ಪ್ರಾಮಾಣಿಕತೆ ಕೊಡವರ ಡಿಎನ್‌ಎದಲ್ಲೇ ಇದೆ: ಬಸವರಾಜ ಬೊಮ್ಮಾಯಿ ಹೀಗಂದಿದ್ದೇಕೆ?

ಮಡಿಕೇರಿ: ನಮಗೆ ಶಾಸಕ, ಸಚಿವ ಸ್ಥಾನ, ಮುಖ್ಯಮಂತ್ರಿ ಸ್ಥಾನವನ್ನು ಕೊಟ್ಟವರು ನೀವು. ಆ ಸ್ಥಾನದಲ್ಲಿ ಕೂಡಿಸಿದವರು ನೀವು. ನಿಮ್ಮದನ್ನು ನಿಮಗೆ ಕೊಟ್ಟು ಪುಣ್ಯವನ್ನು ಪಡೆಯುತ್ತಿರುವವರು ನಾವು. ಅದಕ್ಕಾಗಿ ನಿಮಗೆ ಕೃತಜ್ಞತೆ ಹೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಕೊಡಗಿನ ಮಾದಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಸಮಯದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗಿನ ಜನರು ವೀರರು, ಧೀರರು, ಶೂರರು ಸಮರ್ಥರು ಅಷ್ಟೇ ಅಲ್ಲದೇ ಪ್ರಾಮಾಣಿಕರು. ಕೊಡವರ ಡಿಎನ್‌ಎಯಲ್ಲಿಯೇ ಪ್ರಾಮಾಣಿಕತೆ ಇದೆ. ನಿಮ್ಮ ಸಂಸ್ಕಾರ ಮತ್ತು ಸಂಸ್ಕೃತಿ ಜಗತ್ತು ಮೆಚ್ಚುವಂತಹದು ಎಂದು ಶ್ಲಾಘಿಸಿದರು.

Praises Kodava Community

ರಾಜಕೀಯದಲ್ಲಿ ನನಗೆ ಹಲವು ಸ್ಥಾನ ನೀಡಿದವರು ನೀವು. ನಿಮಗೆ ಕೃತಜ್ಞತೆ ಹೇಳಬೇಕು. ಎರಡನೆಯದಾಗಿ ಯಾರಾದರೂ ಸಹಾಯ ಮಾಡಿದರೆ ಸ್ಮರಣೆ ಮಾಡುವುದು ಮನುಷ್ಯನ ಅತ್ಯಂತ ಶ್ರೇಷ್ಠ ಗುಣ. ಸಣ್ಣ ಕೆಲಸ ಮಾಡಿದರೂ ಕೂಡ ನೀವು ಬಹಳ ದೊಡ್ಡದಾಗಿ ಸ್ಮರಣೆ ಮಾಡಿದ್ದೀರಿ. ನಾವು ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡಿರುತ್ತೇವೆ. ಎಲ್ಲವನ್ನು ನೆನಪಿಟ್ಟು ಸ್ಮರಣೆ ಮಾಡಿದ್ದಕ್ಕೆ ದೊಡ್ಡವರಾಗಿದ್ದೀರಿ ಎಂದರು.

Airport: ಬೆಂಗಳೂರು ವಿಮಾನ ನಿಲ್ದಾಣ ಮತ್ತಷ್ಟು ಸ್ಮಾರ್ಟ್‌, AI ಸುರಕ್ಷತೆ ವ್ಯವಸ್ಥೆ ಜಾರಿ; ಪ್ರಯೋಜನವೇನು?
Airport: ಬೆಂಗಳೂರು ವಿಮಾನ ನಿಲ್ದಾಣ ಮತ್ತಷ್ಟು ಸ್ಮಾರ್ಟ್‌, AI ಸುರಕ್ಷತೆ ವ್ಯವಸ್ಥೆ ಜಾರಿ; ಪ್ರಯೋಜನವೇನು?

ನೇರ ನುಡಿ, ಪ್ರಾಮಾಣಿಕತೆ ಕೊಡವರಲ್ಲಿದೆ

ಕೊಡಗಿನ ಜನರು ವೀರರು, ಧೀರರು ಶೂರರು ಸಮರ್ಥರು ಜೊತೆಗೆ ಪ್ರಾಮಾಣಿಕರು ಜಗತ್ತಿನಲ್ಲಿ ಏನಾದರೂ ಅತ್ಯಂತ ಕಡಿಮೆ ಇರುವುದು ಪ್ರಾಮಾಣಿಕತೆ. ನಿಮ್ಮ ಡಿಎನ್‌ಎಯಲ್ಲಿಯೇ ಪ್ರಾಮಾಣಿಕತೆ ಇದೆ. ಇದ್ದದ್ದನ್ನು ಇದ್ದ ಹಾಗೆ ಹೇಳುತ್ತೀರಿ, ನೇರ ನುಡಿ ಪ್ರಾಮಾಣಿಕತೆ ಕೊಡವರಲ್ಲಿ ಇದೆ. ನಿಮ್ಮ ಸಂಸ್ಕಾರ ಮತ್ತು ಸಂಸ್ಕೃತಿ ಜಗತ್ತು ಮೆಚ್ಚುವಂತಹದು. ನಾಗರಿಕತೆ ಮತ್ತು ಸಂಸ್ಕೃತಿ ನಡುವಿನ ವ್ಯತ್ಯಾಸ ಬಹಳ ಜನರಿಗೆ ಗೊತ್ತಿಲ್ಲ. ನಾವು ಏನು ಹೊಂದಿದ್ದೇವೆ ಅದು ನಾಗರಿಕತೆ. ಇಂದು ಇದು ನಾಗರಿಕತೆಯ ಬೆಳವಣಿಗೆ ಆಗಿದೆ ಎಂದು ತಿಳಿಸಿದರು.

ಕೊಡವ ಸಂಸ್ಕೃತಿ ಸಮುದಾಯದೊಂದಿಗೆ ಬೆರೆತಿದೆ

ಬೆಳವಣಿಗೆಯಾದ ನಾಗರಿಕತೆ ಜೊತೆಗೆ ನಾವೇನಾಗಿದ್ದೇವೆ ಎನ್ನುವುದು ನಮ್ಮ ಸಂಸ್ಕೃತಿ. ಆದರೆ, ಕೊಡಗಿನಲ್ಲಿ ನಿಮ್ಮ ಸಂಸ್ಕೃತಿ ಬಹಳ ದೊಡ್ಡದಾಗಿದೆ. ಇದು ಒಂದು ಸಮುದಾಯದ ಜೊತೆಗೆ ಬೆರೆತಿದೆ. ಇದು ದೇಶದ ಸಂಸ್ಕೃತಿಯಾದರೆ ಆ ದೇಶದ ಹೆಸರು ವಿಶ್ವ ವ್ಯಾಪ್ತಿಯಾಗುತ್ತದೆ. ಅದಕ್ಕೆ ಪಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿ ಮತ್ತು ಪರಂಪರೆ ಎರಡನ್ನೂ ಬೆಳೆಸಬೇಕು ಎಂದು ಹೇಳುತ್ತಾರೆ.

ಇವತ್ತು ಪರಂಪರೆಯನ್ನು ಉಳಿಸುವುದು ಬಹಳ ಕಷ್ಟ ಆ ಪರಂಪರೆ ಉಳಿಸಿಕೊಂಡು ಹೋಗುವ ಕೆಲಸವನ್ನು ನಿಮ್ಮ ಹಿರಿಯರು, ಯುವಕರು ಮಾಡಿಕೊಂಡು ಹೋಗುತ್ತಿದ್ದೀರಿ ಹೀಗಾಗಿ ನಿಮ್ಮ ಪರಂಪರೆ ಬಗ್ಗೆ ಅಭಿಮಾನ, ಗೌರವ ಇದೆ. ಅದಕ್ಕೆ ಘನತೆ ತಂದು ಕೊಟ್ಟು ನೀವು ಬಹಳ ದೊಡ್ಡ ಸೇವೆ ಮಾಡಿದ್ದೀರಿ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಇನ್ನೂ ಕೊಡವ ಸಮುದಾಯ ಭವನವು ಆ ಸಮುದಾಯ ಸಭೆ, ಸಮಾರಂಭ, ಕಾರ್ಯಕ್ರಮಗಳು ನಡೆಸುವುದು ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ನೆರವಾಗುವಂತೆ ನಿರ್ಮಿಸಲಾಗಿದೆ. ಅದರ ಉದ್ಘಾಟನೆ ಇಂದು ವಿವಿಧ ಗಣ್ಯರ ಸಮ್ಮುಖದಲ್ಲಿ ನಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+