ರಾಮ್ ದೇವ್ ಫುಟ್ಬಾಲ್ ಕಿಕ್, ರಾಜಕಾರಣಿಗಳಿಗೆ ಸೋಲು

Posted By:
Subscribe to Oneindia Kannada

ನವದೆಹಲಿ, ಜುಲೈ 26: ಎನ್ ಡಿಎ ಸರ್ಕಾರದ ವಿವಿಧ ಜನಪರ ಯೋಜನೆಗಳ ಪ್ರಚಾರ ಹಾಗೂ ದೇಣಿಗೆ ಸಂಗ್ರಹಕ್ಕಾಗಿ ನಡೆದ ಪ್ರದರ್ಶನ ಫುಟ್ಬಾಲ್ ಪಂದ್ಯಕ್ಕೆ ಯೋಗ ಗುರು ಬಾಬಾ ರಾಮ್ ದೇವ್ ಚಾಲನೆ ನೀಡಿದರು. ಬಾಲಿವುಡ್ Vs ರಾಜಕಾರಣಿಗಳ ನಡುವೆ ನಡೆದ ಪಂದ್ಯದಲ್ಲಿ ರಾಮದೇವ್ ಕೂಡಾ ಕಾಷಾಯ ವಸ್ತ್ರ ಧರಿಸಿ ಕಿಕ್ ಹೊಡೆದರು. ಆದರೆ, ಗೋಲು ಹೊಡೆಯಲಿಲ್ಲ.

ಯೋಗ ಮೂಲಕ ಎಲ್ಲರ ಗಮನ ಸೆಳೆದಿರುವ ಬಾಬಾ ರಾಮದೇವ್ ಅವರು ತಮ್ಮ ಕಾಲ್ಚಳಕ ಮೂಲಕ ನೆಹರೂ ಮೈದಾನದಲ್ಲಿ ಅಭಿಮಾನಿಗಳನ್ನು ರಂಜಿಸಿದರು. [ಮೋದಿ ಕನಸುಗಳು: ಸ್ವಚ್ಛಭಾರತದಿಂದ ಡಿಜಿಟಲ್ ಇಂಡಿಯಾ ತನಕ]

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಾದ 'ಬೇಟಿ ಬಚಾವೊ ಬೇಟಿ ಪಡಾವೊ' ಹಾಗೂ 'ಸ್ವಚ್ಛ ಭಾರತ' ಯೋಜನೆಗಳಿಗೆ ಹಣ ಸಂಗ್ರಹಣೆಗಾಗಿ ಜವಾಹರಲಾಲ್ ನೆಹರು ಕ್ರಿಡಾಂಗಣದಲ್ಲಿ ಸಂಸದರ ತಂಡದ ವಿರುದ್ಧ ಬಾಲಿವುಡ್ ಸೆಲೆಬ್ರಿಟಿ ತಂಡ ನಡುವೆ ಫುಟ್​ಬಾಲ್ ಪಂದ್ಯ ನಡೆಸಲಾಯಿತು.

ಪ್ರಿಯಾಂಕಾ ಕೋಥಾರಿ ಆಯೋಜನೆ

ಪ್ರಿಯಾಂಕಾ ಕೋಥಾರಿ ಆಯೋಜನೆ

ಖಾವಿ ಉಡುಪಿನಲ್ಲೇ ಬಾಬಾ ರಾಮ್ ದೇವ್ ಅವರು ಆಟಗಾರರೊಂದಿಗೆ ಫುಟ್ಬಾಲ್ ಆಡುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಗೋಲ್ ಭಾರಿಸಲು ಪ್ರಯತ್ನಿಸಿ ವಿಫಲನಾದೆ

ಗೋಲ್ ಭಾರಿಸಲು ಪ್ರಯತ್ನಿಸಿ ವಿಫಲನಾದೆ

ನಾನು ರಾಜಕಾರಣಿಗಳು ಮತ್ತು ನಟರಿಬ್ಬರನ್ನೂ ಪ್ರೋತ್ಸಾಹಿಸುವೆ. ಐದು ಬಾರಿ ಗೋಲ್ ಭಾರಿಸಲು ಪ್ರಯತ್ನಿಸಿ ವಿಫಲನಾದೆ ಎಂದು ಖುಷಿಯಿಂದ ಬಾಬಾ ರಾಮದೇವ್ ಅವರು ಪಂದ್ಯ ನಂತರ ಹೇಳಿದರು.

ಬಾಲಿವುಡ್ ತಂಡವನ್ನು ಅಭಿಷೇಕ್ ಬಚ್ಚನ್ ಮುನ್ನಡೆಸಿದರು

ಬಾಲಿವುಡ್ ತಂಡವನ್ನು ಅಭಿಷೇಕ್ ಬಚ್ಚನ್ ಮುನ್ನಡೆಸಿದರು

ಬಾಲಿವುಡ್ ತಂಡವನ್ನು ಅಭಿಷೇಕ್ ಬಚ್ಚನ್ ಮುನ್ನಡೆಸಿದರು. ಬಾಲಿವುಡ್ ತಂಡ 10-0 ಅಂತರದಲ್ಲಿ ಜಯಗಳಿಸಿತು.

ಬಾಬುಲ್ ಸುಪ್ರಿಯೊ ಸಂಸದರ ತಂಡದ ನಾಯಕ

ಬಾಬುಲ್ ಸುಪ್ರಿಯೊ ಸಂಸದರ ತಂಡದ ನಾಯಕ

ಬೃಹತ್ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವ ಬಾಬುಲ್ ಸುಪ್ರಿಯೊ ಸಂಸದರ ತಂಡದ ನಾಯಕರಾಗಿದ್ದರು. ರಾಜಕಾರಣಿಗಳ ತಂಡದಲ್ಲಿ ನಟ ರಾಜಕಾರಣಿ ಮನೋಜ್ ತಿವಾರಿ ಇದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bollywood vs Politicians in Charity Football Baba Ramdev inaugurated a friendly football match held in Nehru Stadium Delhi and played a few shots but failed to score a goal. Team Bollywood lifting the cup with a score of 10-0.
Please Wait while comments are loading...