ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂದೇ ಭಾರತ್ ಟ್ರೈನ್ಸ್‌ ಯೋಜನೆಯಿಂದ ಚೀನಾ ಕಂಪನಿಗಳನ್ನು ದೂರವಿಡಿ:CAIT

|
Google Oneindia Kannada News

ನವದೆಹಲಿ, ಜುಲೈ 11: ದೇಶಿಯ ರೈಲು ವಂದೇ ಭಾರತ್ ಎಂದೇ ಖ್ಯಾತಿ ಪಡೆದಿರುವ ಟ್ರೈನ್ 18 ಯೋಜನೆಯಿಂದ ಚೀನಾ ಕಂಪನಿಗಳನ್ನು ದೂರವಿಡಿ ಎಂದು ಕಾನ್ಪಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಆಗ್ರಹಿಸಿದೆ.

Recommended Video

Jaggesh regrets helping Drone Prathap | Oneindia Kannada

ಚೀನಾದ ಜಂಟಿ ಉದ್ಯಮ ಕಂಪನಿ ಸಿಆರ್‌ಆರ್‌ಸಿ ಪಯೋನೀರ್ ಎಲೆಕ್ಟ್ರಿಕ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಈ ಯೋಜನೆಗೆ ಆರು ಬಿಡ್‌ದಾರಲ್ಲಿ ಒಬ್ಬರಾಗಿದ್ದು, ಚೀನಾ ಕಂಪನಿಗಳಿಗೆ ಟೆಂಡರ್‌ನಲ್ಲಿ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ವ್ಯಾಪಾರಿಗಳ ಸಂಘ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಶನಿವಾರ ಪತ್ರ ಬರೆದಿದೆ.

CAIT Urges Centre To Scrap Chinese JV Bid For Vande Bharat Trains

ಗಡಿ ಭಾಗದಲ್ಲಿ ಉಂಟಾದ ಸಂಘರ್ಷದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಚೀನಾ ಉತ್ಪನ್ನಗಳು ಸೇವೆಗಳನ್ನು ಬಹಿಷ್ಕರಿಸಲು ಕರೆ ನೀಡಲಾಗಿದೆ. ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿರುವ ಸಿಎಐಟಿ ಟ್ರೈನ್ 18 ಯೋಜನೆಗೆ ಕರೆದಿರುವ ಟೆಂಡರ್ ನಿಂದ ಚೀನಾದ ಸಿಆರ್ ಆರ್ ಸಿ ಕಾರ್ಪೊರೇಷನ್ ನ್ನು ದೂರವಿಡಬೇಕೆಂದು ಮನವಿ ಮಾಡಿದೆ.

ಚೀನಾದೊಂದಿಗೆ ಸಂಘರ್ಷ ಏರ್ಪಟ್ಟರೆ, ಭಾರತದ ಪರ ಅಮೆರಿಕಾ ಸೇನೆ ಇರಲಿದೆ: ವೈಟ್ ಹೌಸ್ಚೀನಾದೊಂದಿಗೆ ಸಂಘರ್ಷ ಏರ್ಪಟ್ಟರೆ, ಭಾರತದ ಪರ ಅಮೆರಿಕಾ ಸೇನೆ ಇರಲಿದೆ: ವೈಟ್ ಹೌಸ್

ಟ್ರೈನ್ 18 ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಯಡಿ ಮಾಡಲಾಗುತ್ತಿದೆ. ಆದ್ದರಿಂದ ಈಗಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚೀನಾ ಕಂಪನಿಗಳಿಗೆ ಅವಕಾಶ ನೀಡಬಾರದು ಎಂದು ಪತ್ರದ ಮನವಿ ಮಾಡಲಾಗಿದೆ.

English summary
Apex traders’ body Confederation of All India Traders (CAIT) has objected to the bid placed by a Chinese joint venture company for a global tender by the railways for manufacturing Vande Bharat trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X