• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಬಿಐ ವಿವಾದ: ಮೋದಿ ಸರ್ಕಾರದ ವಿರುದ್ಧ ಖರ್ಗೆ ಕಾನೂನು ಸಮರ!

|
   ನರೇಂದ್ರ ಮೋದಿ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಮಲ್ಲಿಕಾರ್ಜುನ ಖರ್ಗೆ | Oneindia Kannada

   ನವದೆಹಲಿ, ನವೆಂಬರ್ 03: ಸಿಬಿಐ ನಿರ್ದೇಶಕ ಮತ್ತು ವಿಶೇಷ ನಿರ್ದೇಶಕರನ್ನು ಕಡ್ಡಾಯ ರಜೆಯ ಮೇಲೆ ಕಳಿಸಿದ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

   ದೀಪಾವಳಿ ವಿಶೇಷ ಪುರವಣಿ

   ಕೇಂದ್ರ ತನಿಖಾ ದಳ(ಸಿಬಿಐ)ದಲ್ಲಿ ಆಯಕಟ್ಟಿನ ಹುದ್ದೆ ಅಲಂಕರಿಸಿದ್ದ ಇಬ್ಬರು ಉನ್ನತಾಧಿಕಾರಿಗಳನ್ನು ಏಕಾಏಕಿ ರಜೆಯ ಮೇಲೆ ಕಳಿಸುವ ಮೂಲಕ ಸಿಬಿಐ ಕಾಯ್ದೆಯನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದೆ ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ದೂರಿದ್ದು, ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ.

   ತೆಲಂಗಾಣ ಮೂಲದ ನಾಗೇಶ್ವರ್ ಈಗ ಸಿಬಿಐ ಹಂಗಾಮಿ ನಿರ್ದೇಶಕ

   ಒಟ್ಟಿನಲ್ಲಿ ರಫೇಲ್ ಡೀಲ್ ನಂತರ ಸಿಬಿಐ ವಿವಾದವು ಆಡಳಿತಾರೂಡ ಎನ್ ಡಿಎ ಸರ್ಕಾರಕ್ಕೆ ಬಹುದೊಡ್ಡ ತಲೆನೋವಾಗಿರುವುದಂತೂ ಸತ್ಯ.

   ಸಿಬಿಐ ಕಾಯ್ದೆಯ ಉಲ್ಲಂಘನೆ

   ಸಿಬಿಐ ಕಾಯ್ದೆಯ ಉಲ್ಲಂಘನೆ

   ಸಿಬಿಐ ಕಾಯ್ದೆಯ ಪ್ರಕಾರ ಪ್ರಧಾನ ಮಂತ್ರಿ, ಲೋಕಸಭೆ ಪ್ರತಿಪಕ್ಷದ ನಾಯಕ ಮತ್ತು ಮುಖ್ಯನ್ಯಾಯಮೂರ್ತಿಗಳ ತ್ರಿಸದಸ್ಯ ಸಮೀತಿ ಮಾತ್ರವೇ ಸಿಬಿಐ ನಿರ್ದೇಶಕರನ್ನು ಕೆಲಸದಿಂದ ತೆಗೆಯಲು ಅಥವಾ ಕಡ್ಡಾಯ ರಜೆಯ ಮೇಲೆ ಕಳಿಸಲು ಸಾಧ್ಯ. ಆದರೆ ಯಾರ ಯಾರ ವಿಶ್ವಾಸವನ್ನೂ ತೆಗೆದುಕೊಳ್ಳದೆ ಕೇಮದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

   ರಾಕೇಶ್ ಅಸ್ಥಾನಾ ವಿರುದ್ಧ ದಾಖಲೆಗಳಿವೆ: ದೆಹಲಿ ಹೈಕೋರ್ಟ್‌ಗೆ ಸಿಬಿಐ

   ಕಡ್ಡಾಯ ರಜೆ ಏಕೆ?

   ಕಡ್ಡಾಯ ರಜೆ ಏಕೆ?

   ಸಿಬಿಐ ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಅಲೋಕ್ ವರ್ಮಾ ಅವರನ್ನು ಇತ್ತೀಚೆಗೆ ಕಡ್ಡಾಯ ರಜೆಯ ಮೇಲೆ ಕಳಿಸಲಾಗಿತ್ತು. ಜೊತೆಗೆ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಅವರ ವಿರುದ್ಧವೂ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನೂ ಕಡ್ಡಾಯ ರಜೆಯ ಮೇಲೆ ಕಳಿಸಲಾಗಿತ್ತು.

   ಸಿಬಿಐ ವಿವಾದ: ರಾಜಕಾರಣಿಗಳ ನಂಟು ಮತ್ತು ಲಂಚದ ವಿವರ ಬಾಯ್ಬಿಟ್ಟ ಉದ್ಯಮಿ

   ರಫೇಲ್ ಡಿಲ್ ಗೂ ಈ ವಿವಾದಕ್ಕೂ ಏನು ಸಂಬಂಧ?

   ರಫೇಲ್ ಡಿಲ್ ಗೂ ಈ ವಿವಾದಕ್ಕೂ ಏನು ಸಂಬಂಧ?

   ಫ್ರಾನ್ಸ್ ನೊಂದಿಗೆ ಯುದ್ಧ ವಿಮಾನ ಖರೀದಿಗಾಗಿ ಭಾರತ ಮಾಡಿಕೊಂಡಿರುವ ರಫೇಲ್ ಡೀಲ್ ನಲ್ಲಿ ಸಾವಿರಾರು ಕೋಟಿ ರೂ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಆರೋಪಿಸಿದ್ದವು. ಈ ಪ್ರಕರಣವನ್ನು ಕೂಲಂಕಷವಾಗಿ ವಿಚಾರಣೆ ನಡೆಸುವಂತೆ ಬಿಜೆಪಿ ಮಾಜಿ ನಾಯಕ ಯಶವಂತ್ ಅರುಣ್ ಶೌರಿ, ಯಶವಂತ್ ಸಿನ್ಹಾ ಮತ್ತು ವಕೀಲ ಪ್ರಶಾಂತ್ ಭೂಷಣ್ ಸಿಬಿಐ ಗೆ ಮನವಿ ಮಾಡಿದ್ದರು. ಈ ಘಟನೆಯ ನಂತರ 'ಕಡ್ಡಾಯ ರಜೆ'ಯ ಬೆಳವಣಿಗೆ ನಡೆದಿದ್ದರಿಂದ ರಫೇಲ್ ಡೀಲ್ ತನಿಖೆ ನಡೆಯಬಾರದೆಂಬ ಕಾರಣಕ್ಕೆ ಕೇಂದ್ರ ಸರ್ಕಾರ ಬೇಕೆಂದೇ ನಿರ್ದೇಶಕರನ್ನು ಕಡ್ಡಾಯ ರಜೆಯ ಮೇಲೆ ಕಳಿಸಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

   ನಾಗೇಶ್ವರ್ ರಾವ್ ನೇಮಕ

   ನಾಗೇಶ್ವರ್ ರಾವ್ ನೇಮಕ

   ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳಿಸಿದ ನಂತರ ಅವರ ಜಾಗಕ್ಕೆ ಸಿಬಿಐ ನ ಹಂಗಾಮಿ ನಿರ್ದೇಶಕರನ್ನಾಗಿ ಐಪಿಎಸ್ ಅಧಿಕಾರಿ ನಾಗೇಶ್ವರ್ ರಾವ್ ಅವರನ್ನು ನೇಮಕ ಮಾಡಲಾಗಿದೆ. ಆದರೆ ನಾಗೇಶ್ವರ್ ರಾವ್ ಅವರು ಸದ್ಯಕ್ಕೆ ಯಾವುದೇ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

   English summary
   Congress leader Mallikarjun Kharge Saturday moved the Supreme Court against the Centre's decision of sending CBI director Alok Verma on leave, saying it was "illegal" and was in violation of the CBI Act.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X