ ವಿದ್ಯುತ್ ಉತ್ಪಾದಿಸುವುದು ಸರ್ಕಾರದ ಗುರಿಯಾಗಿದೆ. ಪ್ರತಿ ಪಾರ್ಕ್‌ನಲ್ಲಿ 500ರಿಂದ 1000 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುವುದು. ಸರ್ಕಾರ ಈಗಾಗಲೇ ಆರಂಭಿಸಿರುವ ಸೋಲಾರ್ ಪಾರ್ಕ್‌ಗಳಲ್ಲಿ ಪ್ರಸ್ತುತ ಮೂರು ಸಾವಿರ ಮೆ. ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದನ್ನು 2022ರ ಹೊತ್ತಿಗೆ ಒಂದು ಲಕ್ಷ ಮೆ.ವ್ಯಾಟ್‌ಗೆ ಹೆಚ್ಚಿಸಲು ಸರ್ಕಾರ ಯೋಜಿಸಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆಗಾಗಿ ಶೀಘ್ರ ಸಚಿವ ಸಂಪುಟಕ್ಕೆ ಕಳುಹಿಸಲಾಗುವುದೆಂದು ತರುಣ್ ಕಪೂರ್ ತಿಳಿಸಿದ್ದಾರೆ. [ಕರ್ನಾಟಕದಲ್ಲಿ 5 ಸೋಲಾರ್ ವಿದ್ಯುತ್ ಘಟಕ]

ರಾಜ್ಯ ಸರ್ಕಾರ ಸಹಯೋಗ: ಸೌರಶಕ್ತಿ ಪಾರ್ಕ್‌ಗಳನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ನಿರ್ಮಿಸಲಾಗುವುದು. ಭಾರತದ ಸೌರ ಶಕ್ತಿ ಸಂಸ್ಥೆಯು ಕೇಂದ್ರ ಸರ್ಕಾರದ ಪರವಾಗಿ ಯೋಜನೆಯ ಅನುಷ್ಠಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.

ಸೋಲಾರ್ ಪಾರ್ಕ್ ಒಂದು ಕೇಂದ್ರೀಕೃತ ವಲಯವಾಗಿದೆ. ಯೋಜನೆ ಆರಂಭ ಹಾಗೂ ವಿದ್ಯುತ್ ಸಾಗಿಸಲು ಸರ್ಕಾರವು ಭೂಮಿ ಹಾಗೂ ಮೂಲಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ.

ಕೇಂದ್ರ ಸರ್ಕಾರವು ಅತಿ ದೊಡ್ಡ ಸೌರಶಕ್ತಿ ಯೋಜನೆಗಳಿಗಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 1,000 ಕೋಟಿ ರೂ.ಗಳನ್ನು ತೆಗೆದಿರಿಸಿದೆ ಎಂದು ತರುಣ್ ಕಪೂರ್ ವಿವರಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Central government planned to build 25 mega solar parks in 12 states including Karnataka. The solar parks will be developed in collaboration with state governments. Solar Energy Corporation of India will be the implementation agency on behalf of the Center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more