ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ ಕಳೆದುಕೊಂಡ ವಲಸೆ ಕಾರ್ಮಿಕರು, ಮೃತರ ಅಂಕಿಅಂಶಗಳಿಲ್ಲ: ಕೇಂದ್ರ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 14: ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡ ಹಾಗೂ ಪ್ರಾಣ ಕಳೆದುಕೊಂಡಿರುವ ವಲಸೆ ಕಾರ್ಮಿಕರ ಅಂಕಿಅಂಶಗಳು ನಮ್ಮ ಬಳಿ ಇಲ್ಲ ಎಂದು ಕೇಂದ್ರ ಸರ್ಕಾರವು ಸಂಸತ್‌ಗೆ ತಿಳಿಸಿದೆ.

ಸಂಸತ್ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದೆ, ವಲಸೆ ಕಾರ್ಮಿಕರ ಸಾವು ಹಾಗೂ ಉದ್ಯೋಗದ ಕುರಿತು ಕೇಳಿರುವ ಪ್ರಶ್ನೆಗೆ ಸರ್ಕಾರ ಉತ್ತರ ನೀಡಿದ್ದು, ಯಾವುದೇ ಅಂಕಿ ಅಂಶಗಳು ನಮ್ಮ ಬಳಿ ಇಲ್ಲ ಎಂದು ಹೇಳಿದೆ.

NEET: ಸಂಸತ್ ಆವರಣದಲ್ಲಿ ಡಿಎಂಕೆ ಸಂಸದರ ಪ್ರತಿಭಟನೆ NEET: ಸಂಸತ್ ಆವರಣದಲ್ಲಿ ಡಿಎಂಕೆ ಸಂಸದರ ಪ್ರತಿಭಟನೆ

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಲಿಖಿತ ಉತ್ತರದಲ್ಲಿ ಕಾರ್ಮಿಕರಿಗೆ ಉಚಿತ ಪಡಿತರ ವಿತರಣೆಯನ್ನು ರಾಜ್ಯವಾರು ಸರ್ಕಾರ ನಿರ್ವಹಿಸಿಲ್ಲ ಎಂದು ಮಾಹಿತಿ ನೀಡಿದೆ.

Central Government Says No Such Data On Deaths, Job Losses Among Migrant Workers

ಕೊರೊನಾವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಸಾವಿರಾರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆಯೇ ಎಂಬ ಪ್ರಶ್ನೆಗೆ, ಸರ್ಕಾರು ಅಂತಹ ಯಾವುದೇ ಅಂಕಿ-ಅಂಶಗಳು ಲಭ್ಯವಿಲ್ಲ ಎಂದು ಪ್ರತಿಕ್ರಿಯಿಸಿದೆ.

ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯಗಳನ್ನು ನಿರ್ಣಯಿಸಲು ಸರ್ಕಾರ ವಿಫಲವಾಗಿದೆಯೇ ಎಂದು ಕೇಳಿದಾಗ ಭಾರತವು ಒಂದು ದೇಶವಾಗಿ ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳು, ಕಲ್ಯಾಣ ಸಂಘಗಳು ಸೇರಿ ಕಾರ್ಮಿಕರ ಸಮಸ್ಯೆಗೆ ಸ್ಪಂಧಿಸಿವೆ.

ರಾಜ್ಯವಾರು ಪರಿತರ ನೀಡಿರುವ ಅಂಕಿ ಅಂಶಗಳು ಕೂಡ ಇಲ್ಲ ಎಂದು ಸರ್ಕಾರ ಹೇಳಿದೆ. 80 ಕೋಟಿ ಜನರಿಗೆ ಹೆಚ್ಚುವರಿಯಾಗಿ 5 ಕೆಜಿ ಗೋಧಿ ಅಥವಾ ಅಕ್ಕಿ, ಒಂದು ಕೆಜಿ ಬೇಳೆಯನ್ನು ನೀಡಲಾಗಿದೆ. ನವೆಂಬರ್‌ವರೆಗೆ ಉಚಿತವಾಗಿ ನೀಡಲಾಗುತ್ತದೆ.

Recommended Video

ಕೊನೆಗೂ ಮಂಡಿ ಊರಿದ Kangana Ranaut?? | Oneindia Kannada

ಸರ್ಕಾರವು ಒಂದು ದೇಶ ಒಂದೇ ಪಡಿತರ ಚೀಟಿಯನ್ನು ನೀಡಲು ಮುಂದಾಗಿದೆ. ಇಡೀ ದೇಶದಲ್ಲಿರುವ ಯಾವುದೇ ಪಡಿತರ ಅಂಗಡಿಗಳ ಮೂಲಕವೂ ಪಡಿತರ ಪಡೆಯಬಹುದು.

English summary
The Government of India on Monday told Parliament that there is no data available on the deaths and job losses among migrant workers due to the imposition of lockdown during coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X