ಕೇಂದ್ರದಿಂದ ಖಾಸಗೀಕರಣದ ಹೆಸರಿನಲ್ಲಿ ದೇಶದ ಆಸ್ತಿಗಳ ಮಾರಾಟ
ನವದೆಹಲಿ, ಆಗಸ್ಟ್ 24: ಭಾರತದಲ್ಲಿ ಕಳೆದ 70 ವರ್ಷಗಳಲ್ಲಿ ನಿರ್ಮಿಸಿದ ಎಲ್ಲ ಆಸ್ತಿಗಳನ್ನು ಮತ್ತು ಪ್ರಮುಖ ವಲಯಗಳನ್ನು ಹಣ ಸಂಪಾದನೆಗೆ ಬಳಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಕೇಂದ್ರದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಜೊತೆ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಭಾರತದಲ್ಲಿ 70 ವರ್ಷಗಳಿಂದ ಏನೂ ಆಗಿಲ್ಲ ಎಂದು ಬಿಜೆಪಿ ಹೇಳಿಕೊಳ್ಳುತ್ತದೆ. ಆದರೆ ಈಗ ಇಷ್ಟು ವರ್ಷಗಳಲ್ಲಿ ಸೃಷ್ಟಿಸಿದ ಎಲ್ಲಾ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಖಾಸಗೀಕರಣ ಯೋಜನೆಯು ಏಕಸ್ವಾಮ್ಯವನ್ನು ಸೃಷ್ಟಿಸುವ ಮತ್ತು ಉದ್ಯೋಗ ಪ್ರಮಾಣವನ್ನು ತಗ್ಗಿಸುವ ಗುರಿಯನ್ನು ಹೊಂದಿದೆ ಎಂದು ದೂಷಿಸಿದ್ದಾರೆ.
ಸೋಮವಾರವಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವಾಕಾಂಕ್ಷೆಯ ರೂ. 6 ಲಕ್ಷ ಕೋಟಿ ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ (NMP) ಅನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ರೈಲ್ವೆ ನಿಲ್ದಾಣಗಳು, ಪ್ರಯಾಣಿಕರ ರೈಲುಗಳು, ವಿಮಾನ ನಿಲ್ದಾಣಗಳು, ರಸ್ತೆಗಳು ಮತ್ತು ಕ್ರೀಡಾಂಗಣಗಳವರೆಗೆ ಮೂಲಸೌಕರ್ಯ ವಲಯಗಳಲ್ಲಿ ಖಾಸಗಿ ಕಂಪನಿಗಳನ್ನು ಒಳಗೊಂಡಿರುತ್ತದೆ. ಚೆನ್ನೈ, ಭೋಪಾಲ್, ವಾರಣಾಸಿ ಮತ್ತು ವಡೋದರಾ ಸೇರಿದಂತೆ 25 ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ವಿಮಾನ ನಿಲ್ದಾಣಗಳು ಹಾಗೂ 40 ರೈಲ್ವೆ ನಿಲ್ದಾಣಗಳು, 15 ರೈಲ್ವೆಗಳು, ಕ್ರೀಡಾಂಗಣಗಳು ಮತ್ತು ಗುರುತಿಸಲಾಗದ ಸಂಖ್ಯೆಯ ರೈಲ್ವೆ ಕಾಲೋನಿಗಳಲ್ಲಿ ಖಾಸಗಿ ಹೂಡಿಕೆ ಪಡೆಯಲು ಗುರುತಿಸಲಾಗಿದೆ.

ರಾಷ್ಟ್ರೀಯ ಮಾನಿಟೈಸೇಷನ್ ಪೈಪ್ ಲೈನ್ ಎಂದರೇನು?:
ಕೇಂದ್ರ ಬಜೆಟ್ 2021-22 ಸಾರ್ವಜನಿಕ ಮೂಲಸೌಕರ್ಯ ಸ್ವತ್ತುಗಳನ್ನು ನಿರ್ವಹಿಸುವ ನಗದೀಕರಣವನ್ನು ಸುಸ್ಥಿರ ಮೂಲಸೌಕರ್ಯ ಹಣಕಾಸು ಪ್ರಮುಖ ಸಾಧನವೆಂದು ಗುರುತಿಸಿದೆ. ಈ ನಿಟ್ಟಿನಲ್ಲಿ, ಬಜೆಟ್ ಸಂಭಾವ್ಯ ಬ್ರೌನ್ ಫೀಲ್ಡ್ ಮೂಲಸೌಕರ್ಯ ಸ್ವತ್ತುಗಳ 'ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ (ಎನ್.ಎಂ.ಪಿ) ' ತಯಾರಿಸಲು ಅವಕಾಶ ನೀಡಿತು. ನೀತಿ ಆಯೋಗವು ಮೂಲಸೌಕರ್ಯ ಸಂಬಂಧಿತ ಸಚಿವಾಲಯಗಳೊಂದಿಗೆ ಸಮಾಲೋಚಿಸಿ ಎನ್.ಎಂ.ಪಿ.ಕುರಿತ ವರದಿಯನ್ನು ಸಿದ್ಧಪಡಿಸಿದೆ.
ಖಾಸಗಿ ವಲಯಕ್ಕೆ ಸಂಭಾವ್ಯ ಸ್ವತ್ತುಗಳ ಮೇಲಿನ ನೋಟದೊಂದೆ, ಸಾರ್ವಜನಿಕ ಆಸ್ತಿ ಮಾಲೀಕರಿಗೆ ಕಾರ್ಯಕ್ರಮದ ಮಧ್ಯಮಾವಧಿ ಮಾರ್ಗಸೂಚಿಯನ್ನು ಒದಗಿಸುವ ಗುರಿಯನ್ನು ಎನ್.ಎಂ.ಪಿ.ಹೊಂದಿದೆ; ಎನ್.ಎಂ.ಪಿ.ಕುರಿತ ವರದಿಯನ್ನು ಎರಡು ಸಂಪುಟಗಳಾಗಿ ಸಂಯೋಜಿಸಲಾಗಿದೆ. ಸಂಪುಟ 1 ಅನ್ನು ಮಾರ್ಗದರ್ಶನ ಪುಸ್ತಕವಾಗಿ ರೂಪಿಸಲಾಗಿದೆ, ಇದು ಆಸ್ತಿ ನಗದೀಕರಣದ ಪರಿಕಲ್ಪನೆಯ ವಿಧಾನಗಳು ಮತ್ತು ಸಂಭಾವ್ಯ ಮಾದರಿಗಳನ್ನು ವಿವರಿಸುತ್ತದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಪ್ರಮುಖ ಮೂಲಸೌಕರ್ಯ ಸ್ವತ್ತುಗಳ ಪೈಪ್ ಲೈನ್ ಸೇರಿದಂತೆ ನಗದೀಕರಣದ ನಿಜವಾದ ಮಾರ್ಗಸೂಚಿಯೇ ಸಂಪುಟ 2 ಆಗಿದೆ.
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications