• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಿಎಂ ಕೇರ್ ಫಂಡ್ ಲೆಕ್ಕ ಕೇಳಿದವರಿಗೆ 'ವೆಂಟಿಲೇಟರ್' ತೋರಿಸಿದ ಬಿಜೆಪಿ

|

ದೆಹಲಿ, ಜೂನ್ 16: ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ಕೋಟ್ಯಾಂತರ ಜನರು ದೇಣಿಗೆ ನೀಡಿದ್ದರು. ಜನಸಾಮಾನ್ಯರು, ರಾಜಕಾರಣಿಗಳು, ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಿದ್ದರು.

   ದೇಶದಲ್ಲಿರುವ ಎಲ್ಲಾ ಮುಖ್ಯಮಂತ್ರಿಗಳಿಗೆ ಕರೆಕೊಟ್ಟ ಮೋದಿ | Oneindia Kannada

   ಆದರೆ, ಕೇಂದ್ರ ಸರ್ಕಾರ ಪಿಎಂ ಕೇರ್ ಫಂಡ್ ಬಗ್ಗೆ ಎಲ್ಲಿಯೂ ಮಾಹಿತಿ ನೀಡಿಲ್ಲ. ಈ ಕುರಿತು ವಿಪಕ್ಷಗಳು ಸಹ ಸರ್ಕಾರ ವಿರುದ್ಧ ಟೀಕೆ ಮಾಡಿದರು. ಪಿಎಂ ಕೇರ್ ಫಂಡ್ ಕುರಿತು ವಿವರ ನೀಡಿ ಎಂದು ಒತ್ತಾಯಿಸಿದ್ದರು.

   ಆರೋಗ್ಯ ವಿಮೆ: ಶೀಘ್ರವೇ ಮಾಸಿಕವಾಗಿ ನಿಮ್ಮ ಪ್ರೀಮಿಯಂ ಪಾವತಿ

   ಆದರೆ, ಕೇಂದ್ರ ಸರ್ಕಾರ ಪಿಎಂ ಕೇರ್ ಫಂಡ್ ಕುರಿತು ಅಧಿಕೃತ ಲೆಕ್ಕ ನೀಡಿಲ್ಲ. ಇದೀಗ, ಆಸ್ಪತ್ರೆಗಳಿಗೆ ಅಗತ್ಯವಾಗಿರುವ ವೆಂಟಿಲೇಟರ್‌ಗಳನ್ನು ಖರೀದಿಸುವ ಮೂಲಕ ಪಿಎಂ ಕೇರ್ ಫಂಡ್ ಹಣದ ಬಳಕೆ ಕುರಿತು ಮಾಹಿತಿ ನೀಡಿದೆ. ಪ್ರಧಾನಿ ನಿಧಿ ಹಣದ ಲೆಕ್ಕ ಕೇಳಿದವರಿಗೆ ವೆಂಟಿಲೇಟರ್ ತೋರಿಸಿ ''ಇದು ಸರ್ಕಾರದ ಕಾರ್ಯ'' ಎನ್ನುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿಯ ಈ ನಡೆಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

   50 ಸಾವಿರ ವೆಂಟಿಲೇಟರ್ ಖರೀದಿ

   50 ಸಾವಿರ ವೆಂಟಿಲೇಟರ್ ಖರೀದಿ

   ಪಿಎಂ ಕೇರ್ ಫಂಡ್‌ಗೆ ಸಂಗ್ರಹವಾಗಿದ್ದ ಹಣದಲ್ಲಿ 50 ಸಾವಿರ ವೆಂಟಿಲೇಟರ್ ಖರೀದಿ ಮಾಡಲಾಗಿದೆ ಎಂಬ ವಿಷಯ ಬಹಿರಂಗವಾಗಿದೆ. ವೆಂಟಿಲೇಟರ್ ಖರೀದಿ ಮಾಡಲು ಕೇಂದ್ರ ಸರ್ಕಾರ 2000 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಬ್ಲೂಕ್ರಾಫ್ಟ್ ಸಿಇಓ ಅಖಿಲೇಶ್ ಮಿಶ್ರಾ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದರು. ಅದರಂತೆ ಸೋಮವಾರ ಪಿಎಂ ಕೇರ್ ಫಂಡ್‌ನಲ್ಲಿ ಖರೀದಿ ಮಾಡಿದ ವೆಂಟಿಲೇಟರ್‌ಗಳು ಆಸ್ಪತ್ರೆಯಲ್ಲಿ ಲಭ್ಯವಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

   ಪಿಎಂ ಕೇರ್ ಫಂಡ್ ಲೆಕ್ಕ ಕೇಳುವವರಿಗೆ ಉತ್ತರ ಇಲ್ಲಿದೆ

   ಹೊಸದಾಗಿ ಖರೀದಿ ಮಾಡಿರುವ ಈ ವೆಂಟಿಲೇಟರ್‌ಗಳ ಮೇಲೆ ಪಿಎಂ ಕೇರ್ ಫಂಡ್ ಎಂದು ಸ್ಟಿಕ್ಕರ್ ಪ್ರಿಂಟ್ ಮಾಡಲಾಗಿದೆ. ಸ್ಟಿಕ್ಕರ್ ಹೊಂದಿರುವ ಫೋಟೋಗಳನ್ನು ಬಿಜೆಪಿ ಮುಖಂಡರು ಫೇಸ್‌ಬುಕ್, ಟ್ವಿಟ್ಟರ್‌ಗಳಲ್ಲಿ ಹಂಚಿಕೊಂಡಿದ್ದು, 'ಪಿಎಂ ಕೇರ್ ಫಂಡ್ ಲೆಕ್ಕ ಕೇಳುವವರಿಗೆ ಉತ್ತರ ಇಲ್ಲಿದೆ' ಎಂದು ಟ್ರೆಂಡ್ ಸೃಷ್ಟಿಸಿದ್ದಾರೆ. ರಾಷ್ಟ್ರೀಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಸೇರಿದಂತೆ ಅನೇಕರು ಈ ಫೋಟೋ ಶೇರ್ ಮಾಡಿದ್ದಾರೆ.

   ಒಂದೇ ಫೋಟೋ, ಒಂದೇ ವೆಂಟಿಲೇಟರ್ ಏಕೆ?

   ಕರ್ನಾಟಕ ಆರೋಗ್ಯ ಸಚಿವ ಶ್ರೀರಾಮುಲು ಸಹ ಈ ಫೋಟೋ ಹಂಚಿಕೊಂಡಿದ್ದು, ಜನರು ನೀಡಿದ ಒಂದೊಂದು ರೂಪಾಯಿ ಸಹ ಜನಸೇವೆಗೆ ಮೀಸಲು ಎಂದಿದ್ದಾರೆ. ಇನ್ನು ಬಿಜೆಪಿ ನಾಯಕರು ಈ ಫೋಟೋಗಳನ್ನು ಹಂಚಿಕೊಂಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಯೂ ವ್ಯಕ್ತವಾಗಿದೆ. ಜನರ ಹಣದಿಂದ ಖರೀದಿ ಮಾಡಿ, ಪ್ರಚಾರಕ್ಕಾಗಿ ಅದರ ಮೇಲೆ ಪಿಎಂ ಕೇರ್ ಫಂಡ್ ಎಂದು ಸ್ಟಿಕ್ಕರ್ ಹಾಕಿಸಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಂದೇ ಒಂದು ವೆಂಟಿಲೇಟರ್ ಫೋಟೋವನ್ನು ಎಲ್ಲ ನಾಯಕರು ಪೋಸ್ಟ್ ಮಾಡುತ್ತಿದ್ದಾರೆ. ಇದು ಕೇವಲ ಪ್ರಚಾರಕ್ಕೆ ಸೀಮಿತ ಎಂದಿದ್ದಾರೆ.

   ವೆಂಟಿಲೇಟರ್ ತಯಾರಿಸಿದ್ದು ಬೆಂಗಳೂರಿನ ವೈದ್ಯ

   ಪಿಎಂ ಕೇರ್ ಫಂಡ್, ವೆಂಟಿಲೇಟರ್ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ, ಈ ವೆಂಟಿಲೇಟರ್ ತಯಾರಿಸಿದ್ದು ಬೆಂಗಳೂರು ಮೂಲದ ವೈದ್ಯರು ಎನ್ನುವುದು ಸಂತಸ ತಂದಿದೆ. ಈ ಕುರಿತು ಕಾರ್ಮಿಕ ಇಲಾಖೆಯ ಮಾಜಿ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಟ್ವೀಟ್ ಮಾಡಿದ್ದು ''ಬೆಂಗಳೂರಿನ ಜಗದೀಶ್ ಹಿರೇಮಠ್, ಡಾ. ಆಳ್ವಾ ಅವರನ್ನು ಒಳಗೊಂಡ ತಂಡವೂ ಇದನ್ನು ವಿನ್ಯಾಸಗೊಳಿಸಿ, ಉತ್ಪಾದಿಸಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ'' ಎಂದು ಟ್ವೀಟ್ ಮಾಡಿದ್ದಾರೆ.

   English summary
   BJP says indian government purchased 50 thousand ventilators from PM cares fund. but, netizens are questioning 'why you all sharing only one picture of ventilator.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X