ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ಸಭೆಯಲ್ಲಿ ಕೇಜ್ರಿವಾಲ್‌ ಅಸಭ್ಯ ವರ್ತನೆ ತೋರಿದ್ದಕ್ಕೆ ಬಿಜೆಪಿ ಖಂಡನೆ

|
Google Oneindia Kannada News

ನವದೆಹಲಿ, ಏಪ್ರಿಲ್ 28 : ಬುಧವಾರ ಪ್ರಧಾನಿ ಮೋದಿ ರಾಜ್ಯಗಳಲ್ಲಿನ ಕೊರೊನಾ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಲು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಸಭೆ ಕರೆದಿದ್ದರು. ಈ ಸಭೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಭಾಗಿಯಾಗಿದ್ದರು. ಆದರೆ, ಪ್ರಧಾನಿ ಮೋದಿ ಕೊರೊನಾ ಸ್ಥಿತಿಗತಿ ಕುರಿತು ಮಾತನಾಡುವ ವೇಳೆ ದೆಹಲಿ ಸಿಎಂ ಕೇಜ್ರಿವಾಲ್‌ ನಡೆದುಕೊಂಡ ವರ್ತನೆಗೆ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಅಲ್ಲದೆ ಮೋದಿ ಭಾಷಣದ ವೇಳೆ ಕೇಜ್ರಿವಾಲ್‌ ಅಶಿಸ್ತು ತೋರಿಸಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ದೇಶದಲ್ಲಿ ಆತಂಕ ಹುಟ್ಟಿಸಿರುವ ಕೊರೊನಾ ನಾಲ್ಕನೇ ಅಲೆ ಕುರಿತು ಪ್ರಧಾನಿ ಮೋದಿ ನಿನ್ನೆ ಎಲ್ಲಾ ರಾಜ್ಯದ ಸಿಎಂಗಳ ಜೊತೆ ಚರ್ಚೆ ನಡೆಸಿದ್ದರು. ಈ ಸಭೆಯಲ್ಲಿ ಭಾಗಿಯಾಗಿದ್ದ ಕೇಜ್ರಿವಾಲ್‌ ಪ್ರಧಾನಿ ಮೋದಿ ಭಾಷಣದ ವೇಳೆ ಅಶಿಸ್ತು ತೋರಿಸಿದ್ದಾರೆ. ಇದು ಒಳ್ಳೆಯ ಸಂಸ್ಕೃತಿ ಅಲ್ಲ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಮಾತನಾಡುವ ವೇಳೆ ಕೇಜ್ರಿವಾಲ್‌ ಕುರ್ಚಿಯಲ್ಲಿ ಆರಾಮಾಗಿ ಹಿಂದಕ್ಕೆ ಒರಗಿ ಕುಳಿತು, ಕೈ ಮೇಲಕ್ಕೆ ಎತ್ತಿ ಮೈ ಮುರಿದಿದ್ದಾರೆ. ಇದು ಪ್ರಧಾನಿ ಭಾಷಣಕ್ಕೆ ಅವಮಾನಿಸಿದಂತೆ ಎಂದು ಬಿಜೆಪಿ ಕಿಡಿಕಾರಿದೆ. ಕೇಜ್ರಿವಾಲ್ ಈ ವರ್ತನೆಗೆ ಬಿಜೆಪಿಯ ಅಮಿತ್ ಮಾಳವಿಯಾ ಕಿಡಿಕಾರಿದ್ದು, ಕೇಜ್ರಿವಾಲ್‌ ತಮ್ಮ ಅಸಭ್ಯ ವರ್ತನೆಯಿಂದ ತಮ್ಮ ಗೌರವವನ್ನೇ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

twitter embed :

ದೆಹಲಿ ಬಿಜೆಪಿ ವಕ್ತಾರ ನವೀನ್‌ ಕುಮಾರ್ ಜಿಂದಾಲ್‌ ಕೇಜ್ರಿವಾಲ್‌ ವರ್ತನೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ಪ್ರಧಾನಿ ಮೋದಿ ಕೊರೊನಾ ಕುರಿತು ಸಭೆ ನಡೆಸುತ್ತಿರುವ ವೇಳೆ ಕೇಜ್ರಿವಾಲ್ ನಡೆದುಕೊಂಡ ಕ್ರಮ ಸರಿಯಿಲ್ಲ. ಅವರು ಯಾವ ಸಂಸ್ಕೃತಿಯನ್ನ ಕಲಿತಿದ್ದಾರೆ. ಪ್ರಧಾನಿ ಮುಂದೆ ಈ ರೀತಿ ವರ್ತನೆ ತೋರುವುದು ಸರಿಯಲ್ಲ, ಕೇಜ್ರಿವಾಲ್ ಒಬ್ಬ ನಾಚಿಗೇಡಿನ ವ್ಯಕ್ತಿ,'' ಎಂದು ಹರಿಹಾಯ್ದಿದ್ದಾರೆ.

BJP Tweets Video of CM Arvind Kejriwal Stretching During Virtual Meet With PM

ಇನ್ನು ಬಿಜೆಪಿ ಯುವ ಮೊರ್ಚಾ ಕೂಡ ಕೇಜ್ರಿವಾಲ್ ಅಸಭ್ಯವಾಗಿ ನಡೆದುಕೊಂಡಿರುವ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಮರ್ಯಾದೆಯಿಲ್ಲದ ಕೇಜ್ರಿವಾಲ್ ಎಂದು ಕ್ಯಾಪ್ಷನ್ ಕೊಟ್ಟಿದೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಪರ ವಿರೋಧದ ಚರ್ಚೆಗಳು ನಡೆಯುತ್ತಿದೆ.

English summary
BJP tweets Video of CM Arvind Kejriwal stretching during virtual meet with PM Modi, says Mannerless CM of Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X