ಕರ್ನಾಟಕದಲ್ಲಿ ಜೂಜು ಕೇಂದ್ರ, ಸೀಕ್ರೆಟ್ ತೆರೆದಿಟ್ಟ ಸಚಿವ ಸಿ.ಟಿ.ರವಿ

ನವದೆಹಲಿ, ಫೆಬ್ರವರಿ.23: ಕರ್ನಾಟಕದಲ್ಲಿ ಜೂಜು ಕೇಂದ್ರ (ಕ್ಯಾಸಿನೋ) ಆರಂಭಿಸಲು ಸರ್ಕಾರವೇ ಚಿಂತನೆ ನಡೆಸಿರುವ ಬಗ್ಗೆ ಚರ್ಚೆ ಶುರುವಾಗಿದೆ. ರಾಜ್ಯದಲ್ಲಿ ಕ್ಯಾಸಿನೋ ಆರಂಭಿಸಲು ಕಾರಣ ಏನು ಎಂಬುದನ್ನು ರಾಜ್ಯ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದೆ ಎಂದರು. ಇಲ್ಲಿನ ಕಲೆ, ಸಂಸ್ಕೃತಿಯು ವಿದೇಶಿಗರನ್ನು ಆಕರ್ಷಿಸುತ್ತಿದೆ. ಆದರೆ, ರಾಜ್ಯದ ಜನರೇ ನೆರೆರಾಜ್ಯ ಮತ್ತು ವಿದೇಶಗಳಿಗೆ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವುದೇ ಅಲ್ಲಿರುವ ಕ್ಯಾಸಿನೋ ಕೇಂದ್ರಗಳು ಎಂದು ಸಿ.ಟಿ.ರವಿ ಹೇಳಿದ್ದಾರೆ.

ಜೂಜು ಪ್ರಿಯರಿಗೆ ಬಿಜೆಪಿ ಸರ್ಕಾರ ಕೊಡುತ್ತಿರುವ ಕೊಡುಗೆಯಾದರೂ ಏನು?
ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕ್ಯಾಸಿನೋ ಕೇಂದ್ರಗಳು ಬಲುಮುಖ್ಯ ಪಾತ್ರವನ್ನು ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಅಂತಹ ಕ್ಯಾಸಿನೋ ಕೇಂದ್ರಗಳನ್ನು ಆರಂಭಿಸಿದರೆ, ರಾಜ್ಯದಲ್ಲಿರುವ ಹಣವು ಬೇರೆ ರಾಜ್ಯ ಮತ್ತು ರಾಷ್ಟ್ರಕ್ಕೆ ಹರಿದು ಹೋಗುವುದನ್ನು ತಪ್ಪಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.

Casinos In Karnataka: Tourism And Culture Minister C.T.Ravi Clarification

ಕ್ಯಾಸಿನೋಗಾಗಿ ವಿದೇಶಕ್ಕೆ ಹೋಗುತ್ತಾರಾ ಭಾರತೀಯರು?:
ಬಹುತೇಕ ಭಾರತೀಯರು ಕ್ಯಾಸಿನೋ ಆಟಕ್ಕಾಗಿ ಸಿಂಗಾಪುರ್ ನಂತಾ ದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಇನ್ನು, ಕರ್ನಾಟಕದ ಲಕ್ಷ ಲಕ್ಷ ಜನರು ಇದೇ ಕ್ಯಾಸಿನೋ ಆಟಕ್ಕಾಗಿ ಗೋವಾಗೆ ಪ್ರವಾಸ ಕೈಗೊಳ್ಳುತ್ತಾರೆ. ಹೀಗೆ ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರವನ್ನು ರಾಜ್ಯದಲ್ಲಿ ಆರಂಭಿಸಿದರೆ, ಪ್ರವಾಸೋದ್ಯಮದ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಜ್ಯದಲ್ಲಿ ಆರ್ಥಿಕ ವಹಿವಾಟು ಹೆಚ್ಚಾಗುತ್ತದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+