ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್‌ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಇಲ್ಲ

By Manjunatha
|
Google Oneindia Kannada News

Recommended Video

10ನೇ ತರಗತಿ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಮಾಡದೇ ಇರಲು ಸಿ ಬಿ ಎಸ್ ಸಿ ನಿರ್ಧಾರ | Oneindia Kannada

ಸಿಬಿಎಸ್‌ಇ 10ನೇ ತರಗತಿ ಗಣಿತ ವಿಷಯದ ಮರುಪರೀಕ್ಷೆಯನ್ನು ನಡೆಸದಿರಲು ಸಿಬಿಎಸ್‌ಇ ಮಂಡಳಿ ನಿರ್ಧರಿಸಿದೆ. ಈ ಬಗ್ಗೆ ಅಧಿಕೃತ ಹೇಳಿಕೆಯು ಇಂದು (ಏಪ್ರಿಲ್ 03) ಸಂಜೆ ಒಳಗೆ ಹೊರಬೀಳುವ ಸಾಧ್ಯತೆ ಇದೆ.

ಸಿಬಿಎಸ್‌ಇ 10ನೇ ತರಗತಿ ಗಣಿತ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಕಾರಣ ಮರು ಪರೀಕ್ಷೆ ಮಾಡುವುದಾಗಿ ತಿಳಿಸಿತ್ತು. ಆದರೆ ಪರೀಕ್ಷೆಯ ದಿನಾಂಕ ಪ್ರಕಟ ಮಾಡಿರಲಿಲ್ಲ. ಈಗ ಮರು ಪರೀಕ್ಷೆ ನಿರ್ಧಾರವನ್ನೇ ಮಂಡಳಿ ಕೈಬಿಡುವ ಸೂಚನೆ ಇದೆ. ಇದು ವಿದ್ಯಾರ್ಥಿಗಳ ಆತಂಕ ದೂರ ಮಾಡಿದೆ.

ಸಿಬಿಎಸ್‌ಇ 12ನೇ ತರಗತಿ ಮರು ಪರೀಕ್ಷೆ ದಿನಾಂಕ ಪ್ರಕಟಸಿಬಿಎಸ್‌ಇ 12ನೇ ತರಗತಿ ಮರು ಪರೀಕ್ಷೆ ದಿನಾಂಕ ಪ್ರಕಟ

ಸಿಬಿಎಸ್‌ಇ 10ನೇ ತರಗತಿ ಗಣಿತ ಪತ್ರಿಕೆಯು ದೆಹಲಿ ಮತ್ತು ಹರಿಯಾಣ ಪ್ರದೇಶದಲ್ಲಿ ಸೋರಿಕೆ ಆಗಿತ್ತು ಹಾಗಾಗಿ ಅವರೆಡು ಪ್ರದೇಶದಲ್ಲಿ ಮಾತ್ರವೇ ಪರೀಕ್ಷೆ ಮಾಡುತ್ತೇವೆ ಎಂದು ಶಿಕ್ಷಣ ಇಲಾಖೆ ಕಾರ್ಯದರ್ಶಿ ಹೇಳಿದ್ದರು. ಈಗ ಮರು ಪರೀಕ್ಷೆ ನಿರ್ಧಾರದಿಂದಲೇ ಹಿಂದೆ ಸರಿದಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಸಂಜೆ ಒಳಗೆ ಹೊರ ಬರುವ ನಿರೀಕ್ಷೆ ಇದೆ.

CBSE decided not to conduct re examination for 10th students

ಸಿಬಿಎಸ್‌ಇ 12ನೇ ತರಗತಿ ಅರ್ಥಶಾಸ್ತ್ರ ವಿಷಯದ ಮರು ಪರೀಕ್ಷೆ ಘೋಷಣೆಯಾದ ದಿನಾಂಕದಂದೇ ಅಂದರೆ ಏಪ್ರಿಲ್ 25ರಂದೇ ನಡೆಯಲಿದೆ.

ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆ: ವಿದ್ಯಾರ್ಥಿ, ಪೋಷಕರ ತೀವ್ರ ಪ್ರತಿಭಟನೆಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆ: ವಿದ್ಯಾರ್ಥಿ, ಪೋಷಕರ ತೀವ್ರ ಪ್ರತಿಭಟನೆ

ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಈಗಾಗಲೇ ಇಬ್ಬರು ಖಾಸಗಿ ಶಾಲೆ ಶಿಕ್ಷಕರು ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

English summary
CBSE decided not to conduct re examination for 10th mathematics subject. CBSE 10th mathematics paper reportedly leaked in Delhi and Haryana region. After students protest through out India CBSE decided not to conduct re exam for 10th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X