KEA: ಡಿಪ್ಲೊಮಾ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: ಅರ್ಜಿ ತಿದ್ದುಪಡಿಗೆ ಮೇ.20ರವರೆಗೆ ಅವಕಾಶ

ಲ್ಯಾಟರಲ್ ಎಂಟ್ರಿ‌ ಮೂಲಕ ಎಂಜಿನಿಯರಿಂಗ್ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್ ಗೆ ಪ್ರವೇಶ ಪಡೆಯಲು ಡಿಸಿಇಟಿಗೆ (DCET 2026) ಅರ್ಜಿ ಸಲ್ಲಿಸಿರುವ ಡಿಪ್ಲೊಮಾ ಅಭ್ಯರ್ಥಿಗಳು, ಮೀಸಲಾತಿ ಸೇರಿದಂತೆ ಸಣ್ಣ ಪುಟ್ಟ ತಪ್ಪುಗಳ ತಿದ್ದುಪಡಿಗೆ ಮೇ 20ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅವಕಾಶ ಕಲ್ಪಿಸಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ತಿಳಿಸಿದ್ದಾರೆ.

ಮೇಲ್ಕಾಣಿಸಿದ ಅಭ್ಯರ್ಥಿಗಳು ಮೇ 5ರಿಂದ‌ 20ರವರೆಗೆ ಲಾಗಿನ್ ಆಗಿ ತಮ್ಮ ಅರ್ಜಿಯಲ್ಲಿ ಏನಾದರು ಬದಲಾವಣೆ ಅಗತ್ಯ ಇದ್ದರೆ ಮಾಡಿಕೊಳ್ಳಬಹುದು. ರಕ್ಷಣೆ, ಮಾಜಿ ಸೈನಿಕ, ಸಿಆರ್ ಪಿಎಫ್ ಸೇರಿದಂತೆ ಇತರ ವಿಶೇಷ ಕ್ಯಾಟರಿಗಳಲ್ಲಿ ಅರ್ಹತೆ ಇದ್ದು ಕ್ಲೇಮ್ ಮಾಡಿರುವ ಬಗ್ಗೆ ಅಭ್ಯರ್ಥಿಗಳು ಖಚಿತಪಡಿಸಿಕೊಳ್ಳಬಹುದು. ಕ್ಲೇಮ್ ಮಾಡಿದ್ದಲ್ಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಬಹುದು. ಮೀಸಲಾತಿ ಸಂಬಂಧದ ಆರ್ ಡಿ ಸಂಖ್ಯೆ ನಮೂದಿಸುವುದನ್ನು ಕೂಡ ಖಚಿತಪಡಿಸಿಕೊಳ್ಳಬೇಕೆಂದು ತಿಳಿಸಲಾಗಿದೆ.

KEA opens correction window for DCET 2026 applicants to update reservation claims RD numbers and upload required certificates

ಒಳಮೀಸಲಾತಿ ಆರ್ ಡಿ ಸಂಖ್ಯೆ ನಮೂದಿಸಿ

ಇನ್ನೂ ಪರಿಶಿಷ್ಟ ಜಾತಿಗೆ ಸೇರಿ ಅಭ್ಯರ್ಥಿಗಳಿದ್ದರೆ ಅವರು ಆರ್ ಡಿ ಸಂಖ್ಯೆ ಇರುವ ಪ್ರವರ್ಗ-ಎ, ಪ್ರವರ್ಗ- ಬಿ ಮತ್ತು ಪ್ರವರ್ಗ-ಸಿ ಎಂದು ಮುದ್ರಿತವಾಗಿರುವ ಪ್ರಮಾಣ ಪತ್ರಗಳನ್ನು ಸಂಬಂಧಿಸಿದ ತಹಶೀಲ್ದಾರ್ ಅವರಿಂದ ಪಡೆಯಬೇಕು. ಅದರ ಆರ್ ಡಿ ಸಂಖ್ಯೆಯನ್ನು ದಾಖಲಿಸುವುದಕ್ಕೂ ಅವಕಾಶ ನೀಡಲಾಗಿದೆ. ಇಂತಹ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪೋರ್ಟಲ್ ಅನ್ನು ಮೇ 22ರವರೆಗೂ ತೆರೆಯಲಾಗುತ್ತದೆ ಎಂದರು.

Rain Issues: ಗೋಡೆ ದುರಂತದಿಂದ ಎಚ್ಚೆತ್ತ ಪಾಲಿಕೆ: ನಾಗರಿಕರ ಸುರಕ್ಷತೆಗಾಗಿ ತುರ್ತು ಕಾರ್ಯಾಚರಣೆ
Rain Issues: ಗೋಡೆ ದುರಂತದಿಂದ ಎಚ್ಚೆತ್ತ ಪಾಲಿಕೆ: ನಾಗರಿಕರ ಸುರಕ್ಷತೆಗಾಗಿ ತುರ್ತು ಕಾರ್ಯಾಚರಣೆ

ಕೆಲವರು ಒಳ ಮೀಸಲಾತಿ ಪ್ರಕಾರ ಪ್ರಮಾಣ ಪತ್ರ ಸಲ್ಲಿಸದೆ, ಹಳೇ ಆರ್ ಡಿ ಸಂಖ್ಯೆಯನ್ನೇ ಅರ್ಜಿಯಲ್ಲಿ ದಾಖಲಿಸುತ್ತಿದ್ದು ಅಂತಹವರು ತಿದ್ದುಪಡಿ ಮೂಲಕ ಹೊಸದಾಗಿ ಆರ್ ಡಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ತಿಳಿಸಿದ್ದಾರೆ.

UGCET 2026: ಇಂದಿನಿಂದ ದಾಖಲೆ ಪರಿಶೀಲನೆ

ಯುಜಿಸಿಇಟಿ ಪರೀಕ್ಷೆ ಬರೆದ ಅಭ್ಯರ್ಥಿಗಳಲ್ಲಿ ಯಾರೆಲ್ಲ ವಿಶೇಷ ಕ್ಯಾಟಗರಿಗಳಡಿ ಸೀಟು ಪಡೆಯಲು ತಮ್ಮ ಅರ್ಜಿಯಲ್ಲಿ ಕ್ಲೇಮ್‌ ಮಾಡಿದ್ದಾರೋ ಅವರ ದಾಖಲೆ ಪರಿಶೀಲನೆ ಇಂದಿನಿಂದ ನಡೆಯಲಿದೆ. ದಾಖಲೆ ಪರಿಶೀಲನೆ/ ಸ್ವೀಕರಿಸುವ ಪ್ರಕ್ರಿಯೆ ಇಂದಿನಿಂದ ಕೆಇಎ ಕಚೇರಿಯಲ್ಲಿ ಆರಂಭವಾಗಿದೆ. ಮೇ‌ 7ರವರೆಗೆ ಕ್ರೀಡಾ ಕೋಟಾ ಕ್ಲೇಮ್ ಮಾಡಿರುವವರ ದಾಖಲೆ ಪರಿಶೀಲನೆ ಮತ್ತು ಸ್ವೀಕರಿಸುವ ಪ್ರಕ್ರಿಯೆ ಆರಂಭವಾಗುತ್ತದೆ ಎಂದರು.

ಅಭ್ಯರ್ಥಿಗಳು ಕಚೇರಿಗೆ ಇಂದು ಬೆಳಗ್ಗೆಯೇ ಕಚೇರಿಗೆ ಆಗಮಿಸಿದ್ದರು. ಕ್ರೀಡಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ದಾಖಲೆಗಳನ್ನು ಪರಿಶೀಲಿಸಿ, ಅರ್ಹ ಕ್ರೀಡಾಪಟುಗಳ ದಾಖಲೆಗಳನ್ನು ಸ್ವೀಕರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+