• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುಲ್ವಾಮಾ ದಾಳಿ: ಸಿಸಿಟಿವಿ ಫೂಟೇಜ್ ನಲ್ಲಿ ಸ್ಫೋಟಕ್ಕೆ ಬಳಸಿದ ಕಾರು ಪತ್ತೆ

|

ನವದೆಹಲಿ, ಫೆಬ್ರವರಿ 25: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಬಳಸಿದ್ದು ಮಾರುತಿ ಸುಜುಕಿಯ ಕೆಂಪು ಬಣ್ಣದ ಈಕೋ ಕಾರ್ ಎಂಬುದು ದೃಢವಾಗಿದೆ.

ಪುಲ್ವಾಮಾ ದಾಳಿಗೆ ಬಳಸಿದ್ದು ಮಾರುತಿ ಸಂಸ್ಥೆ ನಿರ್ಮಿತ ವಾಹನ!

ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(NIA)ಕ್ಕೆ ಸಿಸಿಟಿವಿ ಕ್ಯಾಮರಾ ಫೂಟೇಜ್ ಲಭ್ಯವಾಗಿದ್ದು, ಸಿಆರ್ ಪಿಎಫ್ ವಾಹನಕ್ಕೆ ಡಿಕ್ಕಿಹೊಡೆಯುವ ಮೊದಲು ಆತ್ಮಾಹುತಿ ದಾಳಿಕೋರ ಇದ್ದ ಕಾರಿನ ವಿಡಿಯೋ ಈ ಫೂಟೇಜ್ ನಲ್ಲಿ ಲಭ್ಯವಾಗಿದೆ.

ಪುಲ್ವಾಮಾ ಉಗ್ರ ದಾಳಿ ಬಗ್ಗೆ ಇಂಚಿಂಚೂ ಮಾಹಿತಿ ಸಂಗ್ರಹಿಸಿದ ಎನ್ ಐಎ

ಮಾರುತಿ ಸುಜುಕಿಗೆ ಸೇರಿದ ಕೆಂಪುಬಣ್ಣದ ಈಕೋ ಕಾರ್ ನಲ್ಲಿ ಆತ್ಮಾಹುತಿ ದಾಳಿಕೋರ, ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ತಾನೇ ಕಾರನ್ನು ಡ್ರೈವ್ ಮಾಡಿಕೊಂಡು ಹೋಗಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

ಸ್ಫೋಟಕ್ಕೆ ಬಳಸಿದ ಈ ಕಾರು 2010-11ರ ಮಾಡೆಲ್ ನದ್ದಾಗಿದ್ದು, ಅದಕ್ಕೆ ಹೊಸದಾಗಿ ಫೈಂಟ್ ಮಾಡಿಸಲಾಗಿತ್ತು ಎನ್ನಲಾಗಿದೆ.

ಪ್ರತ್ಯಕ್ಷದರ್ಶಿಗಳೂ ಘಟನೆಯ ಬಗ್ಗೆ ಮಾಹಿತಿ ನೀಡಿ, ಕೆಂಪು ಬಣ್ಣದ ಈಕೋ ಕಾರ್ ನಲ್ಲಿ ಬಂದಿದ್ದ ವ್ಯಕ್ತಿ ಹಲವು ಬಾರಿ ಇದೇ ರಸ್ತೆಯಲ್ಲಿ ಕಾರಿನಲ್ಲಿ ಆಚೀಚೆ ಅಡ್ಡಾಡುತ್ತಿದ್ದ. ನಂತರ ರಸ್ತೆಯಲ್ಲಿ ಎಡ, ಬಲ ಎಂಬುದಿಲ್ಲದೆ ಚಿತ್ರ ವಿಚಿತ್ರವಾಗಿ ಕಾರು ಓಡಿಸುತ್ತ, ನಂತರ ಹೋಗಿ ಸಿಆರ್ ಪಿಎಫ್ ಯೋಧರಿದ್ದ ವಾಹನಕ್ಕೆ ಡಿಕ್ಕಿ ಹೂಡೆಸಿದ್ದ ಎಂದಿದ್ದರು.

English summary
The National Investigating Agency has recovered the CCTV footage of the red Eeco car which is likely to have been used for the Pulwama terror attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X