ಉತ್ತರಾಖಂಡ್ ಮಾಜಿ ಸಿಎಂ ಹರೀಶ್ ರಾವತ್ ವಿರುದ್ಧ ಸಿಬಿಐ ಪ್ರಕರಣ
ನವದೆಹಲಿ, ಅಕ್ಟೋಬರ್ 23: ಉತ್ತರಾಖಂಡ್ ನ ಮಾಜಿ ಮುಖ್ಯಮಂತ್ರಿ- ಕಾಂಗ್ರೆಸ್ ನಾಯಕ ಹರೀಶ್ ರಾವತ್ ವಿರುದ್ಧ 'ಕುದುರೆ ವ್ಯಾಪಾರ'ದಲ್ಲಿ ತೊಡಗಲು ಪ್ರಯತ್ನಿಸಿದ ಆರೋಪದ ಮೇಲೆ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮೂರು ವರ್ಷದ ಹಿಂದೆ ಉತ್ತರಾಖಂಡ್ ನಲ್ಲಿ ರಾಷ್ಟ್ರಪತಿ ಆಳ್ವಿಕೆ ಇದ್ದಾಗ ದಾಖಲಾಗಿರುವ ವಿಡಿಯೋದ ಸಿಬಿಐ ತನಿಖೆಯ ಫಲಿತಾಂಶವಾಗಿ ಈ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ನಿಂದ ಬಿಜೆಪಿಗೆ ನಿಷ್ಠೆ ಬದಲಿಸಿದ ಶಾಸಕರನ್ನು ಮತ್ತೆ ಸೆಳೆಯಲು, ಬೆಂಬಲ ವಾಪಸ್ ಪಡೆದು ಅಧಿಕಾರಕ್ಕೆ ಏರಲು ಹಣ ಖರ್ಚು ಮಾಡುವ ಬಗ್ಗೆ ಚರ್ಚೆ ನಡೆಸಿರುವುದು ವಿಡಿಯೋದಲ್ಲಿ ದಾಖಲಾಗಿತ್ತು.

ಉತ್ತರಾಖಂಡ್ ನ ಹೈಕೋರ್ಟ್ ಈಚೆಗಷ್ಟೇ ತನಿಖೆ ನಡೆಸುವುದಕ್ಕೆ ಸಿಬಿಐಗೆ ಒಪ್ಪಿಗೆ ಸೂಚಿಸಿತ್ತು. ಅಷ್ಟೇ ಅಲ್ಲ, ಹರೀಶ್ ರಾವತ್ ವಿರುದ್ಧ ಎಫ್ ಐಆರ್ ದಾಖಲಿಸಲು ಅನುಮತಿ ನೀಡಿತ್ತು. ಅದಕ್ಕೂ ಮುನ್ನ ಪ್ರಾಥಮಿಕ ವಿಚಾರಣೆ ನಂತರ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ಸಿಬಿಐನಿಂದ ವರದಿ ಸಲ್ಲಿಸಲಾಗಿತ್ತು.












Click it and Unblock the Notifications